ಕಾಲ ಭೈರವನಿಗೆ “ನಮೋ” ನಮನ

ಕಾಶಿ ವಿಶ್ವನಾಥ ಕ್ಷೇತ್ರದಲ್ಲಿ ಮೋದಿ
ವಾರಣಾಸಿಃ ಉತ್ರರ ಪ್ರದೇಶದ ವಾರಣಾಸಿ ಕಾಶಿ ವಿಶ್ವನಾಥ ಕ್ಷೇತ್ರ ಪರಿಸರ ಸ್ವಚ್ಛ ಹಾಗೂ ಅಭಿವೃದ್ಧಿ ಪರ್ವ ನಡೆದಿದ್ದು, ಇಡಿ ಕಾಶಿಯ ಗೆಟಪ್ ಚೇಂಜ್ ಆಗಿದೆ. ವಿಶ್ವನಾಥ ಕಾರಿಡಾರ ನಿರ್ಮಾಣ ಮಾಡಿದ್ದು ಇಂದು ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ನಢಯಲಿದೆ.
ಈಗಾಗಲೇ ಕಾಶಿ ಪುಣ್ಯ ಕ್ಷೇತ್ರದಲ್ಲಿ ಮೋದಿ ಬಂದಿಳಿದಿದ್ದು, ಎಲ್ಲವನ್ನು ನೋಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಒಟ್ಟು 800 ಕೋಟಿಯ ಕಾರಿಡಾರ್ ನಿರ್ಮಾಣಕ್ಕೆ ಅನುದಾನ ಕಲ್ಪಿಅಇದ ಮೋದಿ ಕ್ಷೇತ್ರದ ಅಭಿವೃದ್ದಿ ಕುರಿತು ಎಲ್ಲವೂ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದಾರೆ.
ಇದು ಮೋದಿಯ ಕನಸಾಗಿತ್ತು ಎನ್ನಲಾಗಿದೆ ಅಂದಾಜು 5 ಸಾವಿರ ಎಕ್ಟೇರ್ ಪ್ರದೇಶದಲ್ಲಿ ಕಾರಿಡಾರ ನಿರ್ಮಾಣ ವಾಗಿದೆ. ಕಾಲಭೈರವನಿಗೆ ಮೋದಿಯವರು ಶ್ರದ್ಧಾ, ಭಕ್ತಿಯಿಂದ ವಿಶೇಷ ಪೂಜೆ ಅಂಗವಾಗಿ ಆರತಿ ಬೆಳಗಿ ನಮಿಸಿದರು.
ಕೆಲವೇ ಕ್ಷಣಗಳಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನೆ ಮಾಡಲಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ನೀಡಿದ್ದರು. ಇದೀಗ ಲಲಿತಾ ಘಾಟಗೆ ಮೋದಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸಾಧು, ಸಂತರು,ಪ್ರವಾಸಿಗರಿಗೆ ಉಳಿಯಲು ವಸತಿ ಬಿಲ್ಡಿಂಗಗಳ ವ್ಯವಸ್ಥೆ ಇಲ್ಲಿ ಮಾಡಲಾಗಿದೆ.