ಮಾ.7 ರಂದು ಬೆಂಗಳೂರ ಚಲೋ – ಶಿವಕುಮಾರ ದೊಡ್ಮನಿ
ಮಾ.7 ರಂದು ಬೆಂಗಳೂರ ಚಲೋ
ಶಹಾಪುರಃ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್‍ನಲ್ಲಿ ಮಾರ್ಚ್ 7 ರಂದು ನಡೆಯಲಿರುವ ಬೃಹತ್ ಜನಾಂದೋಲನ ರ್ಯಾಲಿಯಲ್ಲಿ ಮಾದಿಗ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಮಾದಿಗ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ದೊಡ್ಮನಿ ಮನವಿ ಮಾಡಿದ್ದಾರೆ.
ನ್ಯಾ,ಸದಾಶಿವ ಆಯೋಗ ವರದಿ ಜಾರಿಗಾಗಿ ಬೃಹತ್ ರ್ಯಾಲಿಯಲ್ಲಿ ಮಾದಿಗ ಸಮಾಜದ ಶಕ್ತಿ ಪ್ರದರ್ಶನ ಮಾಡಬೇಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬರಬು ತಪ್ಪದೆ ಭಾಗವಹಿಸುವ ಮೂಲಕ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಕಾರಣ ಸಮಾಜ ಬಂಧೂಗಳು ಮಾ.7 ರಂದು ಬೆಂಗಳೂರ ಚಲೋ ನಡೆಸಬೇಕು. ಅಂದು ಫ್ರೀಡಂಪಾರ್ಕ್‍ನಲ್ಲಿ ಸಮುದಾಯ ಲಕ್ಷಾಂತರ ಜನ ಸೇರುವ ಮೂಲಕ ನ್ಯಾಯಕ್ಕಾಗಿ ಒಕ್ಕೊರಲಿನ ಕೂಗು ಸರ್ಕಾರವನ್ನು ನಡುಗಿಸಬೇಕಿದೆ.
ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಅದರಲ್ಲೂ ಯುವಕರು ತಪ್ಪದೆ ಈ ಆಂದೋಲನದಲ್ಲಿ ಭಾಗವಹಿಸಬೇಕು. ಆಂದೋಲನಕ್ಕೆ ಬರುವಾಗ ಮುನ್ನೆಚ್ಚರಿಕೆಯೊಂದಿಗೆ ಸುವ್ಯವಸ್ಥೆ ಮಾಡಿಕೊಂಡು ಬೆಂಗಳೂರಿಗೆ ಬನ್ನಿ ಎಂದು ಕಾರ್ಯದರ್ಶಿ ಗುರು ದೇವಿ ನಗರ, ಸಂಘಟನಾ ಕಾರ್ಯದರ್ಶಿ ಅವಿನಾಶ ಗುತ್ತೇದಾರ ಕರೆ ನೀಡಿದ್ದಾರೆ.