ಗುಜರಾತ್ ನಲ್ಲಿ ಬಿಜೆಪಿಗೆ (143) ಐಲವ್ ಯೂ.! ಹಿಮಾಚಲ ಪ್ರದೇಶದಲ್ಲಿ ಕೈಗೆ (33) ಲವ್ ಯೂ..?
ಗುಜರಾತ್ ಬಿಜೆಪಿಗೆ ಜನ ಹೇಳಿದ್ರೂ 143, ಹಿಮಾಚಲಪ್ರದೇಶದಲ್ಲಿ 33
ಗುಜರಾತ್ ಬಿಜೆಪಿಗೆ ಜನ ಹೇಳಿದ್ರೂ 143, ಹಿಮಾಚಲಪ್ರದೇಶದಲ್ಲಿ 33
ಗುಜರಾತ್ ನಲ್ಲಿ ಬಿಜೆಪಿಗೆ ಐಲವ್ ಯೂ, ಹಿಮಾಚಲ ಪ್ರದೇಶದಲ್ಲಿ ಕೈಗೆ ಲವ್ ಯೂ..?
ವಿವಿ ಡೆಸ್ಕ್ಃ ಮೊನ್ನೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣಾ ಫಲಿತಾಂಶ ಇಂದ ಹೊರ ಬೀಳಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದೆ.
ಗುಜರಾತ್ ನಲ್ಲಿ ಬಿಜೆಪಿಗೆ ಮತದಾರರು ಐಲವ್ ಯೂ ಹೇಳಿದರೆ, ಹಿಮಾಚಲಪ್ರದೇಶದಲ್ಲಿ ಕೈಗೆ ಲವ್ ಯೂ ಹೇಳಿದಂತೆ ಕಾಣುತ್ತಿದೆ.
ಸದ್ಯದ ಮತ ಎಣಿಕೆ ಫಲಿತಾಂಶ ನೋಡಿದೆ ಗುಜರಾತ್ ನಲ್ಲಿ 143 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಇದೆ. ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಆಪ್ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎನ್ನಬಹುದು.
ಈ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಬಹುತೇಕ ಬಿಜೆಪಿ ಮತ್ತೇ ಆಡಳಿತಕ್ಕೆ ಬರುವ ಎಲ್ಲಾ ಲಕ್ಷಣಗಳಿವೆ. 143 ಮುನ್ನಡೆ ಕಾಯ್ದುಕೊಂಡ ಸಂಖ್ಯೆಯೇ ಹೇಳುವಂತೆ ಮತದಾರರು I love you ಬಿಜೆಪಿ, ಮೋದಿ ಎಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಆದರೆ ಹಿಮಾಚಲಪ್ರದೇಶದಲ್ಲಿ ಕೈಗೆ 33 ಕ್ಷೇತ್ರ ಮುನ್ಮಡೆ ಸಾಧಿಸಿದ್ದು, ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಇಲ್ಲಿ 33 ಕ್ಷೇತ್ರ ಮುನ್ನಡೆ ಕಾಯ್ದುಕೊಂಡ ಕೈಗೆ ಮತದಾರರು love you ಅಂದಿರಬಹುದು ಎಂದು ಪ್ರಸ್ತುತ ರಾಜಕೀಯ ಲೆಕ್ಕಾಚಾರ ಮೂಲಕ ವಿಶ್ಲೇಷಣೆ ಮಾಡಬಹುದಾಗಿದೆ. ಯಾವುದಕ್ಕೂ ಸಂಪೂರ್ಣ ಫಲಿತಾಂಶದ ನಂತರವೇ ಮತದಾರರ ಒಲವಿನ ಮಾಲೆ ಯಾರ ಪಾಲಾಗಲಿದೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.
– ಮಲ್ಲಿಕಾರ್ಜುನ ಮುದನೂರ