ಸ್ವಾತಂತ್ರ್ಯ ಅಮೃತ ಮಹೋತ್ಸವ – ಜೂ.1 ರಂದು ಶೈಕ್ಷಣಿಕ ಓಟ
ಜೈನ್ ಸೋಷಿಯಲ್ ಗ್ರೂಪ್‍ನಿಂದ ಶೈಕ್ಷಣಿಕ ಓಟ- ದಿನೇಶ್
ಜೂ.1 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ
ಜೈನ್ ಸೋಷಿಯಲ್ ಗ್ರೂಪ್‍ನಿಂದ ಶೈಕ್ಷಣಿಕ ಓಟ- ದಿನೇಶ್
yadgiri, ಶಹಾಪುರಃ ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಸುವರ್ಣ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಜೂ.1 ರಂದು ಶಹಾಪುರ ಜೈನ್ ಸೋಷಿಯಲ್ ಗ್ರೂಪ್ ವತಿಯಿಂದ ಶೈಕ್ಷಣಿಕ ಜಾಗೃತಿ ಓಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೈನ್ ಸೋಷಿಯಲ್ ಗ್ರೂಪ್ ಅಧ್ಯಕ್ಷ ದಿನೇಶ್ ಜೈನ ತಿಳಿಸಿದರು.
ನಗರದ ಸ್ಥಳೀಯ ಸಪಪೂ ಕಾಲೇಜಿನಲ್ಲಿ ಗ್ರೂಪ್ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂದು ಬೆಳಗಿನ 6 ಗಂಟೆಯ ಸುಮಾರಿಗೆ ನಗರದ ಕ್ರೀಡಾಂಗಣದಿಂದ ಈ ಓಟ ಪ್ರಾರಂಭಗೊಂಡು, ನಗರದ ಪ್ರಮುಖ ರಸ್ತೆಗಳಾದ ದಿಗ್ಗಿಬೇಸ್, ಗಾಂಧಿಚೌಕ್, ಮೋಚಿಗಡ್ಡಾ, ಬಸವೇಶ್ವರ ವೃತ್ತದ ಮೂಲಕ ವಾಲ್ಮೀಕಿ ಚೌಕನಿಂದ ಹೊರಹೊಲಯದಲ್ಲಿರುವ ಮಗನಲಾಲ್ ಜೈನ ಶಾಲೆಯ ಅವರಣದಲ್ಲಿ ಸಮಾರೋಪಗೊಳ್ಳಲಿದೆ. 19 ವರ್ಷ ಮೇಲ್ಪಟ್ಟ ವಯಸ್ಸಿನವರು ಮತ್ತು 19 ವಯಸ್ಸಿನ ಒಳಗಡೆಯ ವಯಸ್ಸಿನ ಯುವಕರು ಈ ಓಟದಲ್ಲಿ ಪಾಲ್ಗೊಳ್ಳಬಹುದಾಗಿದೆ. ಓಟದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೆ ಅಮೃತ ಮಹೋತ್ಸವದ ಸವಿ ನೆನಪಿನ ಟೀ ಶರ್ಟ್ ಮತ್ತು ಸೂಕ್ತ ಬಹುಮಾನ ನೀಡಲಾಗುತ್ತಿದೆ ಎಂದು ವಿವರಿಸಿದರು.
ಓಟದಲ್ಲಿ ಪಾಲ್ಗೊಂಡ ಓಟಗಾರರಿಗಾಗಿ ರಸ್ತೆಯ ಹತ್ತಿರಗಳಲ್ಲಿ ವಿವಿಧ 6 ಸ್ಟಾಲ್ ಗಳನ್ನು ಓಪನ್ ಮಾಡಲಾಗುತ್ತಿದೆ. ಸ್ಟಾಲ್‍ಗಳಲ್ಲ ಓಟಗಾರರಿಗೆ ತಂಪು ಪಾನೀಯ ವ್ಯವಸ್ಥೆ ಮಾಡಲಾಗಿರುತ್ತದೆ. ಈ ಓಟದಲ್ಲಿ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸೇರಿದಂತೆ ಮುಂಜಾಗೃತವಾಗಿ ಅಂಬ್ಯೂಲೆನ್ಸ್ ವ್ಯವಸ್ಥೆಯು ಕಲ್ಪಿಸಲಾಗಿದೆ.
ಅಲ್ಲದೆ ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಇರಲಿದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಭಾಗವಹಿಸುವ ನಿರೀಕ್ಷೆ ಇದ್ದು, ಸ್ಥಳೀಯ ಶಾಸಕರು, ಮಾಜಿ ಶಾಸಕರು ಸೇರಿದಂತೆ ವಿವಿಧ ಇಲಾಖೆಯ ಪ್ರಮುಖ ಅಧಿಕಾರಿಗಳು ದೇಶ ಭಕ್ತರು ಭಾಗವಹಿಸಲಿದ್ದಾರೆ. ಹೀಗಾಗಿ ತಾವೆಲ್ಲರೂ ಅಂದು ಕೈಜೋಡಿಸಿ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ರಂಗು ತರಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ರಮೇಶ ಜೈನ್, ರಾಖೇಶ ಜೈನ್ ಮತ್ತು ರಾಜೇಶ್ ಜೈನ್ ಉಪಸ್ಥಿತರಿದ್ದರು.