ಜಾರ್ಜ್ ಹಿಂದೆ ಕೋರ್ಟ್ ಸೂಚನೆ ನಂತರ ರಾಜೀನಾಮೆ ನೀಡಿದ್ರು – ಕಟೀಲ್
ಸಂತೋಷ ಪ್ರಕರಣದ ಹಿಂದೆ ಕಾಂಗ್ರೆಸ್ ಪ್ರೇರಣೆ ಇದೆ - ಕಟೀಲ್ ಹೇಳಿಕೆ
ಸಂತೋಷ ಪ್ರಕರಣದ ಹಿಂದೆ ಕಾಂಗ್ರೆಸ್ ಪ್ರೇರಣೆ ಇದೆ – ಕಟೀಲ್ ಹೇಳಿಕೆ
ಜಾರ್ಜ್ ಹಿಂದೆ ಕೋರ್ಟ್ ಸೂಚನೆ ನಂತರ ರಾಜೀನಾಮೆ ನೀಡಿದ್ರು – ಕಟೀಲ್
ಹೊಸಪೇಟೆಃ ಸಂತೋಷ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕರ ಪ್ರೇರಣೆ ಇದೆ ಕೈವಾಡವಿದೆ. ತನಿಖೆ ನಂತರ ಎಲ್ಲವು ಬಯಲಾಗಲಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲು ವಾಗ್ವಾಳಿ ನಡೆಸಿದರು.
ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸ್ವತಃ ಗಣಪತಿ ಅವರು ವಿಡಿಯೋ ಮಾಡಿ ಗೃಹಸಚಿವ ಜಾರ್ಜ್ ಹೆಸರೇಳಿದ್ದ ವಿಡಿಯೋ ಸಾಕ್ಷಿ ಇತ್ತು. ಎಲ್ಲ ಕಡೆ ವಿಡಿಯೋ ಹರಿದಾಡಿತ್ತು. ಆದರೂ ರಾಜೀನಾಮೆ ನೀಡಿರಲಿಲ್ಲ. ಕೊನೆಗೆ ಕೋರ್ಟ್ ಸೂಚನೆ ನೀಡಿದ ಮೇಲೆ ರಾಜೀನಾಮೆ ನೀಡಿದ್ದರು.
ಆದರೆ ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ ಇವತ್ತು. ಸಂತೋಷ ಪ್ರಕರಣದಲ್ಲಿ ಈಶ್ವರಪ್ಪನವರ ವಿರುದ್ಧ ಯಾವುದೇ ಅಂಥಹ ಸಾಕ್ಷಿಆಧಾರಗಳಿಲ್ಲ. ಆದರೂ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿದ್ದಾರೆ.
ಇನ್ನೂ ಸಿದ್ರಾಮಯ್ಯ ಸಿಎಂ ಇದ್ದಾಗ 23 ಕೊಲೆಗಳು ನಡೆದವು ಶರತ್ ಕೊಲೆಯಲ್ಲಿ ಏನೇನಾಯಿತು ತಮಗೆಲ್ಲ ಗೊತ್ತಿದೆ. ಕಾಂಗ್ರೆಸ್ ಎಲ್ಲಾ ನಾಯಕರು ಜೈಲಲ್ಲಿ ಇರಬೇಕಿತ್ತು ಎಂದು ದೂರಿದರು.
ಸಂತೋಷ ಪ್ರಕರಣದ ಹಿಂದೆ ಕಾಂಗ್ರೆಸ್ ಪ್ರೇರಣೆ, ಕೈವಾಡವಿದೆ. ಹಾಗಿದ್ರೆ ಕಾಂಗ್ರೆಸ್ ನಾಯಕರು ಆತನನ್ನ ದೆಹಲಿಗೆ ಕರೆದುಕೊಂಡು ಹೋಗಿ ಸುದ್ದಿಗೋಷ್ಠಿ ಯಾಕೆ ಮಾಡ್ತಿದ್ದರು.ಇಲ್ಲಿ ಸದನದಲ್ಲಿ ಪ್ರಶ್ನೆ ಮಾಡಬಹುದಿತ್ತು ಯಾಕೆ ಮಾಡಲಿಲ್ಲ. ಈ ಪ್ರಕರಣದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ. ಸಂತೋಷ ಸಾವಿಗೆ ಕಾಂಗ್ರೆಸ್ ಕಾರಣ.
– ನಳೀನ್ ಕುಮಾರ ಕಟೀಲು. ಬಿಜೆಪಿ ರಾಜ್ಯಧ್ಯಕ್ಷ.