ಪ್ರಮುಖ ಸುದ್ದಿ

ಬೈಕ್ ಸವಾರರಿಗೆ ಮಾಸ್ಕ್ ವಿತರಿಸಿದ Bgudi ಪಿಎಸ್‍ಐ ಜಾಮಗೊಂಡ

ಜಾಮಗೊಂಡ ಮಾನವೀಯ ಕಾರ್ಯಕ್ಕೆ ಜನರ ಮೆಚ್ಚುಗೆ

ಶಹಾಪುರಃ ಕೊರೊನಾ ಸೋಂಕು ತಗುಲದಂತೆ ಎಚ್ಚರಿಕೆವಹಿಸುವ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಕೊರೊನಾ ಮಹಾಮಾರಿಯಿಂದ ದೂರ ಉಳಿಯಬಹುದು ಎಂದು ಭೀಮರಾಯನ ಗುಡಿ ಪಿಎಸ್‍ಐ ರಾಜಕುಮಾರ ಜಾಮಗೊಂಡ ತಿಳಿಸಿದರು.

ಮಾಸ್ಕ್ ಧರಿಸುವದು ಕಡ್ಡಾಯಗೊಳಿಸಿದ್ದರೂ ಶನಿವಾರ ಭೀ.ಗುಡಿ ಠಾಣೆ ಎದುರಿನ ರಾಜ್ಯ ಹೆದ್ದಾರಿ ಮೇಲೆ ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದ ನಾಗರಿಕರಿಗೆ ಮಾಸ್ಕ್ ವಿತರಿಸಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕೊರೊನಾ ಎಂಬ ಮಹಾಮಾರಿಯಿಂದ ಬಚಾವ್ ಆಗಲು ಸ್ಯಾನಿಟೈಸರ್ ಬಳಕೆ, ಅಥವಾ ಸಾಬೂನಿನಿಂದ ಆಗಾಗ ಕೈ ತೊಳೆದುಕೊಳ್ಳುವದು ಸೇರಿದಂತೆ ಮುಖಕ್ಕೆ ಮಾಸ್ಕ್ ಧರಿಸುವದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡಲ್ಲಿ ಕೊರೊನಾದಿಂದ ಬಚಾವ್ ಆಗಬಹುದು. ಅನಗತ್ಯ ಓಡಾಟ ಸರಿಯಲ್ಲ.

ಅಗತ್ಯ ಎನಿಸಿದಲ್ಲಿ ಮಾತ್ರ ಹೊರಗಡೆ ಬರಬೇಕು. ಎಲ್ಲೂ ಉಗಳಬಾರದು. ಇವೆಲ್ಲ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಿದಲ್ಲಿ ಜನರು ಸುರಕ್ಷಿತವಾಗಿರಬಹುದು ಎಂದು ಅವರು ತಿಳಿಸಿದರು.
ಅಲಕ್ಷತನ ಬೇಡ. ಕೊರೊನಾ ಕುರಿತು ಭಯವು ಬೇಡ. ಆದರೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ನೀಡಿರುವ ಸೂಚನೆ ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಕಠಿಣ ಕ್ರಮಕೈಗೊಳ್ಳುವದು ಅನಿವಾರ್ಯ ಎಂದರು.

ಪಿಎಸ್‍ಐ ಜಾಮಗೊಂಡ ಅವರು, ತಮ್ಮ ಕರ್ತವ್ಯದ ನಡುವೆಯು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಸಾರ್ವಜನಿಕರಿಗೆ ಹತ್ತಿರವಾಗಿದ್ದಾರೆ. ಫಸ್ಟ್ ಲಾಕ್ ಡೌನ್ ನಲ್ಲಿ 15 ದಿನಗಳ ಕಾಲ ಹಸಿದವರಿಗೆ ಅನ್ನ, ನೀರು ಹಂಚುವ ವ್ಯವಸ್ಥೆ ಮಾಡಿದ್ದರು. ಇದೀಗ ಮಾಸ್ಕ್ ಉಚಿತವಾಗಿ ವಿತರಿಸುವ ಮೂಲಕ ಮನಸೂರೆಗೊಂಡಿದ್ದಾರೆ. ಆನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನಬಹುದು.

Related Articles

Leave a Reply

Your email address will not be published. Required fields are marked *

Back to top button