ಪ್ರಮುಖ ಸುದ್ದಿ
ಬೆಂಗಳೂರಿನಲ್ಲಿ 4 ನೇ ವ್ಯಕ್ತಿಗೆ ಓಮಿಕ್ರಾನ್ ವೈರಸ್ ಪತ್ತೆ
ಓಮಿಕ್ರಾನ್ ಕುರಿತು ಮುಂಜಾಗೃತ ಅಗತ್ಯ
ಬೆಂಗಳೂರಃ ನಗರದಲ್ಲಿ ನಾಲ್ಕನೇಯ ವ್ಯಕ್ತಿಗೆ ಓಮಿಕ್ರಾನ್ ವೈರಸ್ ದೃಢವಾಗಿರುವ ಶಂಕೆ ವ್ಯಕ್ತವಾಗಿದೆ. ಹೈ ರಿಸ್ಕ್ ದೇಶದಿಂದ ಬಂದ ವ್ಯಕ್ತಿಯೋವರಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಆದರೆ ಇದು ಹೊಸ ವೈರಸ್ ಎಂಬುದು ದೃಡಪಟ್ಟಿರುವದಿಲ್ಲ ಎಂದು ಮೂಲಗಳು ತಿಳಿಸಿವೆ.
ಪಾಸಿಟಿವ್ ಬಂದ ವ್ಯಕ್ತಿಯನ್ನು ಇಲ್ಲಿನ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ಮೂರು ಮಂದಿ ವೈರಸ್ ನಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಯಾವುದೇ ರೋಗ ಲಕ್ಷಣಗಳು ಕಂಡು ಬಂದಿರುವದಿಲ್ಲ. ಈ ಮೊದಲು ದಕ್ಷಿಣ ಆಫ್ರಿಕಾದಿಂದ ಇಬ್ಬರಿಗೆ ಓಮಿಕ್ರಾನ್ ದೃಢವಿಲ್ಲ ಎನ್ನಲಾಗಿತ್ತು, ಆದರೆ ಪರೀಕ್ಷಾ ವರದಿ ಬಂದ ಮೇಲೆ ಓಮಿಕ್ರಾನ್ ದೃಢವಾಗಿದ್ದು ಸ್ಪಷ್ಟವಾಗಿತ್ತು.