ಮೊಟ್ಟೆ ಎಸೆಯಲು ಡಿಕೆಶಿ ಸೂಚನೆ – ಕಟೀಲು ಬಾಂಬ್
ಮೊಟ್ಟೆ ಎಸೆದಾತ ಕಾಂಗ್ರೆಸ್ ಕಾರ್ಯಕರ್ತ
ವಿವಿ ಡೆಸ್ಕ್ಃ ಕೊಡಗಿನಲ್ಲಿ ವಿಪಕ್ಷ ನಾಯಕ ಸಿದ್ರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದ ಸಂಪತ್ ಕಾಂಗ್ರೆಸ್ ಕಾರ್ಯಕರ್ತನಾದ್ದು, ಡಿಕೆಶಿ ಸೂಚನೆ ಮೇರೆಗೆ ಮೊಟ್ಟೆ ಎಸೆದಿದ್ದಾನೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಮೊಟ್ಟೆ ಎಸೆದ ಸಂಪತ್ RSS ಪಥಸಂಚಲನದಲ್ಲಿ ಭಾಗವಹಿಸಿದ್ದ ಸಂಪತ್ ಫೋಟೊ ಶೇರ್ ಮಾಡುವ ಮೂಲಕ ಬಿಜೆಪಿಗರಿಗೆ ಕೌಂಟರ್ ಕೊಟ್ಟಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳ ಮಧ್ಯ ಮೊಟ್ಟೆ ಪ್ರಕರಣ ಆರೋಪ ಪ್ರತ್ಯಾರೋಪ ಜೋರಾಗಿಯೇ ನಡೆದಿದ್ದು, ಇದೇ 26 ರಂದು ಮಡಿಕೇರಿ ಚಲೋ ಕಾರ್ಯಕ್ರಮವನ್ನು ಎರಡು ಪಕ್ಷಗಳ ನಾಯಕರು ಹಮ್ಮಿಕೊಂಡಿದ್ದು, ಅಂದು ಮಡಿಕೇರಿಯಲ್ಲಿ ಮೊಟ್ಟೆ ಯುದ್ಧವೇ ನಡೆಯಲಿದೆ.
ತಾರಕಕ್ಕೇರಿದ ಮೊಟ್ಟೆ ಯುದ್ಧ ಶಾಂತತೆ ಕಾಪಾಡಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಮೊಟ್ಟೆ ಕೇಸ್ ಒಟ್ಟಾರೇ ಚುನಾವಣಾ ರಾಜಕೀಯ ರಂಗಕ್ಕೆ ಎಂಟ್ರಿಯಾಗಿದೆ.