ನಾಲವಾರ ಮಠದಲ್ಲಿ ಬೆಳ್ಳಂಬೆಳಗ್ಗೆ ತನಾರತಿ ಉತ್ಸವ
ನಾಲವಾರ ಮಠದಲ್ಲಿ ಬೆಳ್ಳಂಬೆಳಗ್ಗೆ ತನಾರತಿ ಉತ್ಸವ
ನಾಲವಾರಃ ಇಲ್ಲಿನ ಕೋರಿಸಿದ್ದೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಬೆಳ್ಳಂಬೆಳಗ್ಗೆ ಭಕ್ತರ ಹರಕೆಯ ತನಾರತಿ ಉತ್ಸವ ಸಾಂಪ್ರದಾಯಿಕವಾಗಿ ಜರುಗಿತು.
ನಾಲವಾರ ಕೋರಿಸಿದ್ದೇಶ್ವರರು ಆಧ್ಯಾತ್ಮದ ಬೆಳಕು ಎಂದು ನಂಬಲಾಗಿದ್ದು, ಅಲ್ಲದೆ ಭಕ್ತರ ಇಷ್ಠಾರ್ಥ ಈಡೇರಿಸುವ ಕಲಿಯುಗದ ಕಾಮಧೇನು ಎಂದು ಭಕ್ತರಿಂದ ಮನ್ನಣೆ ಪಡೆದಿದ್ದು, ಜಾತ್ರಾ ಮಹೋತ್ಸವದಲ್ಲಿ ಭಕ್ತಾಧಿಗಳ ಇಷ್ಠಾರ್ಥ ಈಡೇರಿಕೆ ನಿಮಿತ್ಯ ತನಾರಾತಿ (ದೀಪೋತ್ಸವ) ಉತ್ಸವ ವರ್ಷದಲ್ಲಿ ಮೂರು ಬಾರಿ ನಡೆಯುವದು ವಿಶೇಷವಾಗಿದೆ.
ಅವರಾತ್ರಿ ಅಮಾವಾಸ್ಯೆ, ಅಕ್ಷಯತದಗಿ ಮತ್ತು ಮಣ್ಣೆತ್ತಿನ ಅಮಾವಾಸ್ಯೆ ಗಳೆಂದು ಜರುಗುತ್ತದೆ. ಈ ಬಾರಿ ಕೋವಿಡ್ ಹಿನ್ನೆಲೆ ಜಾತ್ರೆ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ.
ನೆರೆಯ ಆಂದ್ರ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತರು ಬರುತ್ತಾರೆ. ಕೋವಿಡ್ ಹಿನ್ನೆಲೆ ಒಂದಿಷ್ಟು ಬ್ರೆಕ್ ಹಾಕಲಾಗಿದೆ
ತನಾರತಿ ವಿಶೇಷತೆ ಎನು.? ಗೊತ್ತಾ..
ತನಾರತಿ ಅಂದರೆ, ಹತಕೆ ಹೊತ್ತ ಇಲ್ಲಿನ ಭಕ್ತರು ಶ್ರೀಮಠದಲ್ಲಿ 101 ರೂ.ನೀಡಿ ರಶೀದಿ ಪಡೆಯುತ್ತಾರೆ.
ಆಗ ಶ್ರೀಮಠದಿಂದ ಗೋದಿ ಹಿಟ್ಟು ಮತ್ತು ಎಣ್ಣೆಯನ್ನು ನೀಡಲಾಗುತ್ತದೆ. ಕಣಕದ ಹಿಟ್ಟನ್ನು ಹದ ಮಾಡಿ ಹಣತೆಯನ್ನಾಗಿಸಿಕೊಳ್ಳಲಾಗುತ್ತದೆ.
ಮತ್ತು ಅರಿವಿಯಿಂದ ಬತ್ತಿ ತಯಾರಿಸಿಟ್ಟುಕೊಂಡ ಬಳಿಕ ಗದ್ದುಗೆಯಿಂದ ದೀಪ ತಂದು ಬತ್ತಿಯನ್ನು ಹೊತ್ತಿಸಿ, ತಲೆಯ ಮೇಲೆ ಜ್ಯೋತಿಯನ್ನು ಹೊತ್ತುಕೊಂಡು ಸಿದ್ಧೇಶ್ವರರ ಗದ್ದುಗೆಗೆ ಐದು ಪ್ರದಕ್ಷಿಣೆ ಹಾಕುತ್ತಾರೆ. ಇದು ಇಲ್ಲಿನ ಭಕ್ತರು ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿದ್ದಾರೆ.
ಶ್ರೀಮಠದ ಪೀಠಾಧಿಪತಿ ತನಾರತಿ ಉತ್ಸವದಲ್ಲಿ ಉಪಸ್ಥಿತರಿದ್ದು, ಶ್ರೀಕೋರಿಸಿದ್ಧೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ಅರ್ಚನೆ, ಮಂಗಳಾರತಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಡೊಳ್ಳು, ಹಲಗೆ, ಬ್ಯಾಂಡ್, ವೀರಗಾಸೆ, ಕುಣಿತ, ಭಜನೆ, ಸಾಂಖಿಕವಾಗಿ ನಡೆದವು. ವಿವಿಧ ವಾದ್ಯಗಳ ನಿನಾದ ಭಕ್ತರ ಜಯಘೋಷಗಳು ಕೇಳಿ ಬಂದವು. ಕೋವಿಡ್ ಮದ್ಯವು ಜಾತ್ರೆಯ ತನಾರತಿ ಉತ್ಸವ ಜರುಗಿರುವದು ಭಕ್ತರಲಿ ಖುಷಿ ಇಮ್ಮಡಿಗೊಳಿಸಿದೆ ಎಂಬ ಧ್ವನಿ ಕೇಳಿ ಬಂದಿತು.