Homeಪ್ರಮುಖ ಸುದ್ದಿ

SSLC ಪಾಸ್ ಆದ ವಿದ್ಯಾರ್ಥಿಗಳಿಗೆ 3,500 ಸ್ಕಾಲರ್ಶಿಪ್; ಸಂಪೂರ್ಣ ಮಾಹಿತಿ ಇಲ್ಲಿದೆ

(KJ Scholarship) ಎಸ್.ಎಸ್.ಎಲ್.ಸಿ ಪಾಸ್ ಆದ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಅರ್ಜಿ ಸಲ್ಲಿಕೆ ಹೇಗೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್ ನಿಂದ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್.ಆರ್ ಉಪಕ್ರಮದ ಅಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದೊಳಗಿನ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು?;
* ಅರ್ಜಿದಾರರು 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ (ಎಸ್.ಎಸ್.ಸಿ/ ಸಿಬಿಎಸ್ಸಿ/ ಐಸಿಎಸ್ಸಿ) 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
* 2024-25ರ ಶೈಕ್ಷಣಿಕ ವರ್ಷಕ್ಕಾಗಿ ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್) ನಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಿಗಾಗಿ ಜೂನಿಯರ್ ಕಾಲೇಜು/ಶಾಲೆಗಳಲ್ಲಿ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ರೂ. 3,20,000 ಅಥವಾ ಕಡಿಮೆ ಆಗಿರಬೇಕು.
* ವಿದ್ಯಾರ್ಥಿಗಳು ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್)ನೊಳಗೆ ವಾಸಿಸುವವರಾಗಿರಬೇಕು.

ಎಷ್ಟು ಸ್ಕಾಲರ್ ಶಿಪ್ ಲಭ್ಯ:
ಮಾರ್ಗದರ್ಶನ ಬೆಂಬಲ, ಶೈಕ್ಷಣಿಕ ನೆರವು, ವೃತ್ತಿ ಮಾರ್ಗದರ್ಶನ ಮತ್ತು ಹೊರಾಂಗಣ ಭೇಟಿಗಳ ಜೊತೆಗೆ ತಿಂಗಳಿಗೆ ರೂ. 3,500 ವಿದ್ಯಾರ್ಥಿವೇತನ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
30-06-2024

ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/KJSP2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Back to top button