ಪ್ರಮುಖ ಸುದ್ದಿಸಂಸ್ಕೃತಿ
ದಿಗ್ಗಿ ಸಂಗಮೇಶ್ವರ ಜಾತ್ರೆ : ಸಂಭ್ರಮದ ರಥೋತ್ಸವ
ಬಾನಂಗಳದಿ ಸಿಡಿಮದ್ದಿನ ಅಬ್ಬರ ಭಕ್ತರ ಮನ ಸೆಳೆದ ಬಣ್ಣದ ಚಿತ್ತಾರ
ಯಾದಗಿರಿ,ಶಹಾಪುರಃ ಸಗರನಾಡಿನ ಆರಾಧ್ಯದೇವರಾದ ತಾಲೂಕಿನ ದಿಗ್ಗಿ ಗ್ರಾಮದ ಶ್ರೀ ಸಂಗಮೇಶ್ವರರ ರಥೋತ್ಸವ ಮಂಗಳವಾರ ಸಂಜೆ ಸಂಭ್ರಮದಿಂದ ಜರುಗಿತು. ಸಾವಿರಾರು ಭಕ್ತರ ಜಯಕಾರದ ಮಧ್ಯ ರಥೋತ್ಸವಕ್ಕೆ ಶ್ರೀಕ್ಷೇತ್ರದ ಧರ್ಮದರ್ಶಿ ದೇವಯ್ಯ ಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಶ್ರೀಸಂಗಮೇಶ್ವರ ಮಹಾರಾಜ ಕೀ ಜೈ ಎಂದು ಭಕ್ತ ಸಮೂಹ ಜಯಕಾರ ಹಾಕುತ್ತಿದ್ದಂತೆ ರಥ ಮುಂದೆ ಸಾಗಿತು. ನೆರೆದ ಸಾವಿರಾರು ಭಕ್ತರು ಬಾಳೆಹಣ್ಣು, ಉತ್ತುತ್ತಿ, ಎಸೆದು ತಮ್ಮ ಇಷ್ಟಾರ್ಥ ಈಡೇರಿಕಗೆ ಪ್ರಾರ್ಥನೆ ಸಲ್ಲಿಸಿದರು. ಮಹಾರಾಷ್ಟ್ರ, ಆಂದ್ರ ಸೇರಿದಂತೆ, ವಿಜಯಪುರ, ಸಿಂದಗಿ, ಕಲಬುರ್ಗಿ, ರಾಯಚೂರಿನಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದರು. ರಥೋತ್ಸವ ಮರಳಿ ಮೂಲ ಸ್ಥಾನಕ್ಕೆ ಬರುತ್ತಿದ್ದಂತೆ, ಭಕ್ತಾಧಿಕಗಳಿಂದ ಸಿಡಿಮದ್ದು ಹಾರಿಸಲಾಯಿತು. ಬಾನಂಗಳದಲ್ಲಿ ಸಿಡಿಮದ್ದುಗಳ ಚಿತ್ತಾರ ಕಂಡು ಜಾತ್ರೆಗೆ ಆಗಮಿಸಿದ ಭಕ್ತರು ಖುಷಿ ಪಟ್ಟರು.
I have read so many content regarding the blogger lovers except this paragraph is actually a fastidious paragraph, keep it up.
My site traduttore da italiano