ಬಸವಭಕ್ತಿವಿನಯ ವಿಶೇಷ

ವಿನಯವಾಣಿಯಲ್ಲಿ ಓದಿ ಶರ್ಮಾ ಅವರ ಭವಿಷ್ಯ ವಾಣಿ

ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಭರಣಿ
ಋತು : ಗ್ರೀಷ್ಮ
ರಾಹುಕಾಲ 09:20 – 10:58
ಗುಳಿಕ ಕಾಲ 06:05 – 07:42
ಸೂರ್ಯೋದಯ 06:04:44
ಸೂರ್ಯಾಸ್ತ 19:06:02
ತಿಥಿ : ಏಕಾದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಕಾರ್ಯಗಳಲ್ಲಿ ನಿರಾಶಾದಾಯಕ ಬೆಳವಣಿಗೆ ಕಂಡುಬರಲಿದೆ. ನಿಮ್ಮ ಬೇಡಿಕೆಗಳನ್ನು ಪೂರೈಸಲು ಕುಟುಂಬದವರು ಒಪ್ಪುವ ಸಾಧ್ಯತೆ ಇದೆ. ಪ್ರೇಮ ವಿಚಾರಗಳಲ್ಲಿ ಸಂಕಷ್ಟ ಬರಬಹುದಾಗಿದೆ. ಲೇವಾದೇವಿ ವ್ಯವಹಾರದಿಂದ ನಷ್ಟ ಸಾಧ್ಯತೆ. ದೈವ ಸಂಕಲ್ಪದ ಮೊರೆಹೋಗುವ ನಿರ್ಧಾರ ತೆಗೆದುಕೊಳ್ಳುವಿರಿ. ಹಣಕಾಸಿನ ವ್ಯವಸ್ಥೆಯಲ್ಲಿ ಮಂದಗತಿಯ ಸ್ಥಿತಿ ಕಾಣಬಹುದು. ಕೆಲಸದಲ್ಲಿ ಹೆಚ್ಚಿನ ವಿಳಂಬ ಆಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ವೃಷಭ ರಾಶಿ
ಸಂಗಾತಿಯ ಮನೆ ಕಡೆಯಿಂದ ಉಪಯುಕ್ತವಾಗುವ ಕಾರ್ಯಕ್ರಮಗಳು ಜರುಗಲಿದೆ. ಪ್ರಾರಂಭಿಕ ಹಂತದ ನಿಮ್ಮ ಉದ್ಯೋಗವೂ ಉತ್ತಮ ನಿರೀಕ್ಷೆ ತಂದುಕೊಡಲಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿ ಕಾಣಲಿದ್ದೀರಿ. ಸಭೆ-ಸಮಾರಂಭಗಳಲ್ಲಿ ಅಥವಾ ಸಂತೋಷ ಕೂಟಗಳಲ್ಲಿ ದಿಡೀರನೆ ಸಮಸ್ಯೆ ಪ್ರತ್ಯಕ್ಷ ವಾಗಬಹುದು ಎಚ್ಚರವಿರಲಿ. ನಿಮ್ಮ ವ್ಯಕ್ತಿತ್ವ ಹಾಗೂ ವರ್ಚಸ್ಸನ್ನು ಕಂಡು ಹಲವರು ಕೊರಗಬಹುದು ಅಂತಹವರನ್ನು ಅಲಕ್ಷಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕುಟುಂಬದಲ್ಲಿ ಉದ್ಭವವಾಗುವ ಸಣ್ಣ ಜಗಳವನ್ನು ದೊಡ್ಡದು ಮಾಡಬೇಡಿ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಾರ್ಯಕ್ರಮವನ್ನು ರೂಪಿಸಿಕೊಳ್ಳಿ. ಮದುವೆಯ ಶುಭ ಸುದ್ದಿ ನಿಮಗೆ ಸಂತೋಷ ತರಲಿದೆ. ನಿಮ್ಮ ಬಹುದಿನದ ಮನದ ಕಾರ್ಯಕ್ರಮವು ಸಕಾರಾತ್ಮಕವಾಗಿ ಕಾರ್ಯಶೀಲವಾಗುವ ಸುದಿನವಿದು. ಹಿರಿಯರ ಉಪಯುಕ್ತ ಸಲಹೆಗಳಿಂದ ಹಾಗೂ ಅವರ ಇಚ್ಛಾನುಸಾರ ದುಡಿಮೆಯ ದಾರಿ ಕಂಡುಕೊಳ್ಳುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಕುಟುಂಬಕ್ಕಾಗಿ ಹೆಚ್ಚಿನ ಹಣಕಾಸು ವ್ಯಯವಾಗುವ ಸಾಧ್ಯತೆ ಕಂಡು ಬರಲಿದೆ. ಖರ್ಚುಗಳನ್ನು ಮಾಡುವಾಗ ಅದರ ಉಪಯುಕ್ತತೆ ಏನು ಎಂಬುದಾಗಿ ಅರಿತು ಮಾಡಿ. ಆರ್ಥಿಕ ಸಂಗ್ರಹಣೆ ಹಾಗೂ ಅದರ ಹೂಡಿಕೆ ಬಗ್ಗೆ ವಿಶೇಷ ಜ್ಞಾನ ಪಡೆದುಕೊಳ್ಳಿ. ಉದ್ಯೋಗವಕಾಶಗಳು ಹೇರಳವಾಗಿ ಕಾಣಸಿಗಲಿದೆ. ಆರ್ಥಿಕ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಕಂಡುಬರಲಿದೆ. ನಿಮ್ಮ ಜ್ಞಾನ ದಿಂದ ಸಲಹೆ ಕೇಳಿಬರುವ ಜನರನ್ನು ಉತ್ತಮ ಸ್ಪಂದನೆ ನೀಡುವಿರಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಸಿಂಹ ರಾಶಿ
ನಯವಾಗಿ ಮಾತನಾಡಿ ನಿಮ್ಮ ಯೋಜನೆಯಲ್ಲಿ ಅತಿಕ್ರಮ ಪ್ರವೇಶಿಸಬಹುದು ಹಾಗೂ ಆರ್ಥಿಕವಾಗಿ ನಷ್ಟ ಮಾಡಬಹುದು ಎಚ್ಚರವಿರಲಿ. ಮೋಸದ ಜಾಲದ ವಿಷವರ್ತುಲ ನಿಮ್ಮ ಹಿಂದೆ ಸುತ್ತಲಿದೆ ಜಾಗ್ರತೆ ಇರಲಿ. ನಿಮ್ಮ ಉದ್ದಿಮೆಯನ್ನು ವಿಸ್ತರಣೆ ಮಾಡಲು ಪ್ರಯತ್ನಿಸಿ. ಉದ್ಯೋಗದಲ್ಲಿ ಯಾರನ್ನು ಸಹ ವಿನಾಕಾರಣ ಎದುರುಹಾಕಿಕೊಳ್ಳಲು ಹೋಗಬೇಡಿ. ವ್ಯವಹಾರದಲ್ಲಿ ಜಾಣ್ಮೆ ಇರಲಿ. ನಿಮ್ಮ ಆತ್ಮೀಯ ವರ್ಗದವರು ನಿಮ್ಮ ಕೆಲಸಗಳಿಗೆ ಸಹಾಯ ನೀಡುವರು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಿದ್ದೀರಿ ಇದರಿಂದ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಶೈಕ್ಷಣಿಕ ವಿದ್ಯಾರ್ಥಿಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ. ನೌಕರಿಯ ವಿಷಯದಲ್ಲಿ ನಿಮ್ಮ ಪ್ರತಿಯೊಂದು ಕಾರ್ಯವೂ ಸಾಧನೆಗೆ ಪ್ರೇರಣೆ ನೀಡಲಿದೆ. ವ್ಯವಹಾರಸ್ಥರಿಗೆ ಉತ್ತಮವಾದ ದಿನವಿದು. ಕುಟುಂಬಸ್ಥರೊಡನೆ ಚುಟುಕು ಪ್ರವಾಸ ಕೈಗೊಳ್ಳುವ ಸಾಧ್ಯತೆ ಕಾಣಬಹುದು. ನಿಮ್ಮ ಯೋಜನೆಗಳಿಗೆ ಆತ್ಮೀಯರು ಸಕಾಲದಲ್ಲಿ ಸಹಾಯಕ್ಕೆ ಬರುತ್ತಾರೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ತುಲಾ ರಾಶಿ
ಅತಿ ಹೆಚ್ಚು ಹಣಕಾಸಿನಲ್ಲಿ ವೆಚ್ಚವಾಗುವ ಯೋಜನೆಗಳನ್ನು ಆದಷ್ಟು ನಿಗಾಯಿಟ್ಟು ಮಾಡಿ. ಬಾಕಿ ಹಣಕಾಸಿನ ಲೆಕ್ಕ ಚುಕ್ತಾ ಆಗಲಿದೆ. ಮನೆಗೆ ಸ್ನೇಹಿತರು ನೆಂಟರ ಆಗಮನದಿಂದ ಸಂತೋಷದಾಯಕ ವಾತಾವರಣ ಇರಲಿದೆ. ನಿಮ್ಮ ಬಹುದಿನದ ನಷ್ಟ ಅಥವಾ ನಿರಾಸಕ್ತಿಯಿಂದ ಸಾಗುತ್ತಿರುವ ಕಾರ್ಯಗಳು ಇಂದು ಪುಟಿದೆದ್ದು ಲಾಭಾಂಶ ತರಲಿದೆ. ವ್ಯವಹಾರದಲ್ಲಿ ನಿಮ್ಮ ಚಾಣಾಕ್ಷತನ ತುಂಬಾ ಸ್ಪೂರ್ತಿದಾಯಕವಾಗಿ ಕಂಡುಬರಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ವೃಚ್ಚಿಕ ರಾಶಿ
ಹೆಚ್ಚು ಸಮಯ ತೆಗೆದುಕೊಂಡು ತೀರಾ ಮುತುವರ್ಜಿಯಿಂದ ಮಾಡಿರುವ ಕೆಲಸವು ನಿಮ್ಮ ಮನಸ್ಸಂತೋಷಗೊಳಿಸಲಿದೆ. ಕೆಲಸದಲ್ಲಿ ಆಯಾಸ ಅಥವಾ ಆಲಸ್ಯತನ ಎರಡನ್ನು ತೆಗೆದುಹಾಕಿ. ಯೋಜಿತ ಕಾರ್ಯಗಳಿಗೆ ನಿರೀಕ್ಷಿಸಿದ ಬೆಂಬಲ ಸಿಗದೆ ನಿರಾಶರಾಗುವಿರಿ. ಚಿಂತೆ ಮಾಡುವ ಅಗತ್ಯವಿಲ್ಲ ಎಲ್ಲವೂ ಸರಿ ಹೋಗುತ್ತದೆ. ನಿಮ್ಮ ವಿರುದ್ಧ ಅಪನಿಂದನೆ ಅಪಹಾಸ್ಯಗಳು ಕೇಳುವ ಸ್ಥಿತಿ ಬರಬಹುದು. ನಿಮ್ಮ ಮನಸ್ಸಿನ ದೃಢ ಸಂಕಲ್ಪದಿಂದ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ಕೆಲಸದಲ್ಲಿ ತೊಂದರೆ ನೀಡುವ ಸಾಧ್ಯತೆಗಳು ಕಂಡುಬರಲಿದೆ. ಕೆಲವರು ತಮ್ಮ ಪಟ್ಟಭದ್ರ ಹಿತಾಸಕ್ತಿಗೆ ನಿಮ್ಮನ್ನು ದಾಳವಾಗಿ ಉಪಯೋಗಿಸಿಕೊಳ್ಳಬಹುದು ಎಚ್ಚರವಿರಲಿ. ಆರ್ಥಿಕ ವ್ಯವಹಾರವನ್ನು ಆದಷ್ಟು ಸಾಕ್ಷಾಧಾರದ ಸಮೇತವಾಗಿ ಮಾಡುವುದು ಒಳ್ಳೆಯದು. ಮನೆಯ ಕೆಲವು ಕಾರ್ಯಕ್ರಮಗಳನ್ನು ತಪ್ಪದೇ ಪಾಲುಗೊಳ್ಳಿ. ಸಂಗಾತಿಯಿಂದ ಬೇಡಿಕೆಗಳ ಸುರಿಮಳೆ ಬರಲಿದೆ ಅವರ ಸಣ್ಣ ಇಷ್ಟಾರ್ಥಗಳನ್ನು ನೆರವೇರಿಸಲು ಪ್ರಯತ್ನಪಡಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಮನೆಯ ವಸ್ತುಗಳನ್ನು ಬದಲಾಯಿಸುವ ಯೋಜನೆ ನಿಮ್ಮ ಮನದಲ್ಲಿ ಇರಲಿದೆ. ಕಳೆದುಹೋಗಿರುವ ವಸ್ತುಗಳು ಇಂದು ಸಿಗುವ ಅವಕಾಶವಿದೆ. ನಿಮ್ಮಲ್ಲಿರುವ ಆಗಾಧ ಪ್ರತಿಭೆಯು ಜನಮನ್ನಣೆಗೆ ಪಾತ್ರವಾಗಲಿದೆ. ನಿಮ್ಮ ಕಲಾವಂತಿಕೆಯು ಉತ್ತಮ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಆರ್ಥಿಕ ವಿಷಯದಲ್ಲಿ ಉತ್ತಮ ಕ್ರಿಯೆಗಳನ್ನು ಕಾಣಬಹುದು. ಸಂಗಾತಿಯ ಪ್ರೇಮ ಭರಿತ ಮಾತುಗಳು ವಿನೂತನ ಅನುಭವ ತರಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಕುಂಭ ರಾಶಿ
ರಂಜನೀಯ ವಾದಂತಹ ಚಟುವಟಿಕೆಗಳಲ್ಲಿ ಇಂದು ಪಾಲ್ಗೊಳ್ಳುವಿರಿ. ನಿಮ್ಮ ನಿರೀಕ್ಷಿತ ಕಾರ್ಯಗಳಲ್ಲಿ ಜಯದ ಮುದ್ರೆ ಕಾಣಬಹುದು. ಧೈರ್ಯೆ ಸಾಹಸೇ ಲಕ್ಷ್ಮಿ ಎಂಬ ವಾಕ್ಯದಂತೆ ಸಾಧನೆಯ ಪರ್ವ ಕಂಡುಬರಲಿದೆ. ಮಾತಿನ ಚತುರತೆಯಿಂದ ಉನ್ನತವಾದ ಯೋಜನೆಗಳನ್ನು ನಿಮ್ಮ ತೆಕ್ಕೆಗೆ ಸರಾಗವಾಗಿ ಪಡೆಯುತ್ತೀರಿ. ಲಾಭಾಂಶದ ಪ್ರಯಾಣ ಮಾಡುವ ಸನ್ನಿವೇಶ ಎದುರಾಗಬಹುದು. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ನಿಮ್ಮ ಸಂಘ ಜೀವನದಿಂದ ಉನ್ನತ ವ್ಯಕ್ತಿಗಳ ಒಡನಾಟ ಸಂಪಾದಿಸುತ್ತೀರಿ. ಆರ್ಥಿಕ ವಿಷಯವನ್ನು ಆದಷ್ಟು ನಗಣ್ಯ ಮಾಡದೆ ಅದರ ಪೂರ್ವಾಪರವನ್ನು ತಿಳಿದುಕೊಳ್ಳಿ. ಸಂಗಾತಿಯ ಪ್ರೇರಣೆ ಅವರ ಅನನ್ಯ ಪ್ರೇಮವು ನಿಮ್ಮ ಗೆಲುವಿಗೆ ಶಕ್ತಿ ತುಂಬಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಶತ್ರು ಸಂಪಾದನೆ ನಿಮಗೆ ಬಂದಂತಹ ಬಳುವಳಿ ಆಗಿರಬಹುದು, ಸುಖಾಸುಮ್ಮನೆ ನಿಮ್ಮ ವಿರುದ್ಧ ಕುತಂತ್ರಗಳು ನಡೆಸುವ ಸಾಧ್ಯತೆ ಕಂಡುಬರುತ್ತದೆ. ನೀವು ಇಂದು ಶಾಂತ ಮನಸ್ಕರಾಗಿ ಕೆಲಸದಲ್ಲಿ ಪಾಲ್ಗೊಳ್ಳಿ. ಕೆಲವರು ನೀಡುವ ಪ್ರಚೋದನೆಗೆ ಬಲಿಯಾಗಬೇಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಿ. ನಿಮ್ಮ ಮಾನಸಿಕ ಖಿನ್ನತೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ. ಹಿರಿಯರನ್ನು ಗೌರವಧಾರದಿಂದ ಕಾಣುವುದರಿಂದ ನಿಮ್ಮ ವ್ಯಕ್ತಿತ್ವ ವೃದ್ಧಿಯಾಗುತ್ತದೆ. ಮನಸ್ಸು ಮರ್ಕಟ ವಿದ್ದಂತೆ ಅದನ್ನು ಎಲ್ಲೆಂದರಲ್ಲಿ ಹರಿಯ ಬಿಡಬೇಡಿ. ಹಣಕಾಸು ದುಂದುವೆಚ್ಚ ಮಾಡದೆ ಉಳಿತಾಯಕ್ಕೆ ವಿನಿಯೋಗಿಸುವುದು ಒಳ್ಳೆಯದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button