ಯಾದಗಿರಿ: ಮೇ. 2 ರಂದು ಬಸವ ಜಯಂತ್ಯುತ್ಸವಕ್ಕೆ ಮಾಜಿ ಸಿಎಂ ಶೆಟ್ಟರ್ ಚಾಲನೆ
ಮೇ.2 ಕ್ಕೆ ಮಾಜಿ ಸಿಎಂ ಜಗಧೀಶ ಶೆಟ್ಟರ್ ಯಾದಗಿರಿಗೆ ಆಗಮನ
ಮೇ.2 ಕ್ಕೆ ಮಾಜಿ ಸಿಎಂ ಜಗಧೀಶ ಶೆಟ್ಟರ್ ಯಾದಗಿರಿಗೆ ಆಗಮನ
ಯಾದಗಿರಿಃ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಯಾದಗಿರಿ ಮತ್ತು ಬಸವ ಜಯಂತ್ಯುತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಬಸವ ಜಯಂತಿ ಹಾಗೂ ವಿಶೇಷ ಪ್ರವಚನ ಕಾರ್ಯಕ್ರಮ ಮೇ.2 ಮತ್ತು 3 ರಂದು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ ಮೇ.2 ರಂದು ಶರಣ ನಗರದ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಸಂಜೆ 5 ಗಂಟೆಗೆ ಹಮ್ಮಿಕೊಂಡ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯವನ್ನು ಇಲಕಲ್ ನ ಶ್ರೀ ವಿಜಯ ಮಹಾಂತೇಶ್ವರ ಮಠದ ಶ್ರಿ. ಮ.ನಿ.ಪ್ರ. ಗುರುಮಹಾಂತ ಸ್ವಾಮೀಜಿ ವಹಿಸಲಿದ್ದಾರೆ. ಬಾಗಲಕೋಟೆ ಶಿರೂರಿನ ಡಾ. ಬಸವಲಿಂಗ ಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಶ್ರೀ ಗುರು ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಲಿಂಗಸೂಗೂರಿನ ಸಿದ್ದಲಿಂಗ ಸ್ವಾಮಿಜಿ, ಶರಣಬಸವೇಶ್ವರ ದೇವಸ್ಥಾನದ ಶ್ರೀ ನಾಗೇಶ ಸ್ವಾಮೀಜಿ ಸಮ್ಮುಖ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅದ್ಯಕ್ಷರೂ ಲಿಂಗಸೂಗುರು ನಯೋಪ್ರಾ ಅಧ್ಯಕ್ಷ ಡಾ. ಶಿವಬಸಪ್ಪ ಹೆಸರೂರು, ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಯಂತ್ಯುತ್ಸವ ಸಮಿತಿ ಅಧ್ಯಕ್ಷರಾದ ಮಹೇಶ್ಚಂದ್ರ ವಾಲಿ ವಹಿಸುವರು, ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಂಗಪ್ಪ ಲಾಳಸಂಗಿ ಉಪಸ್ಥಿತಿ ವಹಿಸುವರು.
ಕಾರ್ಯಕ್ರಮದಲ್ಲಿ ಸರ್ವಜಾತಿ ಸರ್ವ ಧರ್ಮ ಅಧ್ಯಕ್ಷರುಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ಗುಂಡಪ್ಪ ಕಲ್ಬುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದು, ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.