ಮದ್ಯ ಪ್ರಿಯರಿಗೆ “ಗ್ಯಾರಂಟಿ” ಎಫೆಕ್ಟ್ ಬಿಯರ್ ಸೇರಿ ಎಲ್ಲಾ ಮದ್ಯದ ಬೆಲೆ ಹೆಚ್ಚಳ
ಮದ್ಯದ ಬೆಲೆ ಹೆಚ್ಚಳ ಮದ್ಯ ಪ್ರಿಯರಿಗೆ ಶಾಕ್
ವಿವಿ ಡೆಸ್ಕ್ಃ ಐದು ಗ್ಯಾರಂಟಿ ನೀಡಲು ಹೆಣಗಾಡುತ್ತಿರುವ ಸರ್ಕಾರ ಒಂದಡೆ ಫ್ರೀ ಕೊಟ್ಟು ಇನ್ನೊಂದಡೆ ಅದರ ಲಾಸ್ ತುಂಬಲು ಮತ್ತೊಂದು ಇಲಾಖೆಯಡಿ ದುಬಾರಿ ಬೆಲೆ ಹೆಚ್ಚಿಸಿ ಹಣ ಹೊಂದಿಸುವ ಕೆಲಸ ಶುರು ಮಾಡಿದೆ.
ಈಗಾಗಲೇ ವಿದ್ಯುತ್ ದರ ಹೆಚ್ಚಿಸಿದ ಸರ್ಕಾರ ಇದೀಗ ಬೀಯರ್ ಸೇರಿದಂತೆ ಎಲ್ಲಾ ಮದ್ಯದ ದರ ಹೆಚ್ಚಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
650 ml ಬಿಯರ್ ದರ 160 ರೂಪಾಯಿಯಿಂದ 170 ರೂ.ಗೆ ಹೆಚ್ಚಳ ಮಾಡಲಾಗಿದೆ. ಹಾರ್ಡ್ ಡ್ರಿಂಕ್ಸ್ ದರವು ಹೆಚ್ಚಳ ಮಾಡಲಾಗಿದ್ದು, ಮ್ಯಾಕ್‌ಡ್ಯಾವೆಲ್ಸ್ 180 mlಗೆ 198 ರೂಪಾಯಿಂದ 220 ರೂಪಾಯಿಗೆ ಹೆಚ್ಚಿಸಲಾಗಿದೆ. ಬಕಾರ್ಡಿ 276 mlಗೆ 90 ರೂ.ಯಿಂದ 105 ರೂಪಾಯಿಗೆ ಹೆಚ್ಚಿಸಲಾಗಿದೆ.
ಇದೇ ರೀತಿ ಎಲ್ಲಾ ಮದ್ಯದ ದರ ಹೆಚ್ಚಳ ಮಾಡಲಾಗಿದೆ. ಸದ್ಯಲ್ಲಿದೆ ಮದ್ಯದ ದರ ಹೆಚ್ಚಳ ಮಾಡಿದೆ. ಐದು ಗ್ಯಾರಂಟಿ ಹೊರೆಯನ್ನು ನಿರ್ವಹಿಸಲು ಸರ್ಕಾರ ಹಲವು ಮಾರ್ಗೋಪಾಯ ಕಂಡುಕೊಳ್ಳುತ್ತಿದೆ.
ಮಹಿಳೆಯರಿಗೆ ಬಸ್ ನಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿ ಮಾಡಿ, ಇತ್ತ ಮದ್ಯ ಸೇವನೆ ಮಾಡುವ ಪುರುಷರಿಗೆ ಶಾಕ್ ನೀಡಿ ಮದ್ಯದ ದರ ಹೆಚ್ಚಿಸಿ ಆ ಮೂಲಕ ಸರ್ಕರ ಹಣ ಕಿತ್ತೊಕೊಳ್ಳುವ ದಾರಿ ಕಂಡುಕೊಂಡಿದೆ. ಆದರೆ ಸರ್ಕಾರಕ್ಕೆ ಆದಾಯ ತರುವಂತ ಹೊಸ ಯೋಜನೆಗಳು ರೂಪಿಸುವ ಅಗತ್ಯವಿದೆ. ಆ ಮೂಲಕ ಯುವಕರಿಗೆ ಕೆಲಸ ಕೊಟ್ಟು ಅದರಿಂದ ಸರ್ಕಾರಕ್ಕೆ ಶಾಶ್ವತ ಆದಾಯ ತರುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಸಿಎಂ ಮಹತ್ವದ ಹೆಜ್ಜೆ ಹಾಕಬೇಕಿದೆ.
– ಡಾ.ಆನಂದಕುಮಾರ ಕರಕಳ್ಳಿ.