ವಿನಯ ವಿಶೇಷ

ನಿಮ್ಮ ರಾಶಿಫಲ ನೋಡಿ ಮುಂದೆ ಹೆಜ್ಜೆ ಹಾಕಿ

ಶ್ರೀ ಗುರು ರಾಯರ ಅನುಗ್ರಹ ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಸ್ವಾತಿ
ಋತು : ಗ್ರೀಷ್ಮ
ರಾಹುಕಾಲ 14:08 – 15:45
ಗುಳಿಕ ಕಾಲ 09:17 – 10:54
ಸೂರ್ಯೋದಯ 06:02:37
ಸೂರ್ಯಾಸ್ತ 18:59:04
ತಿಥಿ : ದಶಮಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ವ್ಯವಹಾರ ವಿಷಯದಲ್ಲಿ ಜಾಗ್ರತೆ ಇರಲಿ. ಅಪರಿಚಿತರೊಡನೆ ನಿಮ್ಮ ಸಲುಗೆ ಬೆಳೆಸಬೇಡಿ. ಆರ್ಥಿಕ ಸಂಕಷ್ಟಗಳಿಗೆ ಉತ್ತಮ ದಾರಿ ಸಿಗಲಿದೆ. ನಿಮ್ಮ ಯೋಜನೆಗಳು ಅತಿ ಹೆಚ್ಚು ಲಾಭ ತಂದುಕೊಡುವ ವ್ಯವಸ್ಥೆ ಹೊಂದಿದೆ. ಮಕ್ಕಳಿಂದ ಪ್ರಶಂಸೆ ಹೆಚ್ಚಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿರ್ದಿಷ್ಟ ಗುರಿ ತಲುಪಲು ಸಾವಧಾನವಾಗಿ ಮತ್ತು ಶ್ರದ್ಧೆ ಬೆಳೆಸಿಕೊಳ್ಳಿ. ಜೀವನದ ಕಷ್ಟನಷ್ಟಗಳು ಸಾಮಾನ್ಯವಾಗಿ ಬರಬಹುದು, ಈ ದಿನ ನಿಮ್ಮ ಕೆಲವು ಕಾರ್ಯಗಳಲ್ಲಿ ಸಹವರ್ತಿಗಳಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕುಟುಂಬದ ಹಿತ ಕಾಪಾಡಲು ನೀವು ಮುಂದಾಗುವುದು ಒಳಿತು. ಸಂಗಾತಿಯೊಡನೆ ಪ್ರೇಮ ಭರಿತವಾಗಿ ಮಾತನಾಡಿ ಅವರನ್ನು ಸಂತೋಷಪಡಿಸುವುದು ನಿಮ್ಮ ಕರ್ತವ್ಯ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ಭಾವನೆಗಳಿಗೆ ಸೂಕ್ತ ರೀತಿಯ ಸ್ಪಂದನೆ ದೊರೆಯದೇ ಈ ದಿನ ಮಂಕಾಗುವ ಸಾಧ್ಯತೆಯಿದೆ. ವಿಷಯದ ಆಸಕ್ತಿ ತೀರಾ ಕಡಿಮೆಯಾಗುವ ಸಾಧ್ಯತೆ ಕಂಡುಬರುತ್ತದೆ. ದೈಹಿಕ ಆಯಾಸದಿಂದ ಕಾರ್ಯಗಳಿಗೆ ತಡೆ ಒಡ್ಡುವ ಸಾಧ್ಯತೆ ಈ ದಿನ ಕಾಣಬಹುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಪರೋಪಕಾರಿಯ ಜೀವನಶೈಲಿಯಿಂದ ನೀವು ಜನಗಳಿಗೆ ಬಹಳಷ್ಟು ಹತ್ತಿರ ಆಗುವಿರಿ, ಆದರೆ ನಿಮ್ಮ ಕೆಲವು ನಡೆಗಳನ್ನು ನಿಮ್ಮ ಕುಟುಂಬದವರು ತೀಕ್ಷ್ಣವಾಗಿ ವಿಮರ್ಶಿಸ ಬಹುದು. ಕುಟುಂಬ ಮತ್ತು ನಿಮ್ಮ ಪ್ರಾಪಂಚಿಕ ವ್ಯವಹಾರವನ್ನು ಸರಿದೂಗಿಸಿಕೊಂಡು ಮುನ್ನಡೆಯಿರಿ. ಆರ್ಥಿಕ ಸ್ಥಿತಿ ಈದಿನ ಸಾಧಾರಣವಾಗಿ ಇರಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಪತ್ರದ ಮುಖಾಂತರ ವ್ಯವಹಾರಗಳನ್ನು ಖಾತ್ರಿಪಡಿಸಿಕೊಳ್ಳಿ. ಇಂದು ಕ್ರಯವಿಕ್ರಯಗಳಲ್ಲಿ ವ್ಯವಸ್ಥಿತವಾಗಿ ಕಾರ್ಯ ನಡೆಯಲಿದೆ. ಆರ್ಥಿಕ ಬೆಳವಣಿಗೆಗೆ ಹಲವು ಮೂಲಗಳಿಂದ ಸಹಕಾರ ದೊರೆಯುತ್ತದೆ. ಕಷ್ಟದ ಕೆಲಸವನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಸಂಘಟಿತ ವಲಯದಲ್ಲಿ ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಮಡದಿಯ ಪ್ರೇಮವು ನಿಮಗೆ ಸಹಕಾರಿಯಾಗುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಜಡತ್ವ ನಿಮ್ಮ ಕೆಲಸದಲ್ಲಿ ಆವರಿಸಬಹುದು. ಕೆಲವೊಂದು ವಿಷಯಗಳನ್ನು ಮಾನಸಿಕವಾಗಿ ಅತಿ ಬೇಗನೆ ತೆಗೆದುಕೊಳ್ಳುವಿರಿ ಇದರಿಂದ ಕಾರ್ಯಗಳು ಅಸಾಧ್ಯ ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ. ಕುಟುಂಬದೊಂದಿಗೆ ಗಹನವಾದ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಮುಖ್ಯವಾದ ವಸ್ತುವನ್ನು ನಿಮ್ಮ ನಿರ್ಲಕ್ಷದಿಂದ ಕಳೆದುಕೊಳ್ಳುವ ಸಾಧ್ಯತೆ ಇದೆ.
ಶುಭ ಸಂಜೆ 6
ಗಿರಿಧರ ಶರ್ಮ 9945098262

ತುಲಾ ರಾಶಿ
ಧಾರ್ಮಿಕ ಕಾರ್ಯಕ್ರಮಗಳು ನಿಮ್ಮಿಂದ ಆಗಬಹುದಾದ ಸಾಧ್ಯತೆ ಇದೆ. ಇಂದು ಗುರುವಿನ ಸಾಕ್ಷಾತ್ಕಾರ ನಿಮಗೆ ಆಗಲಿದೆ. ಕೆಲಸದಲ್ಲಿ ತಾಂತ್ರಿಕ ಮಟ್ಟವನ್ನು ಸುಧಾರಿಸಿಕೊಳ್ಳುವಿರಿ. ನಿಮ್ಮ ಯೋಜನೆಗಳಲ್ಲಿ ಆಧುನಿಕತೆಯ ಸ್ಪರ್ಶ ನೀಡುವ ಸಾಧ್ಯತೆಯಿದೆ. ಪತ್ನಿಯ ಮಮಕಾರ ಹಾಗೂ ಅವರ ಆರೈಕೆ ನಿಮಗೆ ಬೆಂಬಲವಾಗಿ ದೊರೆಯಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಬಂದು ವರ್ಗದಿಂದ ಒತ್ತಡ ಹೆಚ್ಚಾಗಲಿದೆ. ಕೆಲವರು ನಿಮ್ಮ ಇಷ್ಟ ವಿಲ್ಲದ ಕಾರ್ಯಗಳನ್ನು ನಡೆಸಲು ಒತ್ತಾಯ ಬರಬಹುದು ಇದರಿಂದ ನಿಮ್ಮ ಮನಸ್ಸಿಗೂ ಸಹ ಬೇಸರ ತರಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ. ಆರ್ಥಿಕ ಅಭಿವೃದ್ಧಿಯು ನಿಮ್ಮ ವಿಚಾರ ಗಳಂತೆಯೇ ನಡೆಯುತ್ತದೆ. ಪತ್ನಿಯ ಬೇಡಿಕೆಗಳು ಹೆಚ್ಚಾಗುತ್ತದೆ, ಇದು ನಿಮಗೆ ಕಸಿವಿಸಿ ಎನಿಸಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕೆಲಸದ ಅವ್ಯವಸ್ಥೆಯನ್ನು ಸರಿಪಡಿಸುವ ತೀರ್ಮಾನ ಈ ದಿನ ಮಾಡುವಿರಿ. ಆರ್ಥಿಕ ಬೆಳವಣಿಗೆಗೆ ಮಿತ್ರರಿಂದ ಪ್ರೋತ್ಸಾಹ ಸಿಗಲಿದೆ. ನಿಮ್ಮ ಕೆಲವು ವ್ಯಾಜ್ಯಗಳು ಸರಿಹೋಗುವ ಸಂದರ್ಭ ಬರಲಿದೆ. ಇಂದು ಪ್ರೇಮ ಪರೀಕ್ಷೆಯಲ್ಲಿ ಉತ್ತಮ ಸಂತಸದಾಯಕ ಫಲಿತಾಂಶ ಕಾಣಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ಖಾತ್ರಿ ಆಗುವಿಕೆ ಈದಿನ ಕಾಣಬಹುದು. ಸಂಗಾತಿಯ ಪ್ರೇಮ ಭರಿತ ನೋಟವು ನಿಮ್ಮಲ್ಲಿ ಪ್ರಣಯಾಸಕ್ತಿ ಹೆಚ್ಚು ಮಾಡುತ್ತದೆ.
ಶುಭಸಂಖ್ಯೆ 1
ಗಿರಿಧರ ಶರ್ಮ 9945098262

ಮಕರ ರಾಶಿ
ಕೆಲಸದಲ್ಲಿ ಗೊಂದಲ ಆವರಿಸುತ್ತದೆ. ಕೆಲಸವನ್ನು ಅರ್ಧಕ್ಕೆ ಬಿಡುವ ಸಾಧ್ಯತೆ ಇದೆ, ಆದಷ್ಟು ಅಲಕ್ಷ ಮಾಡದೆ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಅನಿರೀಕ್ಷಿತವಾಗಿ ಪ್ರಯಾಣ ಮಾಡುವ ಸಾಧ್ಯತೆ ಕಂಡು ಬರಲಿದೆ. ಕೊಟ್ಟಿರುವ ಸಾಲಗಳನ್ನು ಹಿಂಪಡೆಯಲು ಈದಿನ ಸಾಧ್ಯವಾಗದಿರಬಹುದು.
ಶುಭ ಸಂಜೆ 4
ಗಿರಿಧರ ಶರ್ಮ 9945098262

ಕುಂಭ ರಾಶಿ
ಉದ್ಯೋಗದಲ್ಲಿ ಸಮಸ್ಯೆ ಹೆಚ್ಚಾಗಲಿದೆ, ಸಹವರ್ತಿಗಳಿಂದ ಕಿರಿಕಿರಿ ಸಾಧ್ಯತೆ. ನಿಮ್ಮ ಕೆಲಸದಲ್ಲಿ ಕೆಲವು ತಪ್ಪುಗಳು ನಡೆಯಬಹುದು ಆದಕಾರಣ ತಪ್ಪಾಗದಂತೆ ಕಾರ್ಯನಿರ್ವಹಣೆ ಮಾಡುವುದು ಸೂಕ್ತ. ನಿಮ್ಮ ವ್ಯವಸ್ಥಿತ ಕೆಲಸಗಳಿಂದ ಕುಟುಂಬದ ಬಗ್ಗೆ ಸಮಯ ನೀಡಲು ಸಾಧ್ಯವಾಗದಿರಬಹುದು. ಸಂಗಾತಿಯು ನಿಮ್ಮ ಕೆಲವು ವರ್ತನೆಗಳನ್ನು ಕಂಡು ಮುನಿಸಿಕೊಳ್ಳುವ ಸಾಧ್ಯತೆ ಇದೆ. ಮಕ್ಕಳ ವಿದ್ಯೆಯಲ್ಲಿ ನಿಮ್ಮ ಪ್ರೋತ್ಸಾಹ ಅಗತ್ಯ ಬೀಳುವುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ವಿದ್ಯಾರ್ಥಿಗಳಿಗೆ ಈ ದಿನ ಉತ್ತಮ ಫಲಿತಾಂಶವು ಕಾಣಬಹುದಾಗಿದೆ. ನಿಮ್ಮ ಕಾರ್ಯಗಳು ಯಶಸ್ವಿಯಾಗಿ ಉತ್ತಮವಾದ ಫಲವನ್ನು ನೀಡಲಿದೆ. ಆರ್ಥಿಕವಾಗಿ ಚೈತನ್ಯ ಮೂಡುತ್ತದೆ. ಇಂದು ಗೃಹೋಪಯೋಗಿ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. ಕುಟುಂಬದಿಂದ ಶುಭಸುದ್ದಿ ನಿರೀಕ್ಷಿಸಬಹುದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆ ಹಾಗೂ ಪರಿಹಾರಕ್ಕೆ ಲಭ್ಯರಿದ್ದಾರೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
ಗಿರಿಧರ ಶರ್ಮ 9945098262

Related Articles

Leave a Reply

Your email address will not be published. Required fields are marked *

Back to top button