ಪ್ರಮುಖ ಸುದ್ದಿ
ಪೊಲೀಸರ ಜತೆ ನಟಿ ಭಾವನ ಕಿರಿಕ್
ಧಾರವಾಡಃ ನಗರದ ಸರ್ಕ್ಯೂಟ್ ಹೌಸ್‍ಗೆ ಸಿಎಂ ಸಿದ್ರಾಮಯ್ಯನವರು ಬರುತ್ತಾರೆ ಎಂಬ ಮಾಹಿತಿ ಮೇರೆಗೆ ಚಿತ್ರ ನಟಿ ಹಾಗೂ ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕಿ ಎಂದೆನಿಸಿಕೊಂಡ ನಟಿ ಭಾವನ ಸರ್ಕ್ಯೂಟ್ ಹೌಸ್ ಆಗಮಿಸಿ, ಒಳಗಡೆ ಹೋಗಲು ಯತ್ನಿಸಿದರು. ಆದರೆ ಪೊಲೀಸರು ಆಕೆಯನ್ನು ತಡೆದ ಕಾರಣ, ಸಿಟ್ಟಾದ ನಟಿ ಭಾವನ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಸಿಎಂ ಭೇಟಿಗೆ ಬಂದಿದ್ದೇನೆ ನನ್ನನ್ನೆ ಬಿಡುವುದಿಲ್ಲ ಎಚಿತಿದ್ದೀರಿ, ಆಯಿತು ಸಿಎಂ ಬರಲಿ ಅದ್ಹೇಗೆ ಬಿಡಲ್ಲ ನಾನು ನೋಡುತ್ತೇನೆ ಎಂಬ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಒಟ್ಟಾರೆ ಸಿಎಂ ಬರೋವರೆಗೂ ಇಲ್ಲಿಂದ ನಾನು ಕದಲಲ್ಲ ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ.
ಶಿಷ್ಠಾಚಾರ ಹಿನ್ನೆಲೆಯಲ್ಲಿ ಪೊಲೀಸರು ನಿರಾಕರಿಸಿದ್ದಾರೆ. ಆದರೆ ನಟಿ ತನ್ನ ಇಮೇಜ್ ಡ್ಯಾಮೇಜ್ ಆಯಿತು ಎಂಬ ಸಿಟ್ಟಲ್ಲಿ ಪೊಲೀಸರೊಂದಿಗೆ ವಾದಕ್ಕಿಳಿದಿದ್ದಾರೆ. ಸಿಎಂ ಬರಲಿ ಬರೋವರೆಗೂ ಇಲ್ಲಿಂದ ಕದಲಲ್ಲ ಎಂದು ಹಠ ಹಿಡಿಯುವ ಮೂಲಕ ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದ್ದಾರೆ.