ಶಹಾಪುರಃ ನಕಲಿ ಮಧ್ಯ ಮಾರಾಟ ಇಬ್ಬರ ಬಂಧನ, ಮಾಲೀಕ ಸೇರಿದಂತೆ ಐವರು ಪರಾರಿ
ಲಕ್ಷ್ಮೀ ವೈನ್ಸ್ ನಲ್ಲಿ ನಕಲಿ ಮಧ್ಯ ಮರಾಟ ಅಂಗಡಿಗೆ ಬೀಗ
ಶಹಾಪುರಃ ನಕಲಿ ಮಧ್ಯ ಮಾರಾಟ ಇಬ್ಬರ ಬಂಧನ, ಐವರು ಪರಾರಿ
ಲಕ್ಷ್ಮೀ ವೈನ್ಸ್ ನಲ್ಲಿ ನಕಲಿ ಮಧ್ಯ ಮರಾಟ ಅಂಗಡಿಗೆ ಬೀಗ, ಒಟ್ಟು 20 ಲಕ್ಷ ಮೌಲ್ಯದ ಮಧ್ಯ ಸ್ಟಾಕ್, 8.280 ಲೀ.ನಕಲಿ ಮದ್ಯ
yadgiri, ಶಹಾಪುರಃ ನಗರದ ಲಕ್ಷ್ಮೀ ವೈನ್ಸ್ ಶಾಪ್ ನಲ್ಲಿ ನಕಲಿ ಮಧ್ಯ ಮಾರಾಟ ಹಿನ್ನೆಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಒಟ್ಟು ಅಂದಾಜು 20 ಲಕ್ಷ ರೂ. ಮೌಲ್ಯದ ಮಧ್ಯ ಸ್ಟಾಕ್ ಇದ್ದು, ಅದರಲ್ಲಿ 8.280 ಲೀಟರ್ ನಕಲಿ ಮಧ್ಯ ದೊರೆತಿದ್ದು, ಮಧ್ಯ ಮಾರಾಟ ಅಂಗಡಿಗೆ ಬೀಗ ಜಡಿಯಲಾಗಿದೆ. ಅಲ್ಲದೆ ಲಕ್ಷ್ಮೀ ವೈನ್ಸ್ ಮಾಲೀಕ ಮುರುಳಿ ದಂಡು ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಅಬಕಾರಿ ಉಪ ನಿರೀಕ್ಷಕ ಸುರೇಶಕುಮಾರ ಮಳೇಕರ್ ತಿಳಿಸಿದ್ದಾರೆ.
ದೇವಿಂದ್ರಪ್ಪ ಮತ್ತು ಭೀಮಾಶಂಕರ ಇಬ್ಬರು ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ ಅಬಕಾರಿ ಅಧಿಕಾರಿಗಳು, ಇನ್ನುಳಿದ ಐವರು ಆರೋಪಿಗಳು ಪರಾರಿಯಾಗಿದ್ದು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನುಳಿದ ಐವರು ಆರೋಪಿಗಳಾದ ಗೋಪಾಲ, ಬನಶಂಕರ, ಮೊಗಲಯ್ಯ, ಶರಣಪ್ಪ, ಮುರುಳಿ ದಂಡು ಇವರ ಪತ್ತೆಗಾಗಿ ತೀವ್ರ ಶೋಧ ನಡೆದಿದೆ ಎನ್ನಲಾಗಿದೆ.
ನಕಲಿ ಮಧ್ಯ ಮಾರಾಟದ ದೂರು ಬಂದ ಹಿನ್ನೆಲೆ ಮೇ 12 ರಂದು ಸಂಜೆ ಅಬಕಾರಿ ಜಂಟಿ ಆಯುಕ್ತರು ಕಲ್ಬುರ್ಗಿ ಇವರ ನಿರ್ದೇಶನದ ಮೇರೆಗೆ ಅಬಕಾರಿ ಆಯುಕ್ತರಾದ ಮೋತಿಲಾಲ್ ಹಾಗೂ ಶಹಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಶ್ರೀರಾಮ ರಾಠೋಡ ಮತ್ತು ಕಲ್ಬುರ್ಗಿ ಜಂಟಿ ಆಯುಕ್ತರ ಕಚೇರಿ (ಜಾರಿ ಮತ್ತು ತನಿಖೆ) ನಿರೀಕ್ಷಕರಾದ ಭಾರತಿ, ಅವರ ಮಾರ್ಗದರ್ಶನದಲ್ಲಿ ಯಾದಗಿರಿ ಅಬಕಾರಿ ಆಯುಕ್ತರ ಕಚೇರಿ ನಿರೀಕ್ಷಕ ಕೇದಾರನಾಥ ಪಾಟೀಲ್, ಶಹಾಪುರ ಅಬಕಾರಿ ನಿರೀಕ್ಷಕ ಧನರಾಜ, ಉಪ ನಿರೀಕ್ಷ ಸುರೇಶಕುಮಾರ ಮಳೆಕರ್ ಹಾಗೂ ಸಿಬ್ಬಂದಿ ದಾಳಿ ನಡೆಸುವ ಮೂಲಕ ಅಕ್ರಮವಾಗಿ ನಕಲಿ ಮಧ್ಯ ಮಾರಾಟ ಮಾಡುತ್ತಿರುವದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ದಾಳಿ ವೇಳೆ ಟಂಟಂ ಆಟೋವೊಂದರಲ್ಲಿ ನಕಲಿ ಮಧ್ಯ ಸಾಗಿಸುತ್ತಿರುವದನ್ನು ಹಿಡಿದ ಅಧಿಕಾರಿಗಳು ಯಾವ ಬಾರ್ ನಿಂದ ಮಧ್ಯ ಒಯ್ಯಲಾಗುತ್ತಿದೆ ಎಂಬುದನ್ನು ಆಟೋ ಚಾಲಕ ನನ್ನು ವಶಕ್ಕೆ ಪಡೆದು ನೇರವಾಗಿ ಲಕ್ಷ್ಮೀ ವೈನ್ಸ್ ಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಂಗಡಿಯಲ್ಲೂ ನಕಲಿ ಮಧ್ಯ ದೊರೆತಿರುವದು ಅಂಗಡಿಗೆ ಬೀಗ ಜಡಿಯಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿ ಸಮರ್ಪಕ ತನಿಖೆ ಕೈಗೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಕಲಿ ಮಧ್ಯ ಪ್ರಕರಣ- ಮಾಲೀಕ ಸೇರಿದಂತೆ 7 ಜನರ ವಿರುದ್ಧ ಪ್ರಕರಣ ದಾಖಲು
2468.715 ಲೀ. ವಿವಿಧ (ವೈನ್ಸ್) ಮಧ್ಯ, 1787.00 ಲೀ. ಬಿಯರ್ ಸ್ಟಾಕ್ ಇದ್ದು, ಒಟ್ಟು 20 ಲಕ್ಷ ರೂ. ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ 8.280 ಲೀ. ನಕಲಿ ಮಧ್ಯ ದೊರೆತಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನುಳಿದ ಐವರು ಆರೋಪಿಗಳಾದ ಗೋಪಾಲ, ಬನಶಂಕರ, ಮೊಗಲಯ್ಯ, ಶರಣಪ್ಪ, ಮುರುಳಿ ದಂಡು ಇವರ ಪತ್ತೆಗಾಗಿ ತೀವ್ರ ಶೋಧ ನಡೆದಿದೆ ಎನ್ನಲಾಗಿದೆ.