RBI ವತಿಯಿಂದ ಯಾವೆಲ್ಲಾ ನೋಟು, ಬಂದಿಗಳು ಬಿಡುಗಡೆಯಾಗಿವೆ ಗೊತ್ತಾ.?
1 ಲಕ್ಷದ ಸಿಕ್ಕಾ ಬಂದಿ, 5 ಸಾವಿರದ ನೋಟು ನೋಡಿದ್ದೀರಾ.?
ರಿಸರ್ವ ಬ್ಯಾಂಕ್ ಆಫ್ ಇಂಡಿಯಾವತಿಯಿಂದ ಸುಲಭ ವ್ಯಾಪಾರಕ್ಕೆ ಸಹಕಾರ ನೀಡುವ ಹಿನ್ನೆಲೆಯಲ್ಲಿ ಸಾಕಷ್ಟು ದೊಡ್ಡ ಮೊತ್ತದ ಮತ್ತು ಸಣ್ಣಪುಟ್ಟ ವ್ಯಾಪಾರಕ್ಕೆ ಅನುಕೂಲವಾಗುವಂತೆ ಚಿಲ್ಲರೆ ಸಮಸ್ಯೆ ಉಂಟಾಗದಂತೆ ಹಲವು ನೋಟುಗಳು ಮತ್ತು ಬಂದಿ (ಸಿಕ್ಕಾ) ಗಳನ್ನು ಬಿಡುಗಡೆಗೊಳಿಸಿರುವ, ನೂತನ ಕರೆನ್ಸಿ ಮತ್ತು ಬಿಡುಗಡೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
1-5-20-50-150-350 ರೂಪಾಯಿಗಳ ನೋಟುಗಳನ್ನು ಬಿಡುಗಡೆಗೊಳಿಸಿದೆ. ಅಲ್ಲದೆ 1000-5000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಿದೆ. ಮತ್ತು ವಿಶೇಷವೆಂದರೆ 100000 ರೂಪಾಯಿ ಮತ್ತು 125 ರೂ. (ಸಿಕ್ಕಾ) ಬಂಧಿಯನ್ನು ಸಹ ಬಿಡುಗಡೆ ಮಾಡಿರುವುದು ಆಶ್ಚರ್ಯ ಮೂಡಿಸಿದೆ.
ಬಹುತೇಕ ಹೊಸ ನೋಟು ಮತ್ತು ಬಂದಿಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ನೂತನ ಕರೆನ್ಸಿಯ ಚಿತ್ರಗಳನ್ನು ನೋಡಿ ಪುಳಕಿತಗೊಂಡಿದ್ದಾರೆ.
ಈ ಎಲ್ಲಾ ನೂತನ ಕರೆನ್ಸಿಗಳು ಕೂಡಲೆ ಜನಸಾಮಾನ್ಯರ ಕೈಸೇರಿದರೆ ಚಿಲ್ಲರೆ ಸಮಸ್ಯೆಗಳು ನಿವಾರಣೆಯಾಗಲಿದೆ ಎಂಬುದು ಸಾಮಾನ್ಯ ಜನರ ಆಶಯವಾಗಿದೆ.