ಸಮಾಜದ ಅಂಕುಡೊಂಕು ತಿದ್ದಿದ ಸಂತ ಕವಿ ಸರ್ವಜ್ಞ

ತ್ರಿಪದಿ ವಚನಗಳ ಮೂಲಕ ಸಮಾಜ ತಿದ್ದಿದ ಕವಿ ಸರ್ವಜ್ಞ
yadgiri, ಶಹಾಪುರಃ ಸಂಸಾರದ, ಬದುಕಿನ ಸಮಸ್ಯೆಗಳಿಗೆ ನೇರಾ ನೇರ, ನಿಷ್ಟುರವಾಗಿ ತ್ರಿಪದಿ ವಚನ ರಚಿಸುವ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಕವಿ ಸರ್ವಜ್ಞ ಶ್ರಮಿಸಿದ್ದಾರೆ. ಅವರ ತ್ರಿಪದಿಗಳು ಸಾವಿರಾರು ಜನರ ಬದುಕಿನ ದಿಕ್ಕನ್ನೆ ಬದಲಾಯಿಸುವೆ ಎಂದು ಚಂದ್ರಕಾಂತ ಶಿರಸ್ತೆದಾರ ತಿಳಿಸಿದರು.
ರವಿವಾರ ಇಲ್ಲಿನ ತಹಸೀಲ್ ಕಚೇರಿಯಲ್ಲಿ ಕವಿ ಸರ್ವಜ್ಞ ಜಯಂತತ್ಯುತ್ಸವ ಅಂಗವಾಗಿ ಸರಳವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಕೋವಿಡ್ ಹಿನ್ನೆಲೆ ಶರಣ, ಸಂತರ ಜಯಂತಿ ಉತ್ಸವಗಳನ್ನು ಸರಳವಾಗಿ ಆಚರಿಸಲಾಗುತ್ತಿದೆ. ಯಾವುದೇ ಮೆರವಣಿಗೆ, ಉತ್ಸವಕ್ಕೆ ಆದ್ಯತೆ ಇರದ ಕಾರಣ ಕೋವಿಡ್ ನಿಯಮದನುಸಾರ ಸರಳವಾಗಿ ಮಹಾತ್ಮರ ದಿನಾಚರಣೆಗಳನ್ನು ಆಚರಿಸುತ್ತಿದ್ದೇವೆ,
ಸಂತ, ಕವಿ ಸರ್ವಜ್ಞ ತಮ್ಮ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಛಾಟಿ ಏಟು ನೀಡಿದ್ದಾರೆ. ಅವರ ತ್ರಿಪದಿಗಳು ಅತ್ಯಂತ ನಿಷ್ಟುರವಾಗಿರುವದು ಕಂಡು ಬರುತ್ತದೆ. ತ್ರಿಪದಿಗಳು ಓದಿದರೆ, ಆತ ನಿಷ್ಟುರವಾದಿ ಎಂಬುದ ಮೇಲ್ನೋಟಕ್ಕೆ ತಿಳಿದು ಬರುತ್ತದೆ. ನಾಗರಿಕರು ಸರ್ವಜ್ಞರ ಆದರ್ಶ ಮತ್ತು ಆತನ ತ್ರಿಪದಿಗಳ ಮೂಲಕ ಬದುಕನ್ನು ಸುಧಾರಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡ ಚಂದ್ರು ಯಾಳಗಿ ಸೇರಿದಂತೆ ಕಂದಾಯ ಇಲಾಕೆ ಸಿಬ್ಬಂದಿ ಯುವಕರು ಇತರರಿದ್ದರು.