ಪ್ರಮುಖ ಸುದ್ದಿ

ಎಟಿಎಂನಲ್ಲಿ ನೋಟಿನ ಬದಲು ಪೇಪರ್ ಬರ್ತಾ ಇವೆ ಎಚ್ಚರ..?

ಬಳ್ಳಾರಿಃ ಎಟಿಎಂನಲ್ಲಿ ನೋಟಿನ ಬದಲು ಪೇಪರ್ ಬಂತು.!

ಬಳ್ಳಾರಿಃ ನಗರದ ಟ್ಯಾಂಕ್ -1 ರಸ್ತೆಯಲ್ಲಿರುವ ಎಸ್‍ಬಿಐ ಎಟಿಎಂನಲ್ಲಿ ನೋಟ್ ಬದಲು ಪೇಪರ್ ಬಂದ ಘಟನೆ ಜರುಗಿದೆ.
ಕೆಲವು ನೋಟ್‍ಗಳ ಜೊತೆ ಒಂದು ಪೇಪರ್ ಬಂದಿದ್ದು, ಎಟಿಎಂ ಗ್ರಾಹಕ ಕಂಗಾಲಾಗಿದ್ದಾನೆ. ರಮೇಶ ಎಂಬಾತ 8000 ಸಾವಿರ ರೂಪಾಯಿ ಡ್ರಾ ಮಾಡಿದ್ದು, ಅದರಲ್ಲಿ 500 ರೂ. ಮುಖಬೆಲೆಯ 15 ನೋಟುಗಳ ನಡುವೆ ಅದೇ ಗಾತ್ರದ ಹಣ ತುಂಬುವ ಚಲನ್ ಮಾದರಿಯ ಪೇಪರೊಂದು ಬಂದಿದೆ ಎನ್ನಲಾಗಿದೆ.

ಹಣ ಡ್ರಾ ಮಾಡಿದ ತಕ್ಷಣ ಎಣಿಸಿದ ರಮೇಶನಿಗೆ ಅಚ್ಚರಿ ಕಾಯ್ದಿದೆ. ಹಣ ಎಣಿಸುವಾಗ ಮಧ್ಯೆ ಪೇಪರ್ ಬಂದಿದ್ದು, ಬ್ಯಾಂಕ್ ಸಿಬ್ಬಂದಿಗೆ ಈ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದಾಗ್ಯು ಯಾರೊಬ್ಬರು ಪ್ರತಿಕ್ರಿಯೆ ನೀಡದ ಕಾರಣ ಸ್ಥಳದಲ್ಲಿ ನೆರೆದ ಗ್ರಾಹಕರು ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಬ್ಯಾಂಕ್ ಸಿಬ್ಬಂದಿ ನೋಟುಗಳ ನಡುವೆ ಆಕಸ್ಮಿಕವಾಗಿ ಪೇಪರ್ ಸೇರಿರಬಹುದು. ಆದರೆ ಯಾರು ನೋಟು ಬೇಕಂತಲೇ ಸೇರಿಸಲು ಬರುವುದಿಲ್ಲ. ಮಷೀನ್ ಹೇಗೆ ತೆಗದುಕೊಳ್ಳುತ್ತದೆ. ನೋಟುಗಳ ಎಣಿಕೆ ಸರಿಯಾಗಿದ್ದೂ ಹೆಚ್ಚಿನ ತೆಳುವಾದ ಪೇಪರ್ ಆಕಸ್ಮಿಕವಾಗಿ ಗೊತ್ತಿರದೆ ಹೋಗಿರಬಹುದು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಆದರೆ ಹಣ ಡ್ರಾ ಮಾಡಿಕೊಂಡ ರಮೇಶ ತನಗೆ ಅನ್ಯಾಯವಾಗಿದೆ, 500 ರೂ. ಬದಲು ಪೇಪರ್ ಬಂದ ಕಾರಣ 500 ರೂ. ನಷ್ಟ ಆಗಿದ್ದು ಯಾರು ಭರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಬ್ಯಾಂಕ್ ಸಿಬ್ಬಂದಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button