Home
ಶಹಾಪುರಃ ಟಂಟಂ – ಟ್ರ್ಯಾಕ್ಟರ್ ನಡುವೆ ಡಿಕ್ಕಿ ಓರ್ವನ ಸಾವು ಇಬ್ಬರಿಗೆ ಗಂಭೀರ ಗಾಯ

ಶಹಾಪುರಃ ಟಂಟಂ – ಟ್ರ್ಯಾಕ್ಟರ್ ನಡುವೆ ಡಿಕ್ಕಿ ಓರ್ವನ ಸಾವು ಇಬ್ಬರಿಗೆ ಗಂಭೀರ ಗಾಯ
ದರಿಯಾಪುರ ಕ್ರಾಸ್ ಹತ್ತಿರ ನಡೆದ ಅಪಘಾತ
ಶಹಾಪುರಃ ಟಂಟಂ ಆಟೋ ಮತ್ತು ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಓರ್ವ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಗರ ಸಮೀಪದ ದರಿಯಾಪುರ ಕ್ರಾಸ್ ಹತ್ತಿರ ನಸುಕಿನ ಜಾವ ನಡೆದಿದೆ.
ಭಾಗಪ್ಪ ಮಲ್ಲಯ್ಯ ಸಾ.ಸಗರ (20) ಮೃತ ದುರ್ದೈವಿಯಾಗಿದ್ದಾನೆ. ಗಾಯಗೊಂಡ ಭೀಮರಾಯ ಅಂಬ್ಲಪ್ಪ ಸಾ.ಸಗರ (19), ಮಲ್ಜಪ್ಪ ಲಕ್ಕಪ್ಪ ಸಾ.ಸಗರ (18) ಈ ಇಬ್ಬರಲ್ಲಿ ಒರ್ವನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ಇನ್ನೋರ್ವನನ್ನು ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.