ಪ್ರಮುಖ ಸುದ್ದಿಬಸವಭಕ್ತಿ

ಬಸವ ಜಯಂತಿಃ ಸಂಭ್ರಮದ ಮೆರವಣಿಗೆ, ಡಿಜೆ ಸೌಂಡಿಗೆ ಯುವಕರ ಕುಣಿತ, ಅನ್ನ ದಾಸೋಹ

ಕಣ್ಮನ ಸೆಳೆದ ಡೋಲು ಕುಣಿತ

ಬಸವ ಜಯಂತಿಃ ಸಂಭ್ರಮದ ಮೆರವಣಿಗೆ

ಡಿಜೆ ಸೌಂಡಿಗೆ ಯುವಕರ ಕುಣಿತ, ಕಣ್ಮನ ಸೆಳೆದ ಡೋಲು ಕುಣಿತ, ಅನ್ನ ದಾಸೋಹ

yadgiri,ಶಹಾಪುರಃ ಬಸವ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಬಸವೇಶ್ವರರ ಭಾವಚಿತ್ರದೊಂದಿಗೆ ಸಿಪಿಎಸ್ ಶಾಲಾ ಮೈದಾನದಿಂದ ಸಂಭ್ರಮದ ಬೃಹತ್ ಮೆರವಣಿಗೆ ಆರಂಭಗೊಂಡು ಹಳೇ ಬಸ್ ನಿಲ್ದಾಣ, ಬಸವೇಶ್ವರರ ವೃತ್ತ, ಮೋಚಿ ಗಡ್ಡಾ ಮೂಲಕ ಗಾಂಧಿ ವೃತ್ತದಿಂದ ಚರಬಸವೇಶ್ವರ ಗದ್ದುಗೆ ತಲುಪಿತು.
ಲಿಂಗಾಯತ ವೀರಶೈವ ಸಮಾಜ ತಾಲೂಕು ಘಟಕ ಹಾಗೂ ಯುವ ಘಟಕ ನೇತೃತ್ವದಲ್ಲಿ ಸಂಭ್ರಮದ ಮೆರವಣಿಗೆ ಆಯೋಜಿಸಲಾಗಿತ್ತು. ಮೆರವಣಿಗೆಯಲ್ಲಿ ಡಿಜೆ ಸಂಗೀತ ನಾದಕ್ಕೆ ಯುವಕರು ಭರ್ಜರಿ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

ಮಹಾರಾಷ್ಟ್ರದಿಂದ ಆಗಮಿಸಿದ್ದ ಡೋಲು ಬಾರಿಸುವ ವಿಶೇಷ ತಂಡ ಮಹಿಳೆಯರು ಮತ್ತು ಪುರುಷರು ಡೋಲು ಕುಣಿತದ ಮೂಲಕ ಮನಸೂರೆಗೊಂಡರು. ಮಾರ್ಗ ಮಧ್ಯ ಯುವಕರು ಜಯಘೋಷಗಳು ಮುಗಿಲು ಮುಟ್ಟುತ್ತಿದ್ದವು. ಕಳೆದ ಎರಡು ವರ್ಷದಿಂದ ಕೋವಿಡ್ ಹಿನ್ನೆಲೆ ಸರಳವಾಗಿ ಬಸವ ಜಯಂತಿ ಆಚರಣೆ ಮಾಡಲಾಗಿತ್ತು. ಈ ಬಾರಿ ಕೋವಿಡ್ ನಿಯಮ ಅಡ್ಡಿಯಾಗದ ಕಾರಣ ಯುವಕರು ಫುಲ್ ಜೋಶ್ ನಲ್ಲಿ ಬಸವ ಜಯಂತಿ ಆಚರಣೆಯಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಗುರು ಪಾಟೀಲ್, ಹಿರಿಯರಾದ ಮಲ್ಲಣ್ಣ ಮಡ್ಡಿ ಸಾಹು, ಸುರೇಂದ್ರ ಪಾಟೀಲ್ ಮಡ್ನಾಳ, ಶಿವರಾಜ ದೇಶಮುಖ, ಮಹೇಶ ಆನೇಗುಂದಿ, ಮಹಾದೇವ ಚಟ್ರಿಕಿ, ಗುರು ಕಾಮಾ, ಮಲ್ಲಿಕಾರ್ಜುನ ಬುಕಿಸ್ಟಗಾರ, ರವಿ ಮೋಟಗಿ, ಮಲ್ಲಿಕಾರ್ಜುನ ದೇಸಾಯಿ ಸೇರಿದಂತೆ ಇತರರಿದ್ದರು. ಇದೇ ವೇಳೆ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ನಿರತ ಬಸವ ಅನುಯಾಯಿಗಳಿಗೆ ಪಾನಕ ವಿತರಿಸುವ ಮೂಲಕ ಸೌಹಾರ್ಧತೆ ಮೆರೆದರು.

ಕಿರಾಣಿ ವ್ಯಾಪಾರಸ್ಥರಿಂದ ಅನ್ನ ದಾಸೋಹ

ಬಸವ ಜಯಂತಿ ಹಿನ್ನೆಲೆ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಇಲ್ಲಿನ ಕಿರಾಣಿ ವ್ಯಾಪಾರಸ್ಥರ ಸಂಘ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದರು. ಸ್ವತಃ ವ್ಯಾಪಾರಸ್ಥರು ಅನ್ನ ನೀಡುವ ಮೂಲಕ ಸೇವೆ ಗೈದರು. ನೂರಾರು ಜನ ಅನ್ನ, ನೀರು ಸೇವಿಸಿ ತೃಪ್ತಭಾವ ವ್ಯಕ್ತಪಡಿಸಿದರು. ಈ ಕಾರ್ಯದಲ್ಲಿ ಮುಖಂಡರಾದ ರಾಜು ಆನೇಗುಂದಿ, ಜಗಧೀಶ ಹೊನ್ಕಲ್, ಬಸವರಾಜ ಮದ್ದೀನ್, ಶಾಂತು ತೋಟಗೇರ, ಬಸವರಾಜ ಕಡಗಂಚಿ, ಪ್ರಶಾಂತ ಸಜ್ಜನ್, ಮಹಾಂತೇಶ ರಾಂಪೂರ, ಮಂಜು ಲಾಳಸಂಗಿ, ಶಿವು ಚೌದ್ರಿ, ಶ್ರೀಶೈಲ ಆನೇಗುಂದಿ ಇತರರು ಭಾಗವಹಿಸಿದ್ದರು.

ಕಾರ್ ಮತ್ತು ಬೈಕ್ ರ್ಯಾಲಿ

ಬಸವ ಜಯಂತಿ ಅಂಗವಾಗಿ ನಗರದ ಚರಬಸವೇಶ್ವರ ಗದ್ದುಗೆಯಿಂದ ಕಾರ್ ಮತ್ತು ಬೈಕ್ ರ್ಯಾಲಿ ಬೆಳಗ್ಗೆ 12 ಗಂಟೆಗೆ ಜರುಗಿತು. ವೀರಶೈವ ಯುವ ಘಟಕ ನೇತೃತ್ವದಲ್ಲಿ ರ್ಯಾಲಿ ಜರುಗಿದ್ದು, ನೂರಾರು ಕಾರುಗಳು ಮತ್ತು ಬೈಕ್ ಗಳ ಮೇಲೆ ಯುವಕರು ಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆಗಳು ಮೊಳಗಿಸಿದರು.
ನಗರದ ಸಿಬಿ ಕಮಾನದಿಂದ, ಬಸವೇಶ್ವರ ವೃತ್ತ, ಹೊಸ ಬಸ್ ನಿಲ್ದಾಣ, ಆಸರ್ ಮೊಹಲ್ಲಾ ದಿಂದ ಮೋಚಿಗಡ್ಡಾ, ಗಾಂಧಿ ವೃತ್ತ ಮೂಲಕ ದಗ್ಗಿ ಬೇಸ್ ನಿಂದ ಪುನಃ ಚಬ ಗದ್ದುಗೆ ಆವರಣ ತಲುಪಿತು. ಯುವಕರೆಲ್ಲರೂ ಕೊರಳಲ್ಲಿ ಕೇಸರಿ ಶಾಲು, ತಲೆ ಮೇಲೆ ಬಿಳಿ ಟೋಪಿ, ಷಟಸ್ಥಲ ಇರುವ ಸ್ಟಿಕರ್ ಎಲ್ಲಾ ವಾಹನಗಳಿಗೂ ಅಂಟಿಸಲಾಗಿತ್ತು. ಶ್ರದ್ಧಾ ಭಕ್ತಿಯಿಂದ ರ್ಯಾಲಿ ನಡೆಯಿತು. ಯುವಕರೆಲ್ಲರೂ ಸಂಭ್ರಮದಿಂದ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button