ಪ್ರಮುಖ ಸುದ್ದಿ
BJP ನೂತನ ತಂಡಕ್ಕೆ ಪ್ರಧಾನಿ ಮೋದಿ ಶುಭಾಶಯ & ನಿಸ್ವಾರ್ಥ ಸೇವೆ, ಸಮರ್ಪಣೆಗೆ ವಿಶ್ವಾಸ
BJP ನೂತನ ತಂಡಕ್ಕೆ ಪ್ರಧಾನಿ ಮೋದಿ ಶುಭಾಶಯ & ನಿಸ್ವಾರ್ಥ ಸೇವೆ, ಸಮರ್ಪಣೆಗೆ ವಿಶ್ವಾಸ
ವಿವಿ ಡೆಸ್ಕ್ಃ ಇಂದು ಭಾರತೀಯ ಜನತಾ ಪಕ್ಷದ ಹಲವಾರು ರಾಷ್ಟ್ರೀಯ ಹುದ್ದೆಗಳಿಗೆ ನೇಮಕಗೊಂಡಿರುವ ಪಕ್ಷದ ಪ್ರಮುಖರು, ಸಂಸದರು, ಶಾಸಕರು, ಸಂಘಟಕರು, ಕಾರ್ಯಕರ್ತರು ವಹಿಸಿಕೊಂಡ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಪ್ರಧಾನಿ ಮೋದಿಯವರು ನೂತನ ಪಕ್ಷದ ತಂಡಕ್ಕೆ ಅಭಿನಂದನೆ ಸಲ್ಲಿಸಿ ಟ್ವಿಟ್ ಮೂಲಕ ಶುಭಕೋರಿದ್ದಾರೆ.
ಅಷ್ಟೆ ಅಲ್ಲದೆ ಭಾರತದ ಜನರಿಗೆ ನಿಸ್ವಾರ್ಥವಾಗಿ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸುವ ನಮ್ಮ ಪಕ್ಷದ ಅದ್ಭುತ ಸಂಪ್ರದಾಯವನ್ನು ಅವರ ಎತ್ತಿ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಡವರನ್ನು ಸಬಲೀಕರಣಗೊಳಿಸಲು ನೂತನ ತಂಡ ಶ್ರಮಿಸಲಿ ಎಂದು ಟ್ವಿಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.