ಕಾವ್ಯ
“ಅಮ್ಮನ ಆಶಾಕಿರಣ” ಕಾವ್ಯ ರಚನೆ ಸುವರ್ಣ ವೆಂಕಟೇಶ
@ಅಮ್ಮನ ಆಶಾಕಿರಣ@
ನವಮಾಸ ನಿನ್ನ ಹೊತ್ತು ನಡೆಯುವಾಗ
ಎನ್ನ ನಡಿಗೆ ದೀಟ ಎಂದಿತು
ಕಂದಾ!!
ಗರ್ಭದಲ್ಲಿನ ನಿನ್ನ ಚಡಪಡಿಸುವಿಕೆ
ಎನ್ನ ಎದೆಯಲ್ಲಿ ಮೂಕ ಮೌನವ
ಮೂರಿದು ಮಾತಾಯಿತು
ಕಂದಾ!!
ವೇದನೆಯಲ್ಲು ನಿನ್ನ
ಮಡಿಲು ತುಂಬಿಸಿಕೊಳ್ಳುವಾಗ
ಕಸೂವು ಇಮ್ಮಡಿಸಿ ಬದುಕನ ಕಳಶ
ಝೇಂಕರಿಸಿತು ಕಂದಾ!!
ಮೊದಲ ತೊದಲ ನುಡಿಯಲ್ಲು
ಕಿರು ಬೆರಳು ಹಿಡಿದು ನಿ ಹೆಜ್ಜೆ ಹಾಕುವಾಗ ಭರವಸೆಯ ಬೆಳಕು
ಚೆಲ್ಲಿತು ಕಂದಾ!!
ಸಸಿಯು ಮರವಾಗಿ ಬೆಳೆದು
ಎನ್ನ ನೆರಳಾಗಿ ನಿಂತಾಗ
ಅಮ್ಮನ ಕನಸು ನನಸಾಯಿತು
ಎಂದ ಎನಿಸಿತು ಕಂದಾ!!
ಪ್ರೀತಿಯ ಅಮಲಿನಲ್ಲಿ
ಎನ್ನ ಕೈ ಬಿಟ್ಟು ನಿ ಓಡುವಾಗ
ಮಮತೆಯ ಒಡಲು ಕಡಲಿನ
ಪಾಲ ಆಯಿತು ಕಂದಾ!!
– ಸುವರ್ಣ ವೆಂಕಟೇಶ
ಯಾದಗಿರಿ.