ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ಟ್ವಿಸ್ಟ್ – ಮೂವರು ಉದ್ಯಮಿಗಳ ಮೇಲೆ ಎಫ್‌ಐಆರ್
ಬೆಂಗಳೂರು : ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪಾಲುದಾರಿಕೆ ನಷ್ಟದಿಂದ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜಗದೀಶ್ ಬ್ಯುಸಿನೆಸ್ ಪಾರ್ಟನರ್ಸ್ ಮೇಲೆ ಈ ಆರೋಪ ಕೇಳಿ ಬಂದ ಹಿನ್ನೆಲೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸುರೇಶ್, ಹೊಂಬಣ್ಣ ಹಾಗೂ ಸುಧೀಂದ್ರ ಎಂಬುವವರ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಮೂವರು ಜಗದೀಶ್ ವ್ಯವಹಾರಿಕ ಪಾಲುದಾರರಾಗಿದ್ರು. ಸೌಂದರ್ಯ ಜಗದೀಶ್ ಮನೆಯಲ್ಲಿ ಕೆಲವೇ ಸಾಲುಗಳು ಬರೆದಿದ್ದ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ ನಲ್ಲಿ ಸೌಂದರ್ಯ ಕನ್ಸ್ಟ್ರಕ್ಷನ್ ಸಂಬಂಧ ಬ್ಯುಸಿನೆಸ್ ಲಾಸ್ ಬಗ್ಗೆ ಉಲ್ಲೇಖವಾಗಿರೋ ಮಾಹಿತಿ ಸಿಕ್ಕಿದೆ.
ವ್ಯವಹಾರದಲ್ಲಿ ಸುಮಾರು 60 ಕೋಟಿ ನಷ್ಟವಾಗಿರುವ ಬಗ್ಗೆ ಉಲ್ಲೇಖವಾಗಿದ್ದು, ಇದಕ್ಕೆ ಪಾಲುದಾರರೆ ಕಾರಣ ಎಂದು ಉಲ್ಲೇಖವಾಗಿದೆ. ಈ ಡೆತ್ ನೋಟ್ ಅಧರಿಸಿ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ, ಮಹಾಲಕ್ಷ್ಮಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.