ಬ್ಯಾಂಕ್ ಖಾತೆಯಲ್ಲಿ ಹಣವಿದೆಯೇ? ಎಚ್ಚರ ಕನ್ನ ಬೀಳಲಿದೆ.?
ಅಕೌಂಟ್ ನಿಂದ ಹಣ ಮಂಗಮಾಯಃ ಜನರ ನಷ್ಟ ತುಂಬುವರಾರು.?
ಬ್ಯಾಂಕ್ ಖಾತೆಯಲ್ಲಿ ಹಣವಿದೆಯೇ? ಎಚ್ಚರ ಕನ್ನ ಬೀಳಲಿದೆ.?
ಅಕೌಂಟ್ ನಿಂದ ಹಣ ಮಂಗಮಾಯಃ ಜನರ ನಷ್ಟ ತುಂಬುವರಾರು.?
ಎಸ್‍ಬಿಐ ಮತ್ತು ಕೆನರಾ ಬ್ಯಾಂಕ್ ಗ್ರಾಹಕರ ಖಾತೆಗೂ ಕನ್ನ, 20 ಸಾವಿರ ಮಾಯ
yadgiri, ಶಹಾಪುರಃ ನಗರದಲ್ಲಿ ನಿತ್ಯ ಒಬ್ಬಿಬ್ಬರ ಅಕೌಂಟನಿಂದ ಸಾವಿರರಿಂದ ಹತ್ತು ಸಾವಿರದವರೆಗೂ ಹಣ ದೋಚುವ ಕೆಲಸ ಮುಂದುವರೆದಿದೆ. ಶುಕ್ರವಾರ ಫೋಟೊಗ್ರಾಫರ್ ಒಬ್ಬರ ಎಸ್‍ಬಿಐ ಬ್ಯಾಂಕ್ ನಲ್ಲಿ ಹೊಂದಿದ ಖಾತೆಯಿಂದ ಹತ್ತು ಸಾವಿರ ರೂಪಾಯಿ ಎಗರಿಸಿದ ಖದೀಮರು, ಆ ಕುರಿತು ಸೈಬರ್ ಕ್ರೈಂಗೆ ದೂರು ಸಲ್ಲಿಸಿ ಪ್ರತಿಯೊಂದನ್ನು ನಗರ ಠಾಣೆಗೆ ಕೊಟ್ಟು ವಾಪಾಸ್ ಆಗುತ್ತಿದ್ದಂತೆ, ಅದೇ ಅಕೌಂಟ್ ನಿಂದ ಮತ್ತೆ ಹತ್ತು ಸಾವಿರ ರೂಪಾಯಿ ಎಗರಿಸಿದ ದುರಂತ ನಡೆದಿದೆ.
ಕಳೆದ ಎರಡು ತಿಂಗಳಿಂದ ನಿತ್ಯ ಒಂದಿಲ್ಲೊಂದು ಬ್ಯಾಂಕಿನಲ್ಲಿ ಗ್ರಾಹಕರ ಖಾತೆಯಿಂದ ಹಣ ದೋಚುವ ಕೆಲಸ ನಡೆದಿದ್ದು, ಅದಕ್ಕೊಂದು ಪರಿಹಾರ ಹುಡುಕುವಲ್ಲಿ ಆ ಯಾಂತ್ರಿಕ ಕಳ್ಳರನ್ನುಸದೆ ಬಡೆಯುವಲ್ಲಿ ಮಾತ್ರ ಪೊಲೀಸರು ಸೇರಿದಂತೆ ಬ್ಯಾಂಕಿನವರು ವಿಫಲವಾಗಿದ್ದಾರೆ.
ಫೋಟೋಗ್ರಾಫರ್ ಸಂಗಣ್ಣ ಕುಂಬಾರ ಎಂಬ ವ್ಯಕ್ತಿಯ ಅಕೌಂಟನಿಂದ ಶುಕ್ರವಾರ ಬೆಳಗ್ಗೆ ಹತ್ತು ಸಾವಿರ ಖಾತೆಯಿಂದ ಅವರಿಗೆ ಗೊತ್ತಿಲ್ಲದಾಗೆ ಲೂಟಿ ಮಾಡಿದ್ದು, ಮತ್ತೆ ಎರಡು ತಾಸಿನೊಳಗೆ ಮತ್ತೆ ಹತ್ತು ಸಾವಿರ ರೂ. ಎಗರಿಸಿದ ಕಥೆ ನಡೆದಿದೆ. ಇದರಿಂದ ರೋಸಿ ಹೋದ ಅವರು, ಬ್ಯಾಂಕಿಗೆ ದೂರು ಕೊಡಲು ತೆರಳಿದರೆ ಅದೇನ್ರಿ ನಮಗೊತ್ತಿಲ್ಲ ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಹಾರಿಕೆ ಉತ್ತರ ಕೊಡುತ್ತಾರೆ. ಠಾಣೆಗೆ ತೆರಳಿದರೆ, ಅದು ಸೈಬರ್ ಕ್ರೈಂಗೆ ಬರುತ್ತದೆ ಅಲ್ಲಿಗೆ ದೂರು ನೀಡಿ ಎಂದು ಕಳುಹಿಸುತ್ತಾರೆ. ಸೈಬರ್ ಕ್ರೈಂ ಕಾಂಪ್ಲೇಟ್ ಸಹಾಯಕ ನಂಬರ 1903 ಗೆ ಕಾಲ್ ಮಾಡಿ ಕಾಂಪ್ಲೇಟ್ ಕೊಟ್ಟರು ಯಾವುದೇ ಪರಿಹಾರ ಕಾಣದಂತಾಗಿದೆ ಎಂದು ದುಡ್ಡು ಕಳೆದುಕೊಂಡ ಸಂಗಪ್ಪ ಕುಂಬಾರ ಮತ್ತು ಬಸವರಾಜ ಹೂಗಾರ ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ಮೊನ್ನೆ ವಕೀಲರೊಬ್ಬರ ಖಾತೆಯಿಂದ ದುಡ್ಡು ಲಪಾಟಿಯಿಸಲಾಯಿತು. ಇದಿಗ ನನ್ನದು 1500 ದುಡ್ಡು ಹೊಡೆದಿದ್ದಾರೆ. ಇದೀಗ ಶುಕ್ರವಾರ ಸಂಗಪ್ಪ ಕುಂಬಾರ ಎಂಬಾತನ ಖಾತೆಯಿಂದ ದುಡ್ಡು ದೋಚಿದ್ದಾರೆ. ಹೀಗೆ ಖದೀಮರ ಅಟ್ಟಹಾಸ ಮುಂದುವರೆದಿದೆ. ಸೈಬರ್ ಕ್ರೈಂ ಕಾಂಪ್ಲೇಟ್ ಕೊಡುವದಷ್ಟೆ ಕೆಲಸವಾಗಿದೆ. ಇದರಿಂದ ಯಾವುದೇ ಪರಿಹಾರ ಕಾಣುವ ಲಕ್ಷಣವಿಲ್ಲ. ಕೂಡಲೇ ಖಾತೆದಾರರು ಎಚ್ಚರಗೊಳ್ಳಬೇಕು. ಎಸ್‍ಬಿಐ, ಕೆನರಾ ಬ್ಯಾಂಕಿನ ಗ್ರಾಹಕರಾದ ನಮ್ಮಗಳ ಖಾತೆಯಿಂದ ಹಣ ದೋಚುತ್ತಿದ್ದಾರೆ. ಅದ್ಯಾವ ರೀತಿ ಹ್ಯಾಕ್ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ಬ್ಯಾಂಕಿನವರು ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಪೊಲೀಸರು ಖದೀಮರನ್ನು ಪತ್ತೆ ಮಾಡಿ ಹಣ ವಸೂಲಿ ಮಾಡಬೇಕಿದೆ. ನಿತ್ಯ ದುಡಿದು ಖಾತೆಯಲ್ಲಿ ಹಣ ಸಂಗ್ರಹಿಸಿಟ್ಟು ನೆಮ್ಮದಿಯಾಗಿ ನಿದ್ದೆ ಮಾಡಬೇಕೆಂದರೆ ಇಂತಹ ಘಟನೆಗಳು ನಿತ್ಯ ಶುರುವಾಗಿವೆ.
-ಬಸವರಾಜ ಹೂಗಾರ. ಖಾತೆಯಿಂದ ಹಣ ಕಳೆದುಕೊಂಡಾತ.
ನಾವ್ಯಾವದು ಓಟಿಪಿ ನಂಬರ್ ಆಗಲಿ ಮತ್ತೊಂದಾಗಲಿ ಹೇಳಿಲ್ಲ. ಯಾರಿಗೂ ಶೇರ್ ಮಾಡಿಲ್ಲ. ನಮ್ಮ ಖಾತೆಯಿಂದ ತನ್ನಿಂದಾನೆ ಹಣ ಲಪಟಾಯಿಸಲಾಗಿದೆ. ನನ್ನ ಖಾತೆಯಿಂದÉರಡು ತಾಸಿನಲ್ಲಿ ಎರಡು ಬಾರಿ ತಲಾ 10 ಸಾವಿರ ರೂಪಾಯಿ ಒಟ್ಟು 20 ಸಾವಿರ ರೂ.ಲಪಟಾಯಿಸಿದ್ದಾರೆ. ಅದ್ಹೇಗೆ ಎಂದು ಬ್ಯಾಂಕ್‍ನವರಿಗೆ ಕೇಳಿದರೆ ಇದು ಫ್ರಾಡ್ ಆಗಿದೆ. ಸೈಬರ್ ಕ್ರೈಂಗೆ ದೂರು ಸಲ್ಲಿಸಲು ತಿಳಿಸುತ್ತಾರೆ. ಪೊಲೀಸ್ ಠಾಣೆಯವರು ಅಷ್ಟೆ ಎಫ್‍ಐಆರ್ ಮಾಡದೆ ಸೈಬರ್ ಕ್ರೈಂ ಕಚೇರಿ ದಾರಿ ತೋರಿಸುತ್ತಿದ್ದಾರೆ. ನಮ್ಮ ಹಣಕ್ಕೆ ಯಾರು ಜವಬ್ದಾರರು.? ನಿತ್ಯ ಈ ಘಟನೆಗಳು ಜರುಗುತ್ತಿವೆ. ಬ್ಯಾಂಕ್‍ನವರೇ ಇದಕ್ಕೆ ಜವಬ್ದಾರರು. ಆದರೆ ಅವರ್ಯಾರು ಸ್ಪಂಧನೆ ನೀಡುತ್ತಿಲ್ಲ ಹಾರಿಕೆ ಉತ್ತರ ನೀಡಿ ನಮ್ಮ ಹೊರ ಹಾಕುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ಲೀಡ್ ಬ್ಯಾಂಕಿ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳಬೇಕು. ಗ್ರಾಹಕರ ಖಾತೆಯಿಂದ ಪೋಲಾಗುವ ಹಣಕ್ಕೆ ಬ್ಯಾಂಕಿನವರೇ ಜವಬ್ದಾರರು. ಈ ಕುರಿತು ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಿವೆ.
-ಸಂಗಪ್ಪ ಕುಂಬಾರ. ನೊಂದ ಎಸ್‍ಬಿಐ ಗ್ರಾಹಕ.
————-