ಪ್ರಮುಖ ಸುದ್ದಿ
ಭಾರತ ಲಾಕ್ ಡೌನ್ ಮಾಡುವದೇ ಸೂಕ್ತಃ ಸಾಂಕ್ರಮಿಕ ರೋಗ ತಜ್ಞ ಆಂಥೋನಿ ಫೌಸಿ
ಭಾರತ ಲಾಕ್ ಡೌನ್ ಮಾಡುವದೇ ಸೂಕ್ತಃ ಸಾಂಕ್ರಮಿಕ ರೋಗ ತಜ್ಞ ಆಂಥೋನಿ ಫೌಸಿ
ವಿವಿ ಡೆಸ್ಕ್ಃ ಭಾರತದಲ್ಲಿ ಕೊರೊನಾ ತೀವ್ರತೆ ಗಮನಿಸಿದರೆ, ಕೆಲ ವಾರಗಳವರೆಗೆ ಸಂಪೂರ್ಣ ಲಾಕ್ ಡೌನ್ ಮಾಡುವದು ಉತ್ತಮ ಎಂದು ಅಮೇರಿಕಾದ ಸಾಂಕ್ರಮಿಕ ರೋಗ ತಜ್ಞ ಆಂಥೋನಿ ಫೌಸಿ ಸಲಹೆ ನೀಡಿದ್ದಾರೆ.
ಕೊರೊನಾ ವೈರಸ್ ತಡೆಗಟ್ಟಲು ತಕ್ಷಣಕ್ಕೆ ಭಾರತದಲ್ಲಿ ಲಾಕ್ ಡೌನ್ ಘೋಷಿಸುವದು ಅಗತ್ಯವಿದೆ. ಮಹಾಮಾರಿ ಎರಡನೇ ಅಲೆ ಕಡಿಮೆ ಯಾಗುವ ಯಾಬುದೇ ಲಕ್ಷಣಗಳು ಕಂಡು ಬರುತ್ತಿಲ್ಲ.
ಅಲ್ಲಿನ ಬಿಕ್ಕಟ್ಟಿನ ಪರಿಣಾಮ ನೋಡಿದರೆ ಕೊರೊನಾ ಕಾರ್ಯಪಡೆಗಳನ್ನು ಒಂದೂಗೂಡಿಸುವತ್ತ ಮೊದಲು ಗಮನಹರಿಸಬೇಕಿದೆ. ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಮೊದಲು ದೇಶವನ್ನು ಲಾಕ್ ಡೌನ್ ಮಾಡಿ. ಸದ್ಯ ಇದೇ ಮುಖ್ಯಕೆಲಸವೆಂದು ಅವರು ತಿಳಿಸಿದ್ದಾರೆ.
ಚಿಕಿತ್ಸೆಗೆ ಬೇಕಾದ ಆಮ್ಲಜನಕ, ವೆಂಟಿಲೇಟರ್, ಪಿಪಿಇ ಕಿಟ್ ಇತರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ನಿಂದ ಕೊರೊನಾ ಚೈನ್ ಕೊನೆಗಾಣಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.