ಪ್ರಮುಖ ಸುದ್ದಿ
ಯಾದಗಿರಿಃ ಡೊಳ್ಳು ಕುಣಿತದ ಮೂಲಕ ಸೋಂಕಿತರನ್ನು ರಂಜಿಸಿದ ಶಾಸಕ ರಾಜೂಗೌಡ
ಡೊಳ್ಳು ಕುಣಿತದ ಮೂಲಕ ಸೋಂಕಿತರನ್ನು ರಂಜಿಸಿದ ಶಾಸಕ ರಾಜೂಗೌಡ
ಯಾದಗಿರಿಃ ಜಿಲ್ಲೆಯ ಸುರಪುರ ಶಾಸಕ ರಾಜೂಗೌಡ ಕೊರೊನಾ ತಡೆಗೆ ತಮ್ಮ ಕ್ಷೇತ್ರದಲ್ಲಿ ನಿರಂತರ ಶ್ರಮವಹಿಸುತ್ತಿದ್ದು, ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಇಂದು ಸುರಪುರ ತಾಲೂಕಿನ ರಾಜನಕೋಳೂರ – ಕೊಡೆಕಲ್ ಮಾರ್ಗಮಧ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಶಾಸಕ ರಾಜೂಗೌಡ, ಡೊಳ್ಳು ಕುಣಿತ ತಂಡದವರೊಂದಿಗೆ ತಾವೂ ಡೊಳ್ಳು ಬಾರಿಸುವ ಮೂಲಕ ಸೋಂಕಿತರನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಸೋಂಕಿತರು ಶಾಸಕ ರಾಜು ಅಣ್ಣನವರು ನಮ್ಮ ರಕ್ಷಣೆಗಾಗಿ ನಿರಂತರ ಶ್ರಮಿಸುತ್ತಿದ್ದು ಎಲ್ಲಾ ರೀತಿಯ ತನು ಮನ ಧನದಿಂದ ಸಹಾಯ ಸಹಕಾರ ನೀಡುತ್ತಿದ್ದಾರೆ ಇಂತಹ ಶಾಸಕರನ್ನು ಪಡೆದ ನಾವೇ ಭಾಗ್ಯಶಾಲಿಗಳು ಎಂದು ಧನ್ಯತಾಭಾವ ವ್ಯಕ್ತಪಡಿಸುತ್ತಿದ್ದಾರೆ.