ಮಸ್ಕಿಃ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಮತ ಬೇಟೆ
ಮಸ್ಕಿಃ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಮತ ಬೇಟೆ
ಮಸ್ಕಿಃ ಉಪ ಚುನಾವಣೆ ಹಿನ್ನೆಲೆ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್ ನೇತೃತ್ವದಲ್ಲಿ ಮಸ್ಕಿ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡುವಂತೆ ಪ್ರಚಾರ ಕಾರ್ಯಕೈಗೊಂಡರು.
ಕ್ಷೇತ್ರದಾದ್ಯಂತ ಬಂಧುಗಳು, ಸ್ನೇಹಿತರು ಪರಿಚಿತರನ್ನು ಭೇಟಿ ಮಾಡಿ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀನಿವಾಸರಡ್ಡಿ ಕಂದಕೂರ, ಯಾದಗಿರಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳ್ಳಂಡಿಗೇರಿ, ಶಿವಮಹಾಂತ ಚಂದಾಪುರ, ರಾಘವೇಂದ್ರ ಮಾನಸಗಲ್ ಇತರರು ಇದ್ದರು.
ಮಸ್ಕಿಯಲ್ಕಿ ಕಾಂಗ್ರೆಸ್ ಗೆಲುವು ಖಚಿತ- ಉಳ್ಳಂಡಿಗೇರಿ
ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನರ ಒಲವಿದ್ದು, ಅತ್ಯಂತ ಬಹುಮತದಿಂದ ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿಯಿಂದ ಸ್ಪರ್ಧಿಸಿರುವ ಪ್ರತಾಪಗೌಡ ಅಧಿಕಾರದ ಆಸೆಗಾಗಿ ಏನಾದರೂ ಮಾಡಲು ತಯ್ಯಾರಿದ್ದು, ಜನರು ಪ್ರತಾಪಗೌಡ ನಡೆ ಸರಿಯಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಸುಲಭವಾಗಿದೆ.
–ಮಲ್ಲಪ್ಪ ಉಳ್ಳಂಡಿಗೇರಿ