ಕಾವ್ಯಮಹಿಳಾ ವಾಣಿ
ಅಮ್ಮನ ಹಾಲು ಅಮೃತವಮ್ಮ…
ಆಧುನಿಕತೆಯ ಸೋಗಿನಲ್ಲಿ
ಬಾಟಲಿ ಹಾಲು ಕುಡಿಸದಿರಿ
ಮಗುವಿನ ಬಾಳು-
ಹಾಳುಗೆಡವದಿರಿ ಅಮ್ಮ
ಅಮ್ಮನ ಹಾಲು ಅಮೃತವೆಂಬುದು
ಮರೆಯದಿರಿ ಅಮ್ಮ,
ಹಸುಕಂದನಿಗೆ ಮೊಲೆಹಾಲುಣ್ಣಿಸುವುದು
ಮರೆಯದಿರಿ
ಹಾಲುಣ್ಣಿಸಿದರೆ ಅಂದಗೆಡುವುದೆಂಬ
ಭ್ರಮೆಯಿಂದ ಹೊರಬಂದು:
ಮಮತೆಯಿಂದ ಮಗುವಿಗೆ
ಹಾಲುಣ್ಣಿಸಲು ಮುಂದಾಗಿರಿಂದು
ಬಿಡಿವಿರದ ದುಡಿತದಲ್ಲಿ
ಬಲಿಯಾಗದಿರಲಿ ಮಗುವು
ತಾಯಿ ಹಾಲು ಸವಿದು
ಆರೋಗ್ಯದಿ ಹೊರಹೊಮ್ಮಲಿ ನಗುವು…
-ವಿನಾಯಕ ಮುದನೂರ್
ತಾಯಿಯ ಋಣ ದೊಡ್ಡದು
ಎಸ್..