ಪ್ರಮುಖ ಸುದ್ದಿ
ಅಕ್ರಮ ಮರಳು ಸಾಗಾಣಿಕೆಃ 4 ಟ್ರ್ಯಾಕ್ಟರ್ ಜಪ್ತಿ
ಅಕ್ರಮ ಮರಳು ಸಾಗಾಣಿಕೆಃ 4 ಟ್ರ್ಯಾಕ್ಟರ್ ವಶಕ್ಕೆ ಪಡೆದ ಪೊಲೀಸರು
ಯಾದಗಿರಿಃ ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ 4 ಟ್ರ್ಯಾಕ್ಟರ್ ಗಳಲ್ಲಿ ಮರಳು ಸಾಗಾಣಿಕೆ ಮಾಡುತ್ತಿರುವ ವೇಳೆ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದ ಘಟನೆ ಸುರಪುರ ಠಾಣೆ ವ್ಯಾಪ್ತಿ ನಡೆದಿದೆ.
ಸುರಪುರ ತಾಲೂಕಿನ ಹೆಮನೂರ ಗ್ರಾಮ ಬಳಿ ಕೃಷ್ಣಾ ನದಿ ತೀರದ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 4 ಟ್ರಾಕ್ಟರ್ಗಳನ್ನು ಪಿಐ ಪ್ರಕಾಶ ಯಾತನೂರ ನೇತೃತ್ವದ ತಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದ ಮೇರೆಗೆ ದಾಳಿ ನಡೆಸಿ ಟ್ರ್ಯಾಕ್ಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಟ್ರ್ಯಾಕ್ಟರ್ ಮಾಲೀಕರು ಯಾವುದೇ ರಾಜಸ್ವ ಕಟ್ಟದೆ, ಮರಳು ನೀತಿ ನಿಯಮಗಳನ್ನು ಗಾಳಿಗೆ ತೂರಿ ನಿಯಮ ಬಾಹಿರವಾಗಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದು, ಸಮರ್ಪಕ ಮಾಹಿತಿ ಪಡೆದುಕೊಂಡಿದ್ದ ಪೊಲೀಸರು ದಾಳಿ ನಡೆಸಿದ್ದು, ಟ್ರ್ಯಾಕ್ಟರ್ ಮತ್ತು ಮಾಲೀಕರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.