ಪ್ರಮುಖ ಸುದ್ದಿ
ವಡಗೇರಾ ಕ್ರಾಸ್ ಬಳಿ ಅಪಘಾತ: ಪತಿ ಸಾವು, ಪತ್ನಿ ಮತ್ತು ಮಗಳ ಸ್ಥಿತಿ ಗಂಭೀರ
ಹಿಟ್ ಅಂಡ್ ರನ್: ಮಾನವೀಯತೆ ಮರೆತ ಚಾಲಕ
ಶಹಾಪುರ: ತಾಲೂಕಿನ ವಡಗೇರಾ ಕ್ರಾಸ್ ಹತ್ತಿರ ಬೈಕಿಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಲ್ಲಿದ್ದ ಸಾಯಿಬಣ್ಣ(26) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೈಕಿನ ಹಿಂಭಾಗದಲ್ಲಿದ್ದ ಪತ್ನಿ ಹಾಗೂ ಆರು ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಯಚೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಮಾನವೀಯತೆ ಮರೆತ ಟಾಟಾ ಏಸ್ ಚಾಲಕ ಮಾತ್ರ ಅಪಘಾತದ ಬಳಿಕ ವಾಹನ ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕನಿಷ್ಠ ಮನುಷತ್ವವನ್ನೂ ತೋರದೆ ಪರಾರಿ ಆಗಿದ್ದಾನೆ. ನಿನ್ನೆ ರಾತ್ರಿ 10ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ವಡಗೇರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.