ವರ್ಕ್ ಫ್ರಂ ಹೋಮ್ ನೌಕರರಿಗೆ ಗುಡ್ ನಿವ್ಸ್ಃ ಸರ್ಕಾರ ರೂಪಿಸಲಿದೆ ಕಾನೂನು

ವರ್ಕ್ ಫ್ರಂ ಹೋಮ್ ನೌಕರರಿಗೆ ಗುಡ್ ನಿವ್ಸ್ಃ ಸರ್ಕಾರ ರೂಪಿಸಲಿದೆ ಕಾನೂನು
vv desk– ಕೊರೊನಾ ನಂತರ ವರ್ಕ್ ಫ್ರಂ ಹೋಮ್ ನಿಯಮ ಜಾರಿಗೆ ಬಂದಿದೆ. ಕಚೇರಿಗಿಂತ ಮನೆಯಲ್ಲಿರುವ ಉದ್ಯೋಗಿಗಳು ಹೆಚ್ಚು ಕೆಲಸ ಮಾಡ್ತಿದ್ದಾರೆ. ಆದರೆ ಇದು ಅವರ ಒತ್ತಡವನ್ನು ಹೆಚ್ಚಿಸಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ವರ್ಕ್ ಫ್ರಂ ಹೋಮ್ ನಿಂದ ಒತ್ತಡ ಹೆಚ್ಚಾಗಿದ್ದು, ಕೆಲಸದ ಸಮಯಕ್ಕೆ ಮಿತಿಯಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ಅದಕ್ಕೊಂದು ಸಕಾರ ಕಾನೂನು ತರಲಿದೆ ಎಂಬುದೇ ಖುಷಿಯ ಸುದ್ದಿ.
ಕೇಂದ್ರ ಸರ್ಕಾರ ಈ ಕುರಿತು ಶೀಘ್ರದಲ್ಲೇ ವರ್ಕ್ ಫ್ರಂ ಹೋಮ್ ಅಡಿಯಲ್ಲಿ ಕಾನೂನನ್ನು ರಚಿಸಲಿದೆ.
ಕಂಪನಿಯು ತನ್ನ ಉದ್ಯೋಗಿ ಬಗ್ಗೆ ಯಾವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂಬುದನ್ನು ಅದರಲ್ಲಿ ವ್ಯಾಖ್ಯಾನಿಸಲಾಗುವದು ಎನ್ನಲಾಗಿದೆ.
ಮನೆಯಲ್ಲಿಯೇ ಕೆಲಸ ಮಾಡುವ ಉದ್ಯೋಗಿಗಳಿಗೆ ಯಾವುದೇ ಸಮಯ ನಿಗದಿಯಾಗಿಲ್ಲ. ಕಚೇರಿಗಿಂತ ಮನೆಯಲ್ಲಿಯೇ ಹೆಚ್ಚು ಕೆಲಸ ಮಾಡುವ ಸ್ಥಿತಿ ಬಂದಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆ ಕಚೇರಿ ವಿರುದ್ಧ ಧ್ವನಿ ಎತ್ತಲು ಯಾವುದೇ ಕಾನೂನು ಇರಲಿಲ್ಲ. ಹೀಗಾಗಿ ಸಕಾರ ನೂತನ ಕಾಯ್ದೆ ರಚನೆಗೆ ಮುಂದಾಗಿದೆ ಎನ್ನಲಾಗಿದೆ.
ಅಲ್ಲದೆ ಮುಖ್ಯವಾಗಿ ಇಂಟರ್ನೆಟ್ ನಂತಹ ವೆಚ್ಚಗಳಿಗೆ ಕಂಪನಿ ಎಷ್ಟು ಹಣ ಸಂದಾಯ ಮಾಡಬೇಕು ಎಂಬುದನ್ನು ಸಹ ಕಾಯ್ದೆಯಲ್ಲಿ ತಿಳಿಸಲಾಗುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಪೋಚಗಲ್ಲಿನಲ್ಲಿ ಕಾನೂನು ಜಾರಿಗೆ ತರಲಾಗಿದೆ. ಆ ಮಾದರಿಯಲ್ಲಿಯೇ ವಕ್ ಫ್ರಂ ಹೋಮ್ ನೌಕರರಿಗೆ ಸೂಕ್ತ ಕಾನೂನು ರಚಿಸಲಾಗುವದು. ಇದು ಮನೆಯಿಂದಲೇ ವಕ್ ಫ್ರಂ ಹೋಂ ಕೆಲಸಗಾರರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.