ವಿನಯ ವಿಶೇಷ

ವಿನಯವಾಣಿಯಲ್ಲಿ‌ ಕಾಣಿ ಗಿರಿಧರ ಶರ್ಮಾ ಅವರ ಭವಿಷ್ಯ ವಾಣಿ‌

ಶ್ರೀಮನ್ನಾರಾಯಣನ ಅನುಗ್ರಹ ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಪೂರ್ವಾಷಾಡ
ಋತು : ಗ್ರೀಷ್ಮ
ರಾಹುಕಾಲ 12:21 – 13:57
ಗುಳಿಕ ಕಾಲ 10:45 – 12:21
ಸೂರ್ಯೋದಯ 05:55:25
ಸೂರ್ಯಾಸ್ತ 18:46:26
ತಿಥಿ : ದ್ವಿತೀಯ
ಪಕ್ಷ : ಕೃಷ್ಣ

ಜಾಹಿರಾತು

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ ಕಾಣಬಹುದು. ಕೆಲವು ಘಟನೆಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಹಣಕಾಸಿನಲ್ಲಿ ಉತ್ತಮ ಸ್ಥಿತಿ ಹಾಗೂ ಬರುವ ಆರ್ಥಿಕ ವ್ಯವಹಾರ ಕೈಸೇರಲಿದೆ. ಕೆಲವು ಅಪಾತ್ರ ಜನಗಳು ನಿಮ್ಮ ಸಹಾಯ ಕೋರಿ ಬರಬಹುದು ಅಂತಹವರನ್ನು ದೂರ ಇಡುವುದು ಒಳ್ಳೆಯದು. ಗೃಹಪಯೋಗಿ ವಸ್ತುಗಳನ್ನು ಕೊಂಡುಕೊಳ್ಳುವ ಬಯಕೆ ಮೂಡಲಿದೆ. ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಗೂ ಒತ್ತಡ ಕಂಡುಬರುತ್ತದೆ. ಪತ್ನಿಯ ಮನಸ್ಥಿತಿಯನ್ನು ಅರಿತುಕೊಳ್ಳಿ, ಕೋಪ ವೇಷ ಕ್ಷಣಿಕವಾದುದ್ದು ಆದರೆ ಅದರ ಸ್ವರೂಪ ತುಂಬ ಗಂಭೀರವಾಗಿರುತ್ತದೆ ಎಚ್ಚರಿಕೆಯಿರಲಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಷಭ ರಾಶಿ
ಪುಣ್ಯಪುರುಷರ ಅಥವಾ ದೈವ ದೇಗುಲಗಳ ಬೇಟಿ ಆಗಲಿದ್ದೀರಿ. ನವೀನ ಅವಕಾಶಗಳು ನಿಮಗೆ ಗೋಚಾರ ಆಗಲಿದೆ. ಮಕ್ಕಳಲ್ಲಿನ ಕೆಲವು ನಡೆಯು ನಿಮಗೆ ಅಸಮಾಧಾನ ತರಿಸಬಹುದು. ವ್ಯವಹಾರದಲ್ಲಿ ನಿಮ್ಮ ಚತುರತೆಯನ್ನು ಪ್ರಯೋಗ ಮಾಡುವುದು ಒಳ್ಳೆಯದು. ಇಷ್ಟವಿಲ್ಲದ ಕೆಲಸಗಳನ್ನು ಮಾಡುವಂತೆ ಕೆಲವರು ನಿಮ್ಮನ್ನು ಒತ್ತಾಯ ಪಡಿಸುತ್ತಾರೆ. ಹಳೆಯ ಸಮಸ್ಯೆಗಳು ಒಂದು ಹಂತಕ್ಕೆ ಶಮನ ವಾಗಲಿದೆ. ನಿಮ್ಮ ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳನ್ನು ದೂರ ಇಡುವುದು ಒಳ್ಳೆಯದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕೌಟುಂಬಿಕ ವಿಷಯಗಳಿಂದ ಮನಸ್ಥಾಪ ಆಗುವ ಸಾಧ್ಯತೆ ಕಾಣಬಹುದು. ನಿಮ್ಮ ಉದ್ಯೋಗದ ಏಳಿಗೆಗಾಗಿ ನಿರಂತರವಾದ ಪ್ರಯತ್ನವನ್ನು ಬಿಡದೆ ಮಾಡುವುದು ಖಂಡಿತ ಗೆಲುವಿನ ದಾರಿ ತೋರಿಸುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗುವ ಅವಕಾಶವಿದೆ. ನೀವು ವಹಿಸಿಕೊಳ್ಳುವ ಕೆಲವು ಜವಾಬ್ದಾರಿಗಳು ಉನ್ನತ ಸ್ಥಾನ ಅಲಂಕರಿಸುವ ಹಾಗೆ ಮಾಡಬಹುದು. ನಿಮ್ಮ ವ್ಯಕ್ತಿತ್ವದಿಂದ ಹಾಗೂ ಕ್ರಿಯಾಶೀಲ ಚಟುವಟಿಕೆಗಳಿಂದ ಮೆಚ್ಚುಗೆ ಪಡೆಯಲಿದ್ದೀರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮಕ್ಕಳ ಬಗ್ಗೆ ನಿಮಗೆ ಆತ್ಮಾಭಿಮಾನ ಮೂಡಲಿದೆ. ಕುಟುಂಬಸ್ಥರ ಸಹಕಾರ ನಿಮಗೆ ಧನ್ಯತಾ ಭಾವನೆ ತರಿಸುತ್ತದೆ. ಹಣಕಾಸಿನಲ್ಲಿ ಮಂದಗತಿಯ ಚೇತರಿಕೆ ಕಾಣಬಹುದು. ವಿಚಾರಗೋಷ್ಠಿ ಗಳಿಂದ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಹಗುರ ವಾಗಲಿದೆ. ನಿಮ್ಮ ವ್ಯವಸ್ಥಿತ ಯೋಜನೆಗಳ ಬಗ್ಗೆ ಇನ್ನೊಬ್ಬರ ಜೊತೆ ಚರ್ಚೆ ಮಾಡುವುದು ಬೇಡ. ಕುಟುಂಬದಲ್ಲಿ ಸಂತೋಷದ ಸುದ್ದಿಗಳು ಕೇಳುವ ಸಾಧ್ಯತೆ. ದೈವಿಕ ಕಾರ್ಯಕ್ರಮಗಳು ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಇಂದು ಬಹಳಷ್ಟು ಲವಲವಿಕೆಯಿಂದ ಕೆಲಸದಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಸಂಗಾತಿಯ ಪ್ರೀತಿಯು ನಿಮ್ಮನ್ನು ಉತ್ತಮ ದಿನದತ್ತ ಕೊಂಡೊಯ್ಯುತ್ತದೆ. ಹೆಚ್ಚುವರಿ ಕೆಲಸಗಳು ನಿಮ್ಮಲ್ಲಿ ಅಶಾಂತಿ ತರಿಸಬಹುದು, ಅದರ ಒತ್ತಡ ನಿಮ್ಮ ಮೈಮೇಲೆ ಬೀಳುತ್ತದೆ. ನಿಮ್ಮ ನಯವಾದ ಮಾತುಗಳಿಂದ ಶತ್ರುಗಳನ್ನು ಸಹ ಮಿತ್ರರನ್ನಾಗಿ ಮಾಡಿಕೊಳ್ಳುವಿರಿ. ಅನಿರಿಕ್ಷಿತವಾಗಿ ಕಳೆದುಕೊಂಡಿರುವ ವಸ್ತುಗಳು ಸಿಗಬಹುದಾದ ಸಾಧ್ಯತೆಯಿದೆ. ಮನೆಯ ಅಲಂಕಾರಕ್ಕೆ ಹಾಗೂ ಅದರ ಶುಚಿತ್ವಕ್ಕೆ ಬಹಳಷ್ಟು ಒತ್ತು ನೀಡುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಹಿತೈಷಿಗಳ ವರ್ತನೆ ನಿಮ್ಮಲ್ಲಿ ಬೇಸರದ ಭಾವನೆ ಮೂಡಿಸುತ್ತದೆ. ಮನಃಶಾಂತಿಗಾಗಿ ಕ್ಷೇತ್ರಗಳ ಪ್ರವಾಸಕ್ಕೆ ಸಿದ್ಧಗೊಳ್ಳುವ ಸಾಧ್ಯತೆ. ಧೈರ್ಯೇ ಸಾಹಸೇ ಲಕ್ಷ್ಮಿ ಎಂಬುವಂತೆ ಕಾರ್ಯಗಳಲ್ಲಿ ನಿಮ್ಮ ಬದ್ಧತೆಯನ್ನು ತೋರಿಸಿ ಖಂಡಿತ ಲಾಭಾಂಶ ಹಾಗೂ ಉತ್ತಮ ಫಲಿತಾಂಶವನ್ನು ಸಹ ಪಡೆಯುವಿರಿ. ವ್ಯವಹಾರದಲ್ಲಿ ಮಾತುಗಾರಿಕೆ ಕೌಶಲ್ಯ ಚತುರತೆ ಇವೆಲ್ಲವನ್ನೂ ರೂಢಿಸಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಿ. ಕೊಟ್ಟಿರುವ ಸಾಲ ವಸೂಲಿ ಮಾಡುವ ಸಾಧ್ಯತೆಯಿದೆ. ಸಹವರ್ತಿ ಕೆಲಸಗಾರರಿಂದ ನಿಮ್ಮ ವಿರುದ್ಧ ದೋಷಾರೋಪಣೆ ಮಾಡಬಹುದಾಗಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ಸಾಲಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ಇಂದು ತಟಸ್ಥವಾಗಿರಿ. ಮಧ್ಯವರ್ತಿಗಳಾಗಿ ಜಾಮೀನು ನೀಡುವುದು ಸರಿಯಲ್ಲ. ನೀವು ಆಡಿದ ಮಾತಿಗೂ ಪರರು ಗ್ರಹಿಸುವ ವಿಚಾರಗಳಿಗೂ ಬಹಳಷ್ಟು ವ್ಯತ್ಯಾಸ ಇರಲಿದೆ ಇದರಿಂದ ಸಮಸ್ಯೆಗಳು ಉದ್ಭವ ಆಗಬಹುದಾದ ಸಾಧ್ಯತೆ. ಸಂಸಾರದ ಬೇಕು-ಬೇಡಗಳನ್ನು ಪೂರೈಸಲು ಹಣಕಾಸಿನಲ್ಲಿ ವ್ಯತ್ಯಾಸ ಆಗಬಹುದು. ವಿರೋಧಿಗಳು ನಿಮ್ಮ ವಿರುದ್ಧವಾಗಿ ಕಾರ್ಯಗಳನ್ನು ಪ್ರಾರಂಭಿಸಬಹುದು ಎಚ್ಚರ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಆರ್ಥಿಕ ಹಿನ್ನೆಡೆಗೆ ಪರಿಹಾರವಾಗಿ ಅವಕಾಶಗಳನ್ನು ತಪ್ಪಿಹೋಗದಂತೆ ಪಡೆಯುವುದು ಮುಖ್ಯ ಮತ್ತು ಕೆಲಸದಲ್ಲಿ ಶ್ರದ್ಧೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಹಾಗೂ ಖಿನ್ನತೆಯಿಂದ ಹೊರಬರಲು ದೈವಿಕ ಸಂಕಲ್ಪಗಳಿಗೆ ಮೊರೆ ಹೋಗುವ ಸಾಧ್ಯತೆ. ಗುಟ್ಟಿನ ವಿಷಯಗಳನ್ನು ಗುಟ್ಟಾಗಿಯೇ ಇಟ್ಟರೆ ಅದು ನಿಮಗೆ ಅನುಕೂಲ. ಜ್ಞಾನ ವೃದ್ಧಿಯ ಮಾರ್ಗಗಳನ್ನು ಹುಡುಕಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಬಾಳಸಂಗಾತಿ ಯಿಂದ ಟೀಕೆ-ಟಿಪ್ಪಣಿ ಒಳಗಾಗಬಹುದು ನೀವು ಪರಿಶುಭ್ರ ಮನಸ್ಸಿನಿಂದ ಒಪ್ಪಿಕೊಳ್ಳುವುದು ಮುಖ್ಯ. ವ್ಯವಹಾರವನ್ನು ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾಧಕಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಂಡು ಮುನ್ನಡೆಯಿರಿ. ಹೆಚ್ಚುವರಿ ಕೆಲಸಗಳಿಂದ ದೈಹಿಕವಾದ ಸುಸ್ತು ಆಯಾಸ ಆವರಿಸಲಿದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ನಿರೀಕ್ಷಿತ ಕಾರ್ಯಗಳು ಸಫಲವಾಗಲಿವೆ. ನಿಮ್ಮ ಕನಸಿನ ಆಕಾಂಕ್ಷೆಗಳು ನನಸಾಗುವ ಶುಭಗಳಿಗೆ ಕೂಡಿಬಂದಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ನಿಮ್ಮ ನಿರ್ಧಾರಗಳು ಸ್ಪಷ್ಟತೆಯಿಂದ ಹಾಗೂ ಲಾಭಾಂಶ ಗಳಿಂದ ಕೂಡಿರಲಿದೆ. ಕೆಲವರು ನಿಮ್ಮ ಬಳಿ ಸಹಾಯಕ್ಕಾಗಿ ಬರಬಹುದು ಸಾಧ್ಯವಾದಲ್ಲಿ ಮಾಡಿ. ನಿಮ್ಮ ಸಂಗಾತಿಯ ಮನದಲ್ಲಿರುವ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ತೆಗೆದುಹಾಕಲು ನೀವು ಸರಿಯಾದ ಮಾರ್ಗದರ್ಶನ ತೋರಿಸಬೇಕಾಗಿದೆ. ನಿಮ್ಮಲ್ಲಿರುವ ಪ್ರತಿಭೆ ಹಾಗೂ ವಿಷಯಜ್ಞಾನ, ವ್ಯವಹಾರದಲ್ಲಿನ ಚತುರತೆ, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕುಂಭ ರಾಶಿ
ಪ್ರೇಮಿಗಳು ಸಣ್ಣಪುಟ್ಟ ವಿಷಯಗಳಿಗೆ ಮನಸ್ತಾಪ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಯೋಚನೆಗಳಲ್ಲಿ ಪರರ ಹಸ್ತಕ್ಷೇಪದಿಂದ ನಷ್ಟವಾಗುವ ಭೀತಿ ಆವರಿಸಲಿದೆ. ಕೌಟುಂಬಿಕ ಜಾಗ ಜಮೀನು ವಿವಾದಗಳು ಇಂದು ದೊಡ್ಡಮಟ್ಟದ ಕಲಹದ ರೂಪವಾಗಿ ಮಾರ್ಪಡಬಹುದು. ಆತ್ಮೀಯರಲ್ಲಿ ಕೆಲವು ಮಾತುಗಳಿಂದ ಭಿನ್ನಾಭಿಪ್ರಾಯ ಬರಲಿದೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಮಾಡುವ ಕಾರ್ಯವನ್ನು ಪ್ರಸ್ತಾಪಿಸುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ಸೂಕ್ತ ವಿಚಾರಗಳನ್ನು ಹಾಗೂ ಸಲಹೆಗಳನ್ನು ಪಡೆದು ಹೊಸ ಕೆಲಸದಲ್ಲಿ ಪಾಲ್ಗೊಳ್ಳಿ. ನಿಮ್ಮ ಇಷ್ಟದಂತೆ ಕೆಲವು ನಿರ್ಧಾರಗಳು ತೆಗೆದುಕೊಳ್ಳುವುದರಿಂದ ಮುಂದೆ ಸಮಸ್ಯೆ ಅನುಭವಿಸುವಿರಿ. ಕುಟುಂಬದಲ್ಲಿನ ಹಿರಿಯರ ಮಾತಿಗೆ ಮನ್ನಣೆ ನೀಡುವುದು ನೀವು ಬೆಳೆಸಿಕೊಳ್ಳಬೇಕಾದ ಗುಣ. ನಿಮ್ಮ ಆರೋಗ್ಯವನ್ನು ಅಲಕ್ಷತನ ಮಾಡುವುದು ಒಳ್ಳೆಯದಲ್ಲ ಅದರ ಬಗ್ಗೆ ಮುತುವರ್ಜಿವಹಿಸಿ. ಕೆಲವು ವ್ಯವಹಾರಗಳು ಅಧಿಕ ಲಾಭ ದಂತಹ ಆಸೆ ಆಮಿಷಗಳನ್ನು ತೋರಿಸುತ್ತದೆ, ನೀವು ಎಡವಿದರೆ ಖಂಡಿತವಾಗಿಯೂ ಪ್ರಪಾತಕ್ಕೆ ಬೀಳುವಿರಿ ಜಾಗ್ರತೆ ಇರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ತಯಾರಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button