ಪ್ರಮುಖ ಸುದ್ದಿ
ಕೇರಳಃ RSS ಕಾರ್ಯಕರ್ತನ ಹತ್ಯೆ- 8 ಜನ SDPI ಕಾರ್ಯಕರ್ತರ ಬಂಧನ
ಕೇರಳಃ RSS ಕಾರ್ಯಕರ್ತನ ಹತ್ಯೆ- 8 ಜನ SDPI ಕಾರ್ಯಕರ್ತರ ಬಂಧನ
ಕೇರಳಃ ರಾಜ್ಯದ ಆಲಪ್ಪುಳ ಜಿಲ್ಲೆಯ ಚೆರ್ತಲಾ ಸಮೀಪದ ನಾಗಮಕುಲಂಗರದಲ್ಲಿ ಎಸ್ಡಿಪಿಐ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಮಧ್ಯ ಬುಧವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನೋರ್ವ ಮೃತಪಟ್ಟಿದ್ದು, ಎರಡು ಗುಂಪಿನ ಕಡೆ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಡಿಪಿಐನ 6 ಕಾರ್ಯಕರ್ತರನ್ನು ಪೊಲೀಸರು ಇಂದು ಬಂಧಿಸಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ. ಸಂಘದ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ ಗುರುವಾರ ಬೆಳಗ್ಗೆಯಿಂದಲೇ ಪ್ರತಿಭಟನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.