ಪ್ರಮುಖ ಸುದ್ದಿ
ಬೈಕ್ ಸವಾರನ ತಲೆಗೆ ಅಪ್ಪಳಿಸಿದ ಸಿಂಟೆಕ್ಸ್
ಬಿರುಗಾಳಿ ಮಳೆಗೆ ಹಾರಾಡಿದ ಸಿಂಟೆಕ್ಸ್ ಗಳು, ಬೈಕ್ ಸವಾರಿನಗೆ ಅಪ್ಪಳಿಸಿದ ಸಿಂಟೆಕ್ಸ್
ಕಲಬುರಗಿಃ ಜಿಲ್ಲೆಯ ಜೇವರ್ಗಿ ನಗರದಲ್ಲಿ ಸಂಜೆ ಬಿಸಿದ ಬಿರುಗಾಳಿ ಮಳೆಯ ಆರ್ಭಟಕ್ಕೆ ಟೀನ್ ಶೆಡ್ ವೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಸಿಂಟೆಕ್ಸ್ ಗಳಲ್ಲಿ ಭೀಕರ ಬಿರುಗಾಳಿಗೆ ಹಾರಿ ಬಂದ ರಸ್ತೆ ಮೇಲೆ ಹೊರಟಿದ್ದ ಬೈಕ್ ಸವಾರಿನಿಗೆ ಬಡಿದ ಪರಿಣಾಮ ಸವಾರ ನೆಲದಲ್ಲಿಯೇ ಕುಸಿಸ ಬಿದ್ದ ಘಟನೆ ನಡೆದಿದೆ.
ಈ ಕುರಿತು ಯಾರೋ ಮಹಡಿ ಮೇಲೆ ನಿಂತು ಸೆರೆ ವಿಡಿಯೋವೊಂದರ ದೃಶ್ಯಾವಳಿ ವೈರಲ್ ಆಗಿದೆ. ಆ ಭೀಕರ ಗಾಳಿ ಮಳೆ ನೋಡಿದರೆ ಎದೆ ಝಲ್ಲ್ ಎನ್ನುವದು ಸಹಜ.
ಕನಿಷ್ಟ ಮೂರು ನಾಲ್ಕು ಸಿಂಟೆಕ್ಸ್ ಗಳು ಇದೇ ರೀತಿ ಹಾರಾಡಿದ್ದು, ಭೀಕರ ಬಿರುಗಾಳಿಗೆ ಟೀನ್ ಶೆಡ್ ಹಾರಿದ್ದು, ಸಿಂಟೆಕ್ಸ್ ಗಳು ಬಿರುಗಾಳಿಗೆ ಹೊರಗಡೆ ತೂರಿ ಬಂದ ಘಟನೆ ನಡೆದಿದೆ.
ಸಿಂಟೆಕ್ಸ್ ಹೊಡೆತಕ್ಕೆ ತುತ್ತಾದ ವ್ಯಕ್ತಿ ಯಾರು ಏನಾಯಿತು ಬದುಕಿದನೋ ಇಲ್ವೋ ಎಂಬ ಮಾಹಿತಿ ಇದುವರೆಗೂ ದೊರೆತಿಲ್ಲ.