ಪ್ರಮುಖ ಸುದ್ದಿ
ಬಾರ್, ಪಬ್ ಗಳಲ್ಲಿ ರಾತ್ರಿ 9 ಕ್ಕೆ ಸರ್ವೀಸ್ ಸ್ಥಗಿತ, ಇಂದಿನಿಂದ ನೈಟ್ ಕರ್ಫ್ಯೂ ಆರಂಭ

ಬಾರ್, ಪಬ್ ಗಳಲ್ಲಿ ರಾತ್ರಿ 9 ಕ್ಕೆ ಸರ್ವೀಸ್ ಸ್ಥಗಿತ, ಇಂದಿನಿಂದ ನೈಟ್ ಕರ್ಫ್ಯೂ ಆರಂಭ
ಬೆಂಗಳೂರಃ ಓಮಿಕ್ರಾನ್ ಹೆಚ್ಚಳ ಹಿನ್ನೆಲೆ ಸರ್ಕಾರ ಜಾರಿಗೊಳಿಸಿದ ನೈಟ್ ಕರ್ಫ್ಯೂನಿಂದಾಗಿ ಪಬ್, ಬಾರ್& ರೆಸ್ಟೋರೆಂಟ್ ಗಳಲ್ಲಿ ರಾತ್ರಿ 9 ಗಂಟೆಗೆ ಸರ್ವೀಸ್ ಸ್ಥಗಿತಗೊಳಿಸಲು ಕೋವಿಡ್ ನಿಯಮ ಜಾರಿಗೊಳಿಸಲಾಗಿದೆ
ಇಲ್ಲವಾದಲ್ಲಿ ಗ್ರಾಹಕರನ್ನು ನಿಭಾಯಿಸುವದು ಕಷ್ಟವಾಗಲಿದೆ ಎನ್ನಲಾಗಿದೆ. 9 ಗಂಟೆ ನಂತರ 10 ಗಂಟೆವರೆಗೆ ಮಾತ್ರ ಪಾರ್ಸೆಲ್ ಗೆ ಅವಕಾಶ ಕಲ್ಪಿಸಲಾಗಿದೆ.
ಸರ್ಕಾರ ಜಾರಿಗೊಳಿಸಿದ ಕೋವಿಡ್ ನಿಯಮಗಳನ್ನು ಬಾರ್ & ರೆಸ್ಟೋರೆಂಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದೆ ಎನ್ನಲಾಗಿದೆ.
ಕೋವಿಡ್ ನಿಂದಾಗಿ ಹೊಟೇಲ್, ಬಾರ್, ರೆಸ್ಟೋರೆಂಟ್ ಗಳು ನಷ್ಟದಲ್ಲಿ ಮುಳುಗಿವೆ. ಇವುಗಳನ್ನೆ ನಂಬಿ ಬದುಕು ಕಟ್ಟಿಕೊಂಡವರಿಗೆ ಇದರಿಂದ ಸಾಕಷ್ಟು ತೊಂದರೆಯಾಗಿದೆ ಎಂದು ಬಾರ್, ಪಬ್, ಮಾಲೀಕರು ಅಳಲು ತೋಡಿಕೊಂಡಿದ್ದಾರೆ.