ಸಾರ್ವಜನಿಕರ ಸಮಸ್ಯೆಗೆ ತಕ್ಷಣ ಸ್ಪಂಧಿಸಲು ವಿಜಯಭಾಸ್ಕರ ಸೂಚನೆ
ಯಾದಗಿರಿಃ ಬೇರೆ ಬೇರೆ ಗ್ರಾಮಗಳಿಂದ ಕಾರ್ಯದ ನಿಮಿತ್ತ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿ, ಸಂಬಂಧಿಸಿದ ಹಿರಿಯ ಅಧಿಕಾರಿಗಳ ಸಲಹೆ ಪಡೆದು ತಕ್ಷಣ ಅವರ ಸಮಸ್ಯೆಗೆ ಸ್ಪಂದಿಸುವ ಕೆಲಸ ನಡೆಯಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ ತಹಸೀಲ ಕಚೇರಿ ಸಿಬ್ಬಂದಿಗೆ ಸೂಚಿಸಿದರು.
ಜಿಲ್ಲೆಯ ಶಹಾಪುರ ನಗರದ ಹೊಸ ತಹಸೀಲ ಕಚೇರಿಗೆ ಶುಕ್ರವಾರ ಭೇಟಿ ನೀಡಿ ವಿಶೇಷವಾಗಿ ಆಹಾರ ಇಲಾಖೆಯ ಕಾರ್ಯವೈಖರಿಯನ್ನು ಪರಿಶೀಲಿಸಿದ ಅವರು, ಗಣೀಕಿಕೃತ ಅನುಮೋದನೆ ಕೊಡುವಲ್ಲಿ ಆಗುತ್ತಿರುವ ಲೋಪ ದೋಷ ಸರಿಪಡಿಸಬೇಕು, ಹೊಸ ಅರ್ಜಿ ಹಾಕುವಲ್ಲಿ ಸೂಕ್ತ ಮಾಹಿತಿ ನೀಡಬೇಕು, ಕುಟುಂಬದವರ ಹೆಸರು ಸೇರ್ಪಡೆ, ಪಡಿತರ ಕಾರ್ಡಿನ ಬದಲಾವಣೆ ಕುರಿತಂತೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಮತ್ತು ತಕ್ಷಣವೇ ಸ್ಪಂದಿಸಿ ಸರ್ಕಾರದ ಯೋಜನೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.
ಯಾದಗಿರಿ ಜಿಲ್ಲೆ ನಿರ್ಧಿಷ್ಠ ಗುರಿ ತಲುಪಲಿಃ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಪಡಿತರ ಕಾರ್ಡಗಳು ನೋಂದಣಿಯಾಗಬೇಕು, ಸಧ್ಯ 65% ಪ್ರತಿಶತ ಗುರಿ ತಲುಪಿದ್ದು ಇನ್ನು 10% ಅವಕಾಶಗಳಿದ್ದು ಆಹಾರ ಸುರಕ್ಷತೆ ಕಾಯ್ದೆಯ ಅನ್ವಯದಂತೆ ಸರ್ಕಾರದ ಯೋಜನೆ ಸಾರ್ಥಕವಾಗಲು ಅಗತ್ಯ ಕ್ರಮ ಕೈಗೊಳ್ಳಲು ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರಿಗೆ ತಿಳಿಸಿದರು.
ಪಹಣಿ ಪಡೆಯಲು ಮುಕ್ತ ಅವಕಾಶಃ ಪಹಣಿ ಪಡೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು ತಹಶೀಲ ಕಚೇರಿ ಸೇರಿದಂತೆ ಗಣಕೀಕೃತ ಕೇಂದ್ರಗಳಲ್ಲಿ ಪಹಣಿ ಲಭ್ಯವಾಗಲಿದ್ದು ಕಳೆದ ಮೂರು ದಿನಗಳಿಂದ ವ್ಯವಸ್ಥೆಗೊಳಿಸಲಾಗಿದೆ. ಇನ್ನು ಮುಂದೆ ಪಹಣಿಗಾಗಿ ಕಾಯಬೇಕಿಲ್ಲವೆಂದು ಸಾರ್ವಜನಿಕವಾರಿ ನೆರೆದಿದ್ದ ಜನರಿಗೆ ತಿಳಿಸಿದರು.
ಸಕಾಲ ಸೇವೆ ಸಮರ್ಪಕವಾಗಿ ನಿರ್ವಹಿಸಿಃ ತಹಸೀಲ ಕಚೇರಿಯಲ್ಲಿರುವ ಸಕಾಲ ಸೇವೆಗೆ ಇರುವ ಕೇಂದ್ರದ ಬಗ್ಗೆ ಅಸಮಾಧಾನ ವ್ಯೆಕ್ತಪಡಿಸಿದ ಅಧಿಕಾರಿಗಳು ಸೇವೆಯ ಸೌಲಭ್ಯ ಎಲ್ಲರಿಗು ದೊರಕುವಂತಾಗಬೇಕು, ಸೇವಾ ಕೇಂದ್ರ ಸೌಲಭ್ಯಯುತವಾಗಿರಬೇಕು. ಈ ಕುರಿತಂತೆ ಸಂಬಂಧಿಸಿದವರು ಗಮನ ಹರಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಹಳೇ ತಹಸೀಲ ಕಚೇರಿಯ ಉಪನೋಂದಣಾಧಿಕಾರಿ ಕಾರ್ಯಾಲಯಕ್ಕೆ ಭೆಟಿ ನೀಡಿದರು.
ಸಾರ್ವಜನಿಕರೊಂದಿಗೆ ಚರ್ಚಿಸುತ್ತ ಹಲವಾರು ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ.ಜೆ.ಮಂಜುನಾಥ, ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅವಿನಾಶ ಮೆನನ್, ಸಹಾಯಕ ಆಯುಕ್ತ ಡಾ.ಜಗದೀಶ ನಾಯಕ ಅವರು ಉಪಸ್ಥಿತರಿದ್ದರು.