ಇಂದು ಪಿಯು ಪರೀಕ್ಷೆ ಆರಂಭ- ಶುಭ ಕೋರಿದ ಸಿಎಂ
ವಿವಿಡೆಸ್ಕ್ಃ ಇಂದು (ಮಾ.4) ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ರಾಜ್ಯದಲ್ಲಿ ಆರಂಭವಾಗಲಿದೆ.
ಈ ಬಾರಿ 1,016 ಕೇಂದ್ರಗಳಲ್ಲಿ 6,+80,049 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. 2,16,930 ವಿದ್ಯಾರ್ಥಿಗಳು ವಿಜ್ಞಾನ ವಿಭಾಗ, 2,61,674 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗ ಹಾಗೂ 2,01,445 ಕಲಾ ವಿಭಾಗದ ವಿದ್ಯಾರ್ಥಿಗಳು ಇದ್ದಾರೆ.
ಒಟ್ಟು ವಿದ್ಯಾರ್ಥಿಗಳಲ್ಲಿ 3,41,618 ಬಾಲಕಿಯರು, 3,38,431 ಬಾಲಕರು ಇಂದು ಪಿಯು ಪರೀಕ್ಷೆ ಎದುರಿಸಲಿದ್ದಾರೆ ಎಂದು ಪಿಯು ಇಲಾಖೆ ಮಾಹಿತಿ ನೀಡಿದೆ.
ಅಲ್ಲದೆ ಯಾವುದೇ ಪ್ರಶ್ನೆ ಪತ್ರಿಕೆಸೋರಿಕೆಯಾಗದಂತೆ ಎಚ್ಚರಿಕೆವಹಿಸುತಗತಿದೆ. ಅಕ್ರಮದಲ್ಲಿ ಭಾಗಿಯಾದವರಿಗೆ 5 ಲಕ್ಷ ರೂ.ದಂಡ ಮತ್ತು 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರೆ. ಪರೀಕ್ಷಾ ಕೇಂದ್ರದ ಸುತ್ತಲೂ ಪೊಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಟ್ವಿಟ್ ಮೂಲಕ ವಿದ್ಯಾರ್ಥಿ ಗಳಿಗೆ ಶುಭ ಕೋರಿದ ಸಿಎಂ
ಪಿಯು ಪರೀಕ್ಷೆಗಳು ಇಂದು ಆರಂಭವಾಗುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಆಲ್ ದಿ ಬೆಸ್ಟ್ ಎಂದು ಟ್ವಿಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.