ಭರ್ಜರಿ ನೇಮಕಾತಿಗೆ ಮುಂದಾದ ಟಿಸಿಎಸ್; ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ದೆಹಲಿ: ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
1 ವರ್ಷದ ಕಾರ್ಯಾನುಭವ ಇದ್ದವರೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ. ವೈರ್‌ಲೈನ್ – ವೈರ್‌ಲೆಸ್ ನೆಟ್‌ವರ್ಕ್ ಸೆಕ್ಯೂರಿಟಿ, ಆಪರೇಷನ್ ಎನೇಬಲ್ಮೆಂಟ್ -ಹ್ಯೂಮನ್ ರಿಸೋರ್ಸ್, ಇಪಿ ಡ್ರೈವ್ ಆಪರೇಷನ್ ಸ್ಪೆಷಲಿಸ್ಟ್, ಎಂಎಫ್‌ಜಿ ಇಯು ಡ್ರೈವ್, ಎನ್‌ಜಿಎಂ ಎಪಿಎಸಿ ಬಿಎಫ್‌ಎಸ್, ಕಸ್ಟಮರ್ ಸರ್ವೀಸ್, ಆ್ಯಕ್ಟಿವ್ ಡೈರೆಕ್ಟರಿ, ಎಸ್‌ಸಿಸಿಎಂ, ವಿಂಡೋಸ್ ಅಡ್ಮಿನ್, ಜಾವ ಡೆವಲಪರ್, ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್, ಬ್ಯಾಕಪ್ ಅಡ್ಮಿನ್, ಸ್ಟೋರೇಜ್ ಅಡ್ಮಿನ್, DevOps Admin, ಮಿಡಲ್‌ವೇರ್ ಅಡ್ಮಿನ್, ಓಪೆನ್‌ಶಿಫ್ಟ್ ಅಡ್ಮಿನ್, ನೆಟ್‌ವರ್ಕ್ ಅಡ್ಮಿನ್, ಡಾಟಾಬೇಸ್ ಅಡ್ಮಿನ್, ಇಎಲ್‌ಕೆ ಅಡ್ಮಿನ್, ಸೆಕ್ಯೂರಿಟಿ ಎಸ್‌ಎಂಇ, ಟೀಮ್ ಸೆಂಟರ್, ಲಿನಕ್ಸ್ ಅಡ್ಮಿನ್, ಮೆಕ್ಯಾನಿಕಲ್ ಡಿಸೈನ್, ಸರ್ವೀಸ್‌ನೌ ಡೆವಲಪರ್, ಓಪೆನ್‌ಸ್ಟಾಕ್ ಅಡ್ಮಿನ್, ನೆಟ್‌ವರ್ಕ್ ಟೆಸ್ಕಿಂಗ್ ಆ್ಯಂಡ್ ಆಟೋಮೇಷನ್, ಪ್ರೋಗ್ರೆಸ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್, ಜಾವ ಫುಲ್‌ಸ್ಟಾಕ್ ಡೆವಲಪರ್ ಮುಂತಾಹ ಹುದ್ದೆಗಳು ಖಾಲಿ ಇವೆ. ಒಂದೊಂದು ಹುದ್ದೆಗೂ ಅರ್ಜಿ ಸಲ್ಲಿಸಲು ಬೇರೆ ಬೇರೆ ದಿನಾಂಕ ಮತ್ತು ಕಾರ್ಯಾನುಭವ ನಿಗದಿ ಪಡಿಸಲಾಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ.