ಆಳಂದಃ ಕೊನೆಗೂ ಶಿವಲಿಂಗುವಿಗೆ ಪೂಜೆ ಸಲ್ಲಿಕೆ, ಈ ವೇಳೆ ವಾಹನಗಳ ಮೇಲೆ ಕಲ್ಲು ತೂರಾಟ, ಪ್ರಕ್ಷುಬ್ಧ ವಾತಾವರಣ
ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ಶಿವಲಿಂಗು ದೇವಾಲಯ

ಆಳಂದಃ ಲಾಡ್ಲೆ ಮಶಾಕ್ ದರ್ಗಾ ಆವರಣದ ರಾಘವ ಚೈತನ್ಯ ಶಿವಲಿಂಗುಗೆ ಗಂಗಾ ಜಲದಿಂದ ಶುದ್ಧಿಕರಣ ಪೂಜೆ
ಕಲ್ಬುರ್ಗಿಃ ಜಿಲ್ಲೆಯ ಆಳಂದ ಪಟ್ಟಣ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿ ಶ್ರೀರಾಘವ ಚೈತನ್ಯ ಶಿವ ಮಂದಿರವಿದ್ದು, ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ಅಲ್ಲಿನ ಶಿವಲಿಂಗು ಮೇಲೆ ಮಲಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ್ದ ಹಿನ್ನೆಲೆ, ನಿನ್ನೆ ಕೇಂದ್ರದ ಮಂತ್ರಿ, ಬೀದರ ಸಂಸದ ಭಗವಂತ ಖೂಬಾ, ಕಲ್ಬುರ್ಗಿ ಜಿಲ್ಲೆಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ರಾಜಕುಮಾರ ಪಾಟೀಲ್ ತೇಲ್ಕರ್, ಬಸವರಾಜ ಮತ್ತಿಮುಡ ಸೇರಿದಂತೆ ಕಡಗಂಚಿ ಶ್ರೀಗಳು, ಜನಪ್ರತಿನಿಧಿಗಳು ರಾಘವ ಚೈತನ್ಯ ಶಿವಲಿಂಗುವಿಗೆ ಗಂಗಾ ಜಲದಿಂದ ಶುದ್ಧಿಕರಣಗೊಳಿಸಿ ವಿಶೇಷಪೂಜೆ ಸಲ್ಲಿಸಿದರು.
ಈ ವೇಳೆ ಆಳಂದ ಪಟ್ಟಣದ ಒಂದು ಸಮುದಾಯ ಕಲ್ಲೂ ತೂರಾಟವು ನಡೆಸಿದೆ ಎನ್ನಲಾಗಿದೆ.
ಇನ್ನೊಂದಡೆ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ, ಆಂದೋಲಾ ಶ್ರೀಮತ್ತು ಚೈತ್ರಾ ಅವರೊಂದಿಗೆ ನೂರಾರು ಕಾರ್ಯಕರ್ತರು ಆಳಂದ ಚಲೋ ಎಂದು ಹೊರಟಿದ್ದಾಗ ಕಲ್ಬುರ್ಗಿ, ಯಾದಗಿರಿ ಮಾರ್ಗ ಮಧ್ಯಯೇ ಪೊಲೀಸರು ತಡೆದಿದ್ದು, ಈ ಮೂವರು ಹಿಂದೂ ಸಮಾಜದ ಪ್ರಮುಖರಿಗೆ ಆಳಂದ ಪ್ರವೇಶ ನಿಷೇಧಿಸಿದ್ದಾರೆ.
ಕಲ್ಬುರ್ಗಿ ಜಿಲ್ಲಾಧಿಕಾರಿಗಳು ಈ ಕುರಿತು ಮೊದಲೇ ಆದೇಶ ಹೊರಡಿಸಿದ್ದರು. ಕಲ್ಬುರ್ಗಿ ಜಿಲ್ಲಾಡಳಿತದೊಂದಿಗೆ ಮಾರುಕತೆ ನಡೆಸಿ ಕೊನೆಗೂ ಶಾಸಕ ದತ್ತಾತ್ರೇಯ ಪಾಟೀಲ್, ಭಗವಂತ ಖೂಬಾ, ರಾಜಕುಮಾರ ಪಾಟೀಲ್ ತೇಲ್ಕರ್, ಬಸವರಾಜ ಮತ್ತಿಮುಡ ಸೇರಿದಂತೆ ಇತರರು ಶಿವಲಿಂಗುಗೆ ಪೂಜೆ ಸಲ್ಲಿಸಿದ್ದಾರೆ.
ಆದಾಗ್ಯು ಹೊರಗಡೆ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಸಮುದಾಯ, ಮಾಧ್ಯಮದವರ, ಜನಪ್ರತಿನಿಧಿಗಳ, ಪೊಲೀಸ ವಾಹನಗಳ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ. ಸದ್ಯ ಆಳಂದ ಬೂದಿ ಮುಚ್ಚಿದ ಕೆಂಡ ವಾತಾವರಣವಿದೆ.
ಕೇಂದ್ರದ ಮಂತ್ರಿಗಳ ಸಂಕಲ್ಪದಂತೆ ಗಂಗಾಜಲದಿಂದ ಆಳಂದ ದ ರಾಘವ ಚೈತನ್ಯ ಶಿವಲಿಂಗು ಶುದ್ದಿಗೊಳಿಸಿ ಪೂಜೆ ಸಲ್ಲಿಸಲಾಗಿದೆ.
-ದತ್ತಾತ್ರೇಯ ಪಾಟೀಲ್. ಶಾಸಕರು. ಕಲ್ಬುರ್ಗಿ.