Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಹಾಗಲಕಾಯಿ ತಿಂದ ನಂತರ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ!

ಹಾಗಲಕಾಯಿ ಸೇವನೆಯೂ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ. ಇದು ರುಚಿಯಲ್ಲಿ ಕಹಿಯಾಗಿರುತ್ತದೆ. ಆದರೆ ಇದರ ಸೇವನೆಯೂ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಹಾಗಲಕಾಯಿ ಸೇವನೆಯೂ ಮಧುಮೇಹ ರೋಗಿಗಳಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಹಾಗಲಕಾಯಿ ಸೇವಿಸಿದ ನಂತರ ಕೆಲವೊಂದು ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಮೊಸರು: ಆಹಾರದ ಜೊತೆಗೆ ಮೊಸರನ್ನು ತಿನ್ನುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಕೆಲ ತರಕಾರಿಗಳೊಂದಿಗೆ ಮೊಸರು ಸೇವಿಸಿದರೆ ಹಲವು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಮೂಲಂಗಿ: ಮೂಲಂಗಿ ಅಥವಾ ಮೂಲಂಗಿಯಿಂದ ಮಾಡಿದ ಯಾವುದನ್ನೂ ತಿನ್ನಬೇಡಿ. ಹೀಗೆ ಮಾಡುವುದರಿಂದ ದೇಹಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಮೂಲಂಗಿ ಮತ್ತು ಹಾಗಲಕಾಯಿ ಕಹಿ ಪರಿಣಾಮವು ವಿಭಿನ್ನವಾಗಿರುತ್ತದೆ. ಇದರಿಂದ ಗಂಟಲಿನ ಸಮಸ್ಯೆ, ಅಸಿಡಿಟಿ ಮತ್ತು ಕಫದಂತಹ ಸಮಸ್ಯೆಗಳು ನಿಮಗೆ ಬರಬಹುದು. ಹಾಗಾಗಿ ಹಾಗಲಕಾಯಿ ತಿಂದ ನಂತರ ಮೂಲಂಗಿಯನ್ನು ಸೇವಿಸಬಾರದು. ಹಾಲು ಕುಡಿಯಬೇಡಿ: ಹಾಗಲಕಾಯಿ ತಿಂದ ನಂತರ ಹಾಲು ಕುಡಿಯುವುದು ಒಳ್ಳೆಯದಲ್ಲ.

ಹೀಗೆ ಮಾಡುವುದರಿಂದ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಮಲಬದ್ಧತೆ, ಹೊಟ್ಟೆ ಉರಿ ಉಂಟಾಗುತ್ತದೆ. ಬೆಂಡೆಕಾಯಿ ತಿನ್ನಬೇಡಿ: ಹಾಗಲಕಾಯಿ ತಿಂದ ನಂತರ ಬೆಂಡೆಕಾಯಿಯಂತಹ ತರಕಾರಿಗಳನ್ನು ಸೇವಿಸಬಾರದು. ಹಾಗಲಕಾಯಿ ಕಹಿ ಮತ್ತು ಬೆಂಡೆಕಾಯಿಯ ಲೋಳೆ ಅಂಶ ಸೇರಿದಾಗ ಜೀರ್ಣವಾಗಲು ಕಷ್ಟವಾಗುತ್ತದೆ. ಹಾಗಾಗಿ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಮಾವಿನ ಹಣ್ಣು: ಹಾಗಲಕಾಯಿಯೊಂದಿಗೆ ಮಾವಿನ ಹಣ್ಣನ್ನು ಸೇವಿಸಿದರೆ ಆರೋಗ್ಯ ಹಾಳುಮಾಡಬಹುದು. ಇದು ವಾಂತಿ, ಕಿರಿಕಿರಿ, ವಾಕರಿಕೆ ಮತ್ತು ಅಸಿಡಿಟಿ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಎರಡೂ ವಿಷಯಗಳನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೆ.

Related Articles

Leave a Reply

Your email address will not be published. Required fields are marked *

Back to top button