ಪ್ರಮುಖ ಸುದ್ದಿ

ನಟ ಪುನೀತ್ ಗೆ ಕನ್ನಡ ಪರ ಸಂಘಟನೆಗಳಿಂದ ಭಾವಪೂರ್ಣ ಶ್ರದ್ಧಾಂಜಲಿ

ನಟ ಪುನೀತ್ ಗೆ ಕನ್ನಡ ಪರ ಸಂಘಟನೆಗಳಿಂದ ಭಾವಪೂರ್ಣ ಶ್ರದ್ಧಾಂಜಲಿ

Yadgiri, ಶಹಾಪುರಃ ಬಾರದ ಲೋಕಕ್ಕೆ ತೆರಳಿದ ಕನ್ನಡ ಸಿನಿರಂಗದ ಮೇರು ನಟ ಪುನೀತ್ ರಾಜಕುಮಾರ ಅವರಿಗೆ ನಗರದ ಬಸವೇಶ್ವರ ವೃತ್ತದಲ್ಲಿ ಕನ್ನಡಪರ ಸಂಘಟನೆಗಳು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದವು.

ಚಿತ್ರರಂಗದಲ್ಲಿ ಅಪ್ರತಿಮ ಸಾಧಕ ಅಲ್ಲದೆ ನಾಡಿನ ಜನರ ಸೇವೆಗೆ ತಾನೂ ದುಡಿದ ಹಣದಲ್ಲಿಯೇ ಸ್ವಲ್ಪ ಮೀಸಲಿಟ್ಟ ಪ್ರತಿಭಾವಂತ, ಕೊರೊನಾ ಸಂದರ್ಭದಲ್ಲೂ ಜನರ ಆರೋಗ್ಯದ ಹಿತಕ್ಕಾಗಿ ಆಗಿನ ಸಿಎಂ ಯಡಿಯೂರಪ್ಪನವರಿಗೆ 40 ಲಕ್ಷ ರೂ. ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.

ಇಂತಹ ಅಪರೂಪದ ನಟ ಪುನೀತ್ ಇಲ್ಲ ಎನ್ನುವದು ತುಂಬ ನೋವು ತರಿಸುತ್ತಿದೆ ಎಂದು ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ ಪ್ರಮುಖರು ಶೋಕ ವ್ಯಕ್ತಪಡಿಸಿದರು.

ಪುನೀತ್ ಇಲ್ಲದ ಕನ್ನಡ ಚಿತ್ರ ರಂಗ ಬಡವಾಗಿದೆ ಎಂದ ಹಲವರು, ಪುನೀತ್ ಅವರು ನಾಡಿನಲ್ಲಿ ಅಪಾರ ಸಮಾಜ ಸೇವೆ ಕೈಗೊಂಡಿದ್ದರೂ ಆ ಕುರಿತು ಅವರು ಎಲ್ಲೂ ಪ್ರಚಾರಗಿಟ್ಟಿಸಿಕೊಂಡಿಲ್ಲ. ಇದು ಅವರಲ್ಲಿರುವ ಮೇರುಗುಣಕ್ಕೆ ಸಾಕ್ಷಿ. ಪುನೀತ್ ಅವರು ನಾಡಿನ ಆಸ್ತಿಯಾಗಿದ್ದರೂ ಅವರಿಲ್ಲದ ನಾಡು ದುಃಖದಲ್ಲಿ ಮುಳುಗಿದೆ. ದೇವರು ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕನ್ನಡ ಸೇನೆ ಈಶಾನ್ಯ ಸಂಘಟನಾ ಕಾರ್ಯದರ್ಶಿ, ಕರವೇ ತಾಲೂಕು ಅಧ್ಯಕ್ಷ ಭೀಮು ಶಖಾಪುರ, ಮೌನೇಶ ಹಳಿಸಗರ, ವೆಂಕಟೇಶ ಬೋನೇರ್, ಸಿದ್ದು ಭಗತ್ ಸಿಂಗ್ ಇತರರಿದ್ದರು. ಮುಂಚಿತವಾಗಿ ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ‌ ಪುನೀತ್ ಅವರ ಆತ್ಮಕ್ಕೆ ಶಾಂತಿ ಕೋರಿದರು.

Related Articles

Leave a Reply

Your email address will not be published. Required fields are marked *

Back to top button