ಅಕ್ರಮ ಮರಳು ರಾತ್ರಿ ಜೆಸಿಬಿ ಸದ್ದು.! ಅಧಿಕಾರಿಗಳ ಜಾಣ ನಿದ್ರೆ.!?
ರಾತ್ರೋರಾತ್ರಿ ಮರಳು ಲೂಟಿಗೆ ಪರ್ಮಿಷನ್ ಕೊಟ್ಟಿದ್ಯಾರು.?

ರಾತ್ರೋರಾತ್ರಿ ಮರಳು ಲೂಟಿಗೆ ಪರ್ಮಿಷನ್ ಕೊಟ್ಟಿದ್ಯಾರು.?
ಅಕ್ರಮ ಮರಳು ಗಣಿಗಾರಿಕೆಗೆ ಅಧಿಕಾರಿಗಳ ಸಾಥ್.!?
ಯಾದಗಿರಿಃ ಹೌದು ಯಾದಗಿರಿ ಜಿಲ್ಲೆಯ ಕೃಷ್ಣಾ ತೀರದಲ್ಲಿ ಮತ್ತೆ ಅವ್ಯಾಹತವಾಗಿ ಮರಳುಗಳ್ಳರಿಂದ ಅಕ್ರಮವಾಗಿ ಮರಳು ದಂಧೆ ನಡೆಯುತ್ತಿದೆ. ಜಿಲ್ಲೆಯ ಕೆಲವು ಪ್ರಮುಖ ಅಧಿಕಾರಿಗಳು, ರಾಜಕೀಯ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ರೆ ಸಾಕು ರಾತೋರಾತ್ರಿ ಹಿಟಾಚಿ, ಜೆಸಿಬಿಗಳು ನದಿಯಯಲ್ಲಿ ಇಳಿದು ಮರಳು ಅಗಿಯುತ್ತವೇ.
ಇನ್ನೂ ಕೆಲವು ಇಲಾಖೆಯ ಮೇಲಧಿಕಾರಿಗಳಿಂದ ಕೆಳ ಹಂತದ ಅಧಿಕಾರಿಗಳು ವರೆಗೂ ಮರಳುಗಳ್ಳರಿಂದ ಸುಮಾರು ಹತ್ತೂ ಲಕ್ಷದವರೆಗೂ ಎಂಎಂ ಪಡೆಯುತ್ತಾರಂತೆ ಈ ಕುರಿತು ಪಕ್ಕಾ
ಮೂಲಗಳಿಂದ ತಿಳಿದುಬಂದಿದೆ…! ಅಧಿಕಾರಿಗಳಿಗೆ ಹಣ ಸಂದಾಯವಾದರೆ ಸಾಕು ಅಕ್ರಮ ಮರಳು ಸಾಗಿಸುವ ಸ್ಥಳಗಳು ಅಧಿಕಾರಿಗಳ ಕಣ್ಣಿಗೆ ಬೀಳುವುದಿಲ್ಲ.
ಜಿಲ್ಲೆಯ ವಡಗೇರಾ ತಾಲೂಕಿನ ಶೀವಪುರ, ಕೊಂಕಲ್ ಹಾಗೂ ಚನ್ನೂರ ಗ್ರಾಮದ ನದಿ ತೀರವೇ ಇದಕ್ಕೆ ಸಾಕ್ಷಿ. ಚನ್ನೂರ ನದಿ ತೀರದಲ್ಲಿ ಫೆ.27 ರ ರಾತ್ರಿ ಅಕ್ರಮವಾಗಿ ಹಿಟಾಚಿ ನದಿಗೆ ಇಳಿದಿದ್ದು, ಅಕ್ರಮವಾಗಿ ಮರಳು ಅಗೆಯುವ ಕೆಲಸ ನಡೆದಿದೆ. ಈ ಕುರಿತು ಗೂಗಲ್ ಫೋಟೋ (ಜಿಪಿಎಸ್ ವ್ಯವಸ್ಥಿತ) ಸೆರೆ ಹಿಡಿಯಲಾಗಿದ್ದು, ಸಮಯ ದಿನಾಂಕದೊಂದಿಗೆ ಸಾಕ್ಷಿ ದೊರೆತಿದೆ.
ಕೆಲ ದಿನಗಳ ಹಿಂದೆ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಅಕ್ರಮ ಮರಳು ದಂಧೆ ಬಗ್ಗೆ ಚರ್ಚೆಯಾದ್ರು ಅಧಿಕಾರಿಗಳು ಈ ವರೆಗೂ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾದ್ರೆ ನಮ್ಮಗೇನು ತೊಂದರೆಯಿಲ್ಲ, ನಮ್ಮ ಪಾಲಿಗೆ ಬರುವದನ್ನು ಬಂದ್ರೆ ಸಾಕು ಬಿಡಿ ಎಂಬ ರೀತಿಯಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲಿನ ಅಧಿಕಾರಿಗಳ ಕಾರ್ಯ ಮುಂದುವರೆದಿದೆ. ಸಾಕಷ್ಟು ದೂರುಗಳು ಕೇಳಿ ಬಂದಾಗ ಮಾಧ್ಯಮದಲ್ಲಿ ಸುದ್ದಿ ಬಂದಾಗ ಕಾಟಚಾರಕ್ಕೆ ನಾಮ್ಕೆವಾಸ್ತೆ ರಸ್ತೆಗಿಳಿದು ಮರಳು ಸಾಗಿಸುವ ಲಾರಿ, ಟಿಪ್ಪರ್ ಹಿಡಿದು ಪ್ರಕರಣ ದಾಖಲಿಸದಂತೆ ಮಾಡುವರು. ಅವರೋ ಕೋರ್ಟಿಗೆ ಹೋಗಿ ಫೈನ್ ಕಟ್ಟಿ ಮತ್ತೆ ಅಕ್ರಮ ಕೆಲಸ ಮುಂದುವರೆಸುವರು ಇದು ಇಲ್ಲಿನ ಅಧಿಕಾರಿಗಳ ಕೆಲಸವಾಗಿದೆ.
ಆದರೆ ಇದುವರೆಗೂ ಅಕ್ರಮವಾಗಿ ನದಿಗೆ ಇಳಿದ ಜೆಸಿಬಿ, ಹಿಟಾಚಿಗಳನ್ನು ಸೀಜ್ ಮಾಡದ ಅಧಿಕಾರಿಗಳು ಟಿಪ್ಪರ್ ಸೀಜ್ ಮಾಡುವ ನಾಟಕವಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಇವರನ್ನು ಕೇಳುವವರು ಯಾರು ಇಲ್ಲದಂತಾಗಿದೆ.
ಕಾರಣ ಆಡಳಿತ ಅಧಿಕಾರಿಗಳು, ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಅಷ್ಟೆ ಅಲ್ಲದೆ ಇದರಲ್ಲಿ ಮಾಧ್ಯಮದವರು ಕೈಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇನ್ನಾದರು ಸಂಬಂದಪಟ್ಟ ಅಧಿಕಾರಿಗಳು ಜಾಣ ನಿದ್ರೆಯಿಂದ ಎದ್ದು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವದು ಕಾದು ನೋಡಬೇಕಿದೆ.
ಕ್ರಾಂತಿ ಪಡೆ ರಚನೆಃ ಅಕ್ರಮ ಮರಳು ದಂದೆಗೆ ಕಡಿವಾಣ ಹಾಕಲು ಜಿಲ್ಲೆಯಲ್ಲಿ ಇದಕ್ಕೊಂದು ಕ್ರಾಂತಿ ಪಡೆ ಸಿದ್ಧವಾಗ್ತಿದ್ದು, ನಾಡಿನ ಅಮೂಲ್ಯ ಸಂಪತ್ತು ಉಳಿವಿಗೆ ಹಗಲು ರಾತ್ರಿ ಹೋರಾಟಕ್ಕೆ ರೂಪರೇಷೆಗಳೊಂದಿಗೆ ಎಲ್ಲಾ ರೀತಿಯಿಂದಲೂ ಯುವಕರ ಪಡೆಯೊಂದು ಸುಸಜ್ಜಿತವಾಗಿ ಸಿದ್ಧವಾಗಿ ಫೀಲ್ಡಿಗೆ ಇಳಿಯಲಿದೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಎದೆಯೊಡ್ಡಿ ನಿಲ್ಲಲಿದೆ. ಕಾನೂನು ಹೋರಾಟಕ್ಕೂ ಮತ್ತು ರಸ್ತೆ, ನದಿಗೆ ಇಳಿದು ಬಲಿಷ್ಠ ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದಕ್ಕೆ ಪ್ರಾಮಾಣಿಕ ಯುವ ಪಡೆ ಕ್ರಾಂತಿಕಾರಿ ಹೆಜ್ಜೆ ಇಟ್ಟು ಅಕ್ರಮ ಮರಳು ದಂಧೆಗೆ ಮುನ್ನುಡಿ ಬರೆಯಲಿದೆ ಎಂಬ ಸುಳಿವು ದೊರೆತಿದ್ದು ಯಾವದಕ್ಕೂ ಕಾದು ನೋಡಬೇಕಿದೆ.
–ವರದಿ ಸತೀಶ ಮೂಲಿಮನಿ