ಪ್ರಮುಖ ಸುದ್ದಿಬಸವಭಕ್ತಿ

ಅಂಜನಾದ್ರಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದ ಬ್ರಿಟಿಷ್ ರಾಯಭಾರಿ

ಶ್ರದ್ಧಾ-ಭಕ್ತಿ ಮೆರೆದ ಬ್ರಿಟಿಷ್ ರಾಯಭಾರಿ ದಂಪತಿಗಳು

ಅಂಜನಾದ್ರಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದ ಬ್ರಿಟಿಷ್ ರಾಯಭಾರಿ

ವಿಶ್ವ ವಿಖ್ಯಾತ ಸುಕ್ಷೇತ್ರಃ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸುವ ಕೆಲಸವಾಗಲಿ – ಅಲೋನ್ ಜಮೇಲ್

ಗಂಗಾವತಿಃ ಪುರಾಣ ಪ್ರಸಿದ್ಧ ಸುಕ್ಷೇತ್ರ ವಿಶ್ವಖ್ಯಾತಿಯ ಆಂಜನೇಯನ ಜನ್ಮ ಸ್ಥಳ ಕಿಷ್ಕಿಂದೆ ಅಂಜನಾದ್ರಿ ಬೆಟ್ಟಕ್ಕೆ ಇಂದು ಬ್ರಿಟಿಷ್ ರಾಯಭಾರಿ ಅಲೋನ್ ಜಮೇಲ್ ಪತ್ನಿ ಸಮೇತ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದರು.

ಸುಮಾರು 575 ಮೆಟ್ಟಿಲುಗಳನ್ನು ಹತ್ತಿದ ಈ ದಂಪತಿಗಳು ಹಣೆಗೆ ತಿಲಕವಿಟ್ಟುಕೊಂಡು ಹಿಂದೂ ಸಂಪ್ರದಾಯ, ಪದ್ಧತಿಯಂತೆ ಶ್ರದ್ಧಾಪೂರ್ವಕ ಹನುಮನ ದರ್ಶನ ಪಡೆದು ಭಕ್ತಿಭಾವ ಮೆರೆದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಸುಕ್ಷೇತ್ರಕ್ಕೆ ಪ್ರವಾಸಿಗರು ಸುಲಭವಾಗಿ ಆಗಮಿಸಲು, ವಿಮಾನ, ಟ್ರೇನ್ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲಿನ ಸರ್ಕಾರ ಕೂಡಲೇ ಆ ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಕ್ಷೇತ್ರದ ಪಾವಿತ್ರ್ಯತೆ ಕಾಪಾಡಲು ಮೂಲ ಸೌಕರ್ಯ ಒದಗಿಸುವದು ಅಗತ್ಯವಿದೆ. ಇದು ವಿಶ್ವ ಖ್ಯಾತಿಯ ಪವಿತ್ರ ಕ್ಷೇತ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಬ್ರಿಟಿಷ್ ರಾಯಭಾರಿ ದಂಪತಿಗಳನ್ನು ಶ್ರೀಕ್ಷೇತ್ರದಿಂದ ಸನ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button