ಪ್ರಮುಖ ಸುದ್ದಿ
ಪೈಲ್ವಾನ್ ಚಿತ್ರದ ಆಡಿಯೋ ಲಾಂಚ್ ಬೆಂಗಳೂರಿಗೆ ಶಿಫ್ಟ್!
ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೋಟೆನಾಡು ಚಿತ್ರದುರ್ಗ ನಗರದಿಂದ ಬೆಂಗಳೂರಿಗೆ ಶಿಫ್ಟ್ ಆಗಿದೆ ಎಂದು ತಿಳಿದು ಬಂದಿದೆ. ಉತ್ತರ ಕರ್ನಾಟಕದಲ್ಲಿ ಭಾರೀ ಪ್ರವಾಹ ಸೃಷ್ಟಿಯಾದ ಹಿನ್ನೆಲೆ ಕಳೆದ ವಾರದಲ್ಲೇ ಚಿತ್ರದುರ್ಗ ನಗರದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಆದ್ರೆ, ಚಿತ್ರದುರ್ಗದಲ್ಲಿ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ರದ್ದು ಮಾಡಿ ಆಗಷ್ಟ್ 18ರಂದು ಬೆಂಗಳೂರಿನಲ್ಲೇ ಸರಳವಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ ಆದರೆ ಸಿನಿತಂಡ ಅಧಿಕೃತವಾಗಿ ಘೋಷಿಸಿಲ್ಲ.