ಪ್ರಮುಖ ಸುದ್ದಿ
ಪೊಲೀಸ್ಃ ವಾರದ ರಜೆ ಕಡ್ಡಾಯ – ಡಿಜಿಪಿ ಸುತ್ತೋಲೆ
ಪೊಲೀಸ್ಃ ವಾರದ ರಜೆ ಕಡ್ಡಾಯ – ಡಿಜಿಪಿ ಸುತ್ತೋಲೆ
ವಿವಿ ಡೆಸ್ಕ್ಃ ವಾರದ ರಜೆ ಇದ್ದರೂ ಹಲವಡೆ ಠಾಣಾಧಿಕಾರಿಗಳು ರಜೆ ಕೊಡದೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸುತ್ತಿರುವ ಕಾರಣ ಸಾಕಷ್ಟು ಕಡೆ ಘರ್ಷಣೆಗಳೇ ನಡೆದಿವೆ ಕೆಲವಡೆ ಜೀವಹಾನಿಯಂಥ ಘಟನೆಗಳು ನಡೆದು ಹೋಗಿವೆ.
ಹೀಗಾಗಿ ರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಅವರು ಪೊಲೀಸರಿಗೆ ವಾರಕ್ಕೊಂದು ರಜೆ ಕಡ್ಡಾಯವಾಗಿ ನೀಡಬೇಕೆಂದು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ಪೊಲೀಸರಿಂದ ವಾರದ ರಜೆ ನೀಡುತ್ತಿಲ್ಲವೆಂದು ಸಾಕಷ್ಟು ದೂರುಗಳು ಬಂದಿದ್ದರಿಂದ ಈ ಕುರಿತು ವಾರದ ರಜೆ ಕಡ್ಡಾಯವಾಗಿ ನೀಡಿ ಎಂದು ಠಾಣಾಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.