ಅಪಘಾತ ಯುವಕ ದುರ್ಮರಣ
yadgiri, ಶಹಾಪುರಃ ಯುವ ವ್ಯಾಪಾರಿಯೋರ್ವ ಸ್ವತಃ ತಾನೇ ಓಮಿನಿ ವ್ಯಾನ್ ನಡೆಸಿಕೊಂಡು ಬರುತ್ತಿರುವಾಗ ಲಾರಿಯೊಂದು ಎದುರಿಗೆ ಬಂದು ಡಿಕ್ಕಿ ಹೊಡೆದ ಪರಿಣಾಮ ವ್ಯಾನ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ಬೀರನೂರ ಕ್ರಾಸ್ ಬಳಿ ನಡೆದಿದೆ.
ಪ್ರಶಾಂತ ತಂದೆ ರಾಜಶೇಖರ ದಳವಾಯಿ (30) ಅಪಘಾತದಲ್ಲಿ ಮೃತ ದುರ್ದೈವಿ. ಈತ ಸುರಪುರನಲ್ಲಿ ಬ್ಯಾಂಗಲ್ ಸ್ಟೋರ್ ನಡೆಸುತ್ತಿದ್ದ ಎನ್ನಲಾಗಿದೆ. ಮೂಲತಃ ವಿಜಯಪುರ ಜಿಲ್ಲೆಯವರಾದ ಇವರು, ಈಚೆಗೆ ಕಳೆದ ತಿಂಗಳಿಂದ ಸುರಪುರದಲ್ಲಿ ವಾಸಿಸುತ್ತಿದ್ದರು. ವ್ಯಾಪಾರಕ್ಕೆ ಬೇಕಾದ ಸಾಮಾಗ್ರಿ ತರಲು ರಾಯಚೂರಿಗೆ ಹೋಗಿ ವಾಪಸ್ ಬರುವಾಗ ಘಟನೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
———–ಅ