ಪ್ರಮುಖ ಸುದ್ದಿ
ಸೇಂಟ್ ಪೀಟರ್ ನಲ್ಲಿ ವಿಶ್ವ ಸಂತ ವಿವೇಕರ ಜಯಂತ್ಯುತ್ಸವ
ಸೇಂಟ್ ಪೀಟರ್ ನಲ್ಲಿ ವಿಶ್ವ ಸಂತ ವಿವೇಕರ ಜಯಂತ್ಯುತ್ಸವ
ಶಹಾಪುರಃ ಸ್ವಾಮಿ ವಿವೇಕಾನಂದರು ಪ್ರಪಂಚ ಕಂಡ ಶ್ರೇಷ್ಠ ಜ್ಞಾನಿ, ಆಧ್ಯಾತ್ಮಿಕ ಚಿಂತಕ ಎಂದು ಸೇಂಟ್ ಪೀಟರ್ ಶಾಲೆ ಮುಖ್ಯಗುರು ಮಾತೆ ಸಿಸ್ಟರ್ ರೀನಾ ತಿಳಿಸಿದರು.
ಅವರು ಶಾಲೆಯಲ್ಲಿ ಮಂಗಳವಾರ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಅಪಾರ ಜ್ಞಾನ ಸಂಪತ್ತು ಹೊಂದಿದ್ದರು. ಅವರ ಆಚಾರ ವಿಚಾರಗಳು ಇಡಿ ಜಗತ್ತಿನ ಗಮನ ಸೆಳೆದಿದ್ದವು.
ಅಪ್ಪಟ ಭಾರತೀಯರಾದ ಅವರು ದೇಶದ ಮೇಲೆ ಅಪಾರ ಅಭಿಮಾನ ಹೊಂದಿದ್ದರು, ದೇಶದ ಸಂಸ್ಕೃತಿ, ಸಂಸ್ಕಾರವನ್ನು ಎತ್ತಿ ಹಿಡಿದವರು.
ವಿದೇಶದಲ್ಲಿ ಭಾರತದ ಹಿರಿಮೆ ಕುರಿತು ಬೆಳಕು ಚಲ್ಲಿದವರು. ಅವರ ಆದರ್ಶ ತತ್ವಾಚರಣೆಗಳನ್ನು ನಾವೆಲ್ಲ ಮೈಗೂಡಿಸಿಕೊಂಡು ನಡೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸೇಂಟ್ ಪೀಟರ್ ಶಾಲೆಯ ಶಿಕ್ಷಕ ವರ್ಗ ಹಾಗೂ ಸಿಬ್ಬಂದಿ ಹಾಜರಿದ್ದರು.