ಪ್ರಮುಖ ಸುದ್ದಿ
ವಿಧಾನಸೌಧದ ಪಡಸಾಲೆಯಲ್ಲೇ ಬಿಜೆಪಿ ಶಾಸಕರ ಭೋಜನ!
ಬೆಂಗಳೂರು: ವಿಧಾನಸೌಧದ ಪಡಸಾಲೆಯಲ್ಲೇ ಬಿಜೆಪಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ನಾಯಕರು ಯಾವೊಬ್ಬ ಶಾಸಕರು ಗುಂಪು ಬಿಡದಂತೆ ನಿಗಾ ವಹಿಸಿದ್ದಾರೆ. ವಿಶ್ವಾಸ ಮತ ಮುಗಿಯುವವರೆಗೆ ಎಚ್ಚರಿಕೆಯಿಂದ ಶಾಸಕರ ಮೇಲೆ ಕಣ್ಗಾವಲು ಇಡಲಾಗಿದೆ ಎಂದು ತಿಳಿದು ಬಂದಿದೆ.
ಮೈತ್ರಿ ಸರ್ಕಾರದ ನಾಯಕರಿಂದ ವಿಶ್ವಾಸ ಮತ ಮುಂದೂಡುವ ಪ್ಲಾನ್ ಕಂಡು ಬಂದಿರುವುದರಿಂದ ಬಿಜೆಪಿ ಹೆಚ್ಚಿನ ಜಾಗೃತಿ ವಹಿಸಿದೆ. ವಿಪಕ್ಷ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಯ 105 ಶಾಸಕರು ವಿಧಾನಸೌಧದ ಪಡಸಾಲೆಯಲ್ಲೇ ಮದ್ಯಾನದ ಸವಿಭೋಜನ ಸವಿದಿದ್ದು ಮದ್ಯಾನದ ಕಲಾಪದ ಬಗ್ಗೆ ಸಿದ್ಧತೆ ನಡೆಸಿದ್ದಾರೆ.